Thu,Sep29,2022
ಕನ್ನಡ / English

ತನಗೆ ತಾನೇ ಕಲ್ಲು ಗಣಿಗಾರಿಕೆ ಗುತ್ತಿಗೆ ಮಂಜೂರು : ಜಾರ್ಖಂಡ್ ಸಿಎಂ ಸೊರೆನ್ ಶಾಸಕ ಸ್ಥಾನದಿಂದ ಅನರ್ಹ? | JANATA NEWS

25 Aug 2022
583

ರಾಂಚಿ : ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ) ನೇತೃತ್ವದ ಜಾರ್ಖಂಡ್ ಆಡಳಿತಕ್ಕೆ ಭಾರಿ ಹಿನ್ನಡೆಯಾಗಿ, ಚುನಾವಣಾ ಆಯೋಗವು(ಇಸಿ) ಗುರುವಾರ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಶಿಫಾರಸು ಮಾಡಿದೆ. ಇಸಿ ತನ್ನ ಅಭಿಪ್ರಾಯವನ್ನು ಗುರುವಾರ ರಾಜ್ಯಪಾಲರಿಗೆ ಕಳುಹಿಸಿದೆ.

ಚುನಾವಣಾ ಆಯೋಗದ(ಇಸಿ) ಶಿಫಾರಸ್ಸು ಜನತಾ ಪ್ರಾತಿನಿಧ್ಯ ಕಾಯಿದೆಯ ಸೆಕ್ಷನ್ 9A ಅಡಿಯಲ್ಲಿ ಬರುತ್ತದೆ, ಇದು ಚುನಾಯಿತ ಪ್ರತಿನಿಧಿಗಳು "ಸರಕುಗಳ ಪೂರೈಕೆ" ಅಥವಾ "ಯಾವುದೇ ಕಾರ್ಯಗಳನ್ನು ಕೈಗೊಳ್ಳಲು" ಸರ್ಕಾರದೊಂದಿಗೆ ಯಾವುದೇ ಒಪ್ಪಂದಕ್ಕೆ ಪ್ರವೇಶಿಸುವುದನ್ನು ನಿಷೇಧಿಸುತ್ತದೆ.

ಮೂಲಗಳ ಪ್ರಕಾರ, ತನಗೆ ಕಲ್ಲು ಗಣಿಗಾರಿಕೆ ಗುತ್ತಿಗೆಯನ್ನು ಮಂಜೂರು ಮಾಡಲು ತನ್ನ ಸ್ಥಾನವನ್ನು ದುರುಪಯೋಗಪಡಿಸಿಕೊಂಡ ಸೋರೆನ್ ತಪ್ಪಿತಸ್ಥರೆಂದು ಇಸಿ ಕಂಡುಹಿಡಿದಿದೆ. ಮುಖ್ಯಮಂತ್ರಿಗಳು ರಾಜ್ಯದ ಗಣಿಗಾರಿಕೆ ಇಲಾಖೆಯ ವಸ್ತುವಾರಿಯನ್ನು ಸಹ ಹೊಂದಿದ್ದಾರೆ.

ಇಸಿ ಶಿಫಾರಸುಗಳ ನಂತರ, ಫಲಿತಾಂಶವು ಪ್ರತಿಕೂಲವಾಗಿದ್ದರೂ ಸಹ ರಾಜ್ಯ ಸರ್ಕಾರದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು, ಆಡಳಿತಾರೂಢ ಜೆಎಂಎಂ ಬಲವಾದ ಹೇಳಿಕೆಯನ್ನು ನೀಡಿದೆ. ಸೊರೆನ್ ವಿರುದ್ಧ ಬಿಜೆಪಿಯಿಂದ ದೂರನ್ನು ಉಲ್ಲೇಖಿಸಿರುವ ರಾಜ್ಯಪಾಲರು, ಈ ವಿಷಯದ ಬಗ್ಗೆ ತಮ್ಮ ಆದೇಶವನ್ನು ಅಧಿಕೃತವಾಗಿ ತಿಳಿಸಬೇಕಾಗಿದೆ.

RELATED TOPICS:
English summary : Granting stone mining contract to himself: Jharkhand CM Soren disqualified from MLA post?

ಆರ್ ಎಸ್‌ಎಸ್ ಮುಖಂಡನ ಕಾರಿನ ಮೇಲೆ KILL YOU ಬರಹ ಪ್ರಕರಣ: ಇಬ್ಬರ ಬಂಧನ
ಆರ್ ಎಸ್‌ಎಸ್ ಮುಖಂಡನ ಕಾರಿನ ಮೇಲೆ KILL YOU ಬರಹ ಪ್ರಕರಣ: ಇಬ್ಬರ ಬಂಧನ
ಕಾಂಗ್ರೆಸ್ ಗೆ ಪಿಎಫ್‌ಐ ನಿಷೇಧ ಒಳಗೊಳಗೆ ಕುದಿಯುತ್ತಿದೆ, ವಿರೋಧಕ್ಕೆ ಸಾಧ್ಯವಾಗದೆ ಆರ್ ಎಸ್‌ಎಸ್ ನಿಷೇಧಕ್ಕೆ ಒತ್ತಾಯಿಸುತ್ತಿದ್ದಾರೆ
ಕಾಂಗ್ರೆಸ್ ಗೆ ಪಿಎಫ್‌ಐ ನಿಷೇಧ ಒಳಗೊಳಗೆ ಕುದಿಯುತ್ತಿದೆ, ವಿರೋಧಕ್ಕೆ ಸಾಧ್ಯವಾಗದೆ ಆರ್ ಎಸ್‌ಎಸ್ ನಿಷೇಧಕ್ಕೆ ಒತ್ತಾಯಿಸುತ್ತಿದ್ದಾರೆ
ಸಿದ್ದರಾಮಯ್ಯಗೆ ತಲೆಕೆಟ್ಟಿದೆ,  ಆರ್ ಎಸ್ ಎಸ್ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಬಿಡಬೇಕು!
ಸಿದ್ದರಾಮಯ್ಯಗೆ ತಲೆಕೆಟ್ಟಿದೆ, ಆರ್ ಎಸ್ ಎಸ್ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಬಿಡಬೇಕು!
ಪಿಎಫ್‌ಐ ಪರವಾಗಿ ಯಾರೇ ಧ್ವನಿ ಎತ್ತಿದರೂ ಕಾನೂನು ಕ್ರಮ: ಆರಗ ಜ್ಞಾನೇಂದ್ರ
ಪಿಎಫ್‌ಐ ಪರವಾಗಿ ಯಾರೇ ಧ್ವನಿ ಎತ್ತಿದರೂ ಕಾನೂನು ಕ್ರಮ: ಆರಗ ಜ್ಞಾನೇಂದ್ರ
ಕಂದಾಯ ನಿವೇಶನಗಳನ್ನು ಭೂ ಪರಿವರ್ತನೆ ವ್ಯಾಪ್ತಿಗೆ ತರಲು ಸರ್ಕಾರ ಚಿಂತನೆ
ಕಂದಾಯ ನಿವೇಶನಗಳನ್ನು ಭೂ ಪರಿವರ್ತನೆ ವ್ಯಾಪ್ತಿಗೆ ತರಲು ಸರ್ಕಾರ ಚಿಂತನೆ
ಸಿಬಿಐ ರೇಡ್: ಗೇಟ್​ಗೆ ಬೀಗ, ಮನೆಯ ಹೊರಾಂಗಣದಲ್ಲಿ ಪತ್ರಿಕೆ ಓದುತ್ತಾ ಕುಳಿತ ಡಿಕೆ ಶಿವಕುಮಾರ್ ತಾಯಿ!
ಸಿಬಿಐ ರೇಡ್: ಗೇಟ್​ಗೆ ಬೀಗ, ಮನೆಯ ಹೊರಾಂಗಣದಲ್ಲಿ ಪತ್ರಿಕೆ ಓದುತ್ತಾ ಕುಳಿತ ಡಿಕೆ ಶಿವಕುಮಾರ್ ತಾಯಿ!
ಭಾರತ್ ಜೋಡೋ ಯಾತ್ರೆಯ ಕಾಂಗ್ರೆಸ್ ಫ್ಲೆಕ್ಸ್​ಗಳಿಗೆ ಹರಿದ ಕಿಡಿಗೇಡಿಗಳು, ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ
ಭಾರತ್ ಜೋಡೋ ಯಾತ್ರೆಯ ಕಾಂಗ್ರೆಸ್ ಫ್ಲೆಕ್ಸ್​ಗಳಿಗೆ ಹರಿದ ಕಿಡಿಗೇಡಿಗಳು, ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ
ಎಸ್​ಡಿಪಿಐ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ
ಎಸ್​ಡಿಪಿಐ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ
ಜಮ್ಮು ಮತ್ತು ಕಾಶ್ಮೀರದಲ್ಲಿ 2 ಸ್ಪೋಟ : ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್‌ನಲ್ಲಿ ಸ್ಪೋಟ
ಜಮ್ಮು ಮತ್ತು ಕಾಶ್ಮೀರದಲ್ಲಿ 2 ಸ್ಪೋಟ : ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್‌ನಲ್ಲಿ ಸ್ಪೋಟ
ನೂತನ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರನ್ನಾಗಿ(ಸಿಡಿಎಸ್) ಲೆ. ಜನರಲ್ ಅನಿಲ್ ಚೌಹಾಣ್ ನೇಮಕ
ನೂತನ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರನ್ನಾಗಿ(ಸಿಡಿಎಸ್) ಲೆ. ಜನರಲ್ ಅನಿಲ್ ಚೌಹಾಣ್ ನೇಮಕ
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ನಿಷೇಧಿಸಿದ ಕೇಂದ್ರ ಸರ್ಕಾರ
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ನಿಷೇಧಿಸಿದ ಕೇಂದ್ರ ಸರ್ಕಾರ
ಅಮೇರಿಕ ವೀಸಾ ವಿಳಂಬದ ಕುರಿತು ಪ್ರಸ್ತಾಪಿಸಿದ ವಿದೇಶಾಂಗ ಸಚಿವ : ಶೀಘ್ರದಲ್ಲೇ ಸರಿಪಡಿಸುವ ಆಶ್ವಾಸನೆ ನೀಡಿದ ಅಮೇರಿಕ
ಅಮೇರಿಕ ವೀಸಾ ವಿಳಂಬದ ಕುರಿತು ಪ್ರಸ್ತಾಪಿಸಿದ ವಿದೇಶಾಂಗ ಸಚಿವ : ಶೀಘ್ರದಲ್ಲೇ ಸರಿಪಡಿಸುವ ಆಶ್ವಾಸನೆ ನೀಡಿದ ಅಮೇರಿಕ

ನ್ಯೂಸ್ MORE NEWS...