ನಿಪೆಟ್ಟಿಗೆ ಶಸ್ತ್ರಚಿಕಿತ್ಸೆ ವೇಳೆ ಬಾಲಕಿ ಸಾವು, ವೈದ್ಯರ ನಿರ್ಲಕ್ಷ್ಯದ ಆರೋಪ | JANATA NEWS

ರಾಯಚೂರು : ಧ್ವನಿಪೆಟ್ಟಿಗೆ ಶಸ್ತ್ರಚಿಕಿತ್ಸೆ ವೇಳೆ ಬಾಲಕಿ ಸಾವನ್ನಪ್ಪಿದ ಘಟನೆ ರಾಯಚೂರು ನಗರದ ಡಾ.ಪಠಾಣ್ ಇಎನ್‍ಟಿ ನರ್ಸಿಂಗ್ ಹೋಂನಲ್ಲಿ ನಡೆದಿದೆ.
ವೈದ್ಯರ ನಿರ್ಲಕ್ಷ್ಯದಿಂದ ಸಾಯಿಕೀರ್ತನಾ ಎಂಬ 6 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಲಾಗಿದೆ.
ಮೃತ ದುರ್ದೈವಿ ಬಾಲಕಿಯನ್ನು ಸಾಯಿಕೀರ್ತನಾ (6) ಎಂದು ಗುರುತಿಸಲಾಗಿದೆ. ತಂದೆ ಆಂಜಿ, ತಾಯಿ ಜ್ಯೋತಿ ದಂಪತಿ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಸಾಯಿಕೀರ್ತನಾಗೆ ಮಾತು ಬಾರದಿದ್ದರಿಂದ ಕಳೆದ ವರ್ಷ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಪುನಃ ಧ್ವನಿ ಹೋಗಿದ್ದ ಹಿನ್ನೆಲೆ ಮತ್ತೆ ಶಸ್ತ್ರಚಿಕಿತ್ಸೆ ಮಾಡಲು ಮುಂದಾಗಿದ್ದರು. ಆದರೆ ಶಸ್ತ್ರಚಿಕಿತ್ಸೆ ವೇಳೆ ಬಾಲಕಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡು ಮೃತಪಟ್ಟಿದ್ದಾರೆ.
ಇದೀಗ ಡಾ. ಪಠಾಣ್ ENT ನರ್ಸಿಂಗ್ ಹೋಮ್ ವಿರುದ್ಧ ಮೃತ ಸಾಯಿಕೀರ್ತನಾ ಸಂಬಂಧಿಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.