ಡಿಸಿಪಿ ಕಚೇರಿ ಬಳಿ ಮರದ ಕೊಂಬೆ ಬಿದ್ದು ಬೆಂಗಳೂರು ದಕ್ಷಿಣ ಡಿಸಿಪಿ ಕಾರು ಜಖಂ! | JANATA NEWS

ಬೆಂಗಳೂರು : ಮರದ ಕೊಂಬೆ ಬಿದ್ದು ಬೆಂಗಳೂರು ದಕ್ಷಿಣ ಡಿಸಿಪಿ ಕಾರು ಜಖಂಗೊಂಡಿರುವ ಘಟನೆ ಜಯನಗರದ ದಕ್ಷಿಣ ವಿಭಾಗ ಡಿಸಿಪಿ ಕಚೇರಿ ಬಳಿ ನಡೆದಿದೆ.
ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣ ಕಾಂತ್ ಅವರು ಇನ್ನೋವಾ ಕಾರಿನಿಂದ ಇಳಿದು ಕಚೇರಿಗೆ ತೆರಳಿದ 5 ನಿಮಿಷದ ಬಳಿಕ ಕೊಂಬೆ ಬಿದ್ದಿದೆ. ಆದರೆ ಕಾರು ಚಾಲಕ ಕಾರಿನಲ್ಲೇ ಇದ್ದರು. ಈ ವೇಳೆ ಕಾರು ಚಾಲಕನಿಗೆ ಫೋನ್ ಕರೆ ಬಂದ ಹಿನ್ನೆಲೆ ಇಳಿದು ಹೊರ ಬಂದು ಮಾತನಾಡುತ್ತಿದ್ದಾಗ ಘಟನೆ ನಡೆದಿದೆ. ಇದರಿಂದ ಚಾಲಕ ಪ್ರಾಣಾಪಯದಿಂದ ಪಾರಾಗಿದ್ದಾರೆ.
English summary :A branch of a tree fell near the DCP office and the Bangalore South DCPs car was damaged!