ದುಬೈನಲ್ಲಿದ್ದ ಪತ್ನಿ ವಾಪಸ್ ಭಾರತಕ್ಕೆ ಬರಲು ನಿರಾರಿಸಿದಳು ಎಂದು ಮೂವರು ಮಕ್ಕಳಿಗೆ ವಿಷ ನೀಡಿ ತಾನೂ ಆತ್ಮಹತ್ಯೆಗೆ ಶರಣಾದ ಪತಿ! | JANATA NEWS

ತುಮಕೂರು : ದುಬೈನಲ್ಲಿದ್ದ ಪತ್ನಿ ವಾಪಸ್ ಭಾರತಕ್ಕೆ ಬರಲು ನಿರಾರಿಸಿದಳು ಎಂದು ಮೂವರು ಮಕ್ಕಳಿಗೆ ವಿಷ ನೀಡಿ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ತುಮಕೂರು ನಗರದ ಪಿ.ಹೆಚ್.ಕಾಲೋನಿಯಲ್ಲಿ ನಡೆದಿದೆ.
ತುಮಕೂರು ನಗರದ ಪಿ. ಎಚ್. ಕಾಲೋನಿಯ ನಿವಾಸಿ ಸಮೀವುಲ್ಲಾ ಮೃತ ದುರ್ದೈವಿ. ಸೌದಿ ಅರೆಬಿಯಾದಲ್ಲಿ ಮನೆ ಕೆಲಸ ಮಾಡಿಕೊಂಡು ಪತ್ನಿ ಸಾಹೇರಾ ಭಾನು ಸೌದಿಯಿಂದ ವಾಪಸ್ ಬರಲ್ಲ ಅಂದಿದ್ದಕ್ಕೆ ಪತಿ ಬೇಸತ್ತು ಆತ್ಮಹತ್ಯೆ ಶರಣಾಗಿದ್ದಾನೆ ಎನ್ನಲಾಗಿದೆ.
ದುಬೈನಲ್ಲಿ ಸಿರಿವಂತರ ಮನೆ ಕೆಲಸಕ್ಕೆಂದು ಹೋಗಿದ್ದ ಪತ್ನಿ ಸಾಹೆರಾ ಬಾನು, ವಾಪಸ್ ಭಾರತಕ್ಕೆ ಬರಲು ನಿರಾಕರಿಸಿದ್ದಳು. ಮೋಜು ಮಸ್ತಿ ಮಾಡುತ್ತ ಪತಿಗೆ ವಿಡಿಯೋ ಕಾಲ್ ಮಾಡಿ ರೇಗಿಸುತ್ತಿದ್ದಳು ಎನ್ನಲಾಗಿದೆ.
ಸಾಯಿವುದಕ್ಕೂ ಮುನ್ನ ಸಾಹೇರಾಗೆ ಪತಿ ಸಮೀವುಲ್ಲಾ ಮತ್ತು ಆಕೆಯ ಮಕ್ಕಳು ವಿಡಿಯೋ ಕಾಲ್ ಮಾಡಿ ಸೌದಿಯಿಂದ ಬಂದು ಬಿಡುವಂತೆ ಗೋಗರೆದಿದ್ದಾರೆ. ಮಕ್ಕಳ ಕಣ್ಣೀರಿಗೂ ಕರಗದ ಸಾಹೇರಾ ಭಾನು ಸೌದಿಯಿಂದ ವಾಪಸ್ ಬರಲ್ಲ ಎಂದಿದ್ದಾಳೆ ಎನ್ನಲಾಗಿದೆ
ಇದರಿಂದಾಗಿ ಬೇಸತ್ತ ಪತಿ, ಹಲವು ಬಾರಿ ಕರೆದರೂ ಪತ್ನಿ ವಾಪಸ್ ಬರುತ್ತಿಲ್ಲವೆಂದು ನೊಂದು ತನ್ನ ಮೂವರು ಮಕ್ಕಳೊಂದಿಗೆ ವಿಷ ಸೇವಿಸಿದ್ದಾನೆ. ವಿಷ ಕುಡಿದ ಸಮೀವುಲ್ಲಾ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ್ದಾನೆ. ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ. ಆಸ್ಪತ್ರೆಯಲ್ಲಿ ಮೂವರು ಮಕ್ಕಳು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.