ಮೇಲ್ಸೇತುವೆ ಮೇಲೆ ಮಳೆ ನೀರು: ಬಿಬಿಎಂಪಿ ಸರಿಪಡಿಸಿ, ಫ್ಲೈಓವರ್ ಅಲ್ಲ ಎಂದ ನೆಟ್ಟಿಗರು | JANATA NEWS

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ಬಹುತೇಕ ಫ್ಲೈಓವರ್‌ಗಳು ಮಳೆ ನೀರಿನಿಂದ ಬಹುತೇಕ ಕಡೆ ಜಲವೃತ ಗೊಂಡಿದ್ದು, ಇದರಿಂದ ಜನರು ವಾಹನ ಚಲಾಯಿಸಲು ಪರದಾಡುವಂತಾಗಿದೆ.
ಫ್ಲೈಓವರ್‌ಗಳ ಕಳಪೆ ನಿರ್ವಹಣೆಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವಿರುದ್ಧ ನೆಟ್ಟಿಗರು ಅಸಮಾಧಾನ ವ್ಯಕ್ತ ಪಡಿಸಿದ್ದು, ಹಿಡಿ ಶಾಪ ಹಾಕಿದ್ದಾರೆ. ಇನ್ನೂ ಕೆಲವರು 40% ಕಮಿಷನ್ ಕುರಿತು ಪೋಸ್ಟ್ ಕೂಡ ಹಾಕಿದ್ದಾರೆ.
ಸಿಟಿ ಫ್ಲೈಓವರ್ ಕುರಿತು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ, "ಇದು ಇಂದು ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಆಗಿದೆ. ಯಾರಾದರೂ ನಿಜವಾಗಿಯೂ ಬಿಬಿಎಂಪಿಯನ್ನು ಸರಿಪಡಿಸಬೇಕಾಗಿದೆ. ಫ್ಲೈಓವರ್ ಅಲ್ಲ." ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊಗಳಲ್ಲಿ ಒಂದು. ಮೇಲ್ಸೇತುವೆ ಮೇಲೆ ಮಳೆ ನೀರು ನಿಂತಿದ್ದು, ಜನರು ಒಂದೇ ಪಥದಲ್ಲಿ ವಾಹನ ಚಲಾಯಿಸಲು ಹರಸಾಹಸ ಪಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
this is electronic city flyover today. someone needs to really fix bbmp. not the flyover. pic.twitter.com/hdhodNlGnJ
— Srik (@geeksrik) August 29, 2022
Unexpected rain in Bengaluru: water logging in KIA elevated flyover. Traffic police clear the blockage and make way for motorists. @DeccanHerald @nkaggere @BlrCityPolice @blrcitytraffic @NammaBengaluroo pic.twitter.com/AmVQLronHP
— Chaithanya (@ChaithanyaSwamy) March 20, 2020
One rain, many rivers.
— Renjith Thomas (@TowardsLiberti) May 17, 2022
Traffic at 10.45 PM on Electronic City flyover, Bengaluru! pic.twitter.com/YiU59PcOb6