Thu,Sep29,2022
ಕನ್ನಡ / English

ಭೀಕರ ರಸ್ತೆ ಅಪಘಾತ: ದೇವರ ದರ್ಶನ ಮುಗಿಸಿ ವಾಪಸಾಗುತ್ತಿದ್ದ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವು, ಹಲವು ಮಂದಿ ಗಾಯ | JANATA NEWS

08 Sep 2022
558

ಕಾರವಾರ : ದೇವರ ದರ್ಶನ ಮುಗಿಸಿ ವಾಪಸ್​ ಆಗುತ್ತಿದ್ದ ಕಾರೊಂದು ಭೀಕರ ಅಪಘಾತಗೊಂಡು ಮೂವರು ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ಗೋವಾದ ರಾಷ್ಟ್ರೀಯ ಹೆದ್ದಾರಿ 66ರ ಕಾಣಕೋಣದ ತಾರಿ ಬಳಿ ನಡೆದಿದೆ.

ಹರೀಶ್ ಉಲ್ಲಾಸ ನಾಗೇಕರ್ (35), ಉಲ್ಲಾಸ ರಾಮ ನಾಗೇಕರ್ (60) ವೀಣಾ ಉಲ್ಲಾಸ ನಾಗೇಕರ್ (60) ಮೃತ ದುರ್ದೈವಿಗಳು. ಮೃತರು ಕಾರವಾರ ತಾಲೂಕಿನ ಮಾಜಾಳಿ ಮೂಲದವರಾಗಿದ್ದು, ಉಲ್ಲಾಸ್ ನಾಗೇಕರ್​​ ಕುಟುಂಬ ಸದ್ಯ ವಾಸ್ಕೋ ನಿವಾಸಿಗಳಾಗಿದ್ದಾರೆ.

ದುರ್ಘಟನೆಯಲ್ಲಿ 7 ಮಂದಿಗೆ ಗಂಭೀರ ಗಾಯಗಳಾಗಿವೆ. ವಾಸ್ಕೋದಿಂದ ಕಾರವಾರದ ಹಣಕೋಣದಲ್ಲಿರುವ ಸಾತೇರಿ ದೇವಿಯ ದರ್ಶನಕ್ಕೆ ಬಂದಿದ್ದರು. ದೇವಿ ದರ್ಶನ ಪಡೆದು ಬಳಿಕ ವಾಸ್ಕೋಗೆ ವಾಪಸ್​ ತೆರಳುತ್ತಿದ್ದರು. ಈ ವೇಳೆ ಗೋವಾದ ಕಾಣಕೋಣದ ಮನೋಹರ್ ಪರಿಕ್ಕರ್ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್​ನಲ್ಲಿ ಭೀಕರ ಅಪಘಾತ ಸಂಭವಿಸಿದೆ.

ಮಡ್ಗಾಂವ್​ನಿಂದ ಅತಿವೇಗದಲ್ಲಿ ಬಂದ ಕಾರೊಂದು ಡಿವೈಡರ್​ಗೆ ಡಿಕ್ಕಿ ಹೊಡೆದು ಬಲ ಭಾಗದಲ್ಲಿ ಬರುತ್ತಿದ್ದ ಉಲ್ಲಾಸ್ ಅವರ ಕುಟುಂಬವಿದ್ದ ಕಾರಿಗೆ ಎದುರಿನಿಂದ ಗುದ್ದಿದೆ. ಅಲ್ಲದೇ, ಅಲ್ಲೇ ಚಲಿಸುತ್ತಿದ್ದ ಸ್ಕೂಟರ್​ವೊಂದಕ್ಕೂ ಡಿಕ್ಕಿಯಾಗಿದೆ.

ಈ ಭೀಕರ ಅಪಘಾತದಲ್ಲಿ ಉಲ್ಲಾಸ ನಾಗೇಕರ್, ಅವರ ಪತ್ನಿ ವೀಣಾ ನಾಗೇಕರ್ ಹಾಗೂ ಅವರ ಪುತ್ರ ಹರೀಶ್ ನಾಗೇಕರ್ ಮೃತಪಟ್ಟಿದ್ದು, ಉಳಿದ ಕುಟುಂಬ ಸದಸ್ಯರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕಾಣಕೋಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತವಾಗಿದೆ.

RELATED TOPICS:
English summary :Terrible road accident: Three people from the same family who were returning after seeing God died on the spot, many were injured

ಆರ್ ಎಸ್‌ಎಸ್ ಮುಖಂಡನ ಕಾರಿನ ಮೇಲೆ KILL YOU ಬರಹ ಪ್ರಕರಣ: ಇಬ್ಬರ ಬಂಧನ
ಆರ್ ಎಸ್‌ಎಸ್ ಮುಖಂಡನ ಕಾರಿನ ಮೇಲೆ KILL YOU ಬರಹ ಪ್ರಕರಣ: ಇಬ್ಬರ ಬಂಧನ
ಕಾಂಗ್ರೆಸ್ ಗೆ ಪಿಎಫ್‌ಐ ನಿಷೇಧ ಒಳಗೊಳಗೆ ಕುದಿಯುತ್ತಿದೆ, ವಿರೋಧಕ್ಕೆ ಸಾಧ್ಯವಾಗದೆ ಆರ್ ಎಸ್‌ಎಸ್ ನಿಷೇಧಕ್ಕೆ ಒತ್ತಾಯಿಸುತ್ತಿದ್ದಾರೆ
ಕಾಂಗ್ರೆಸ್ ಗೆ ಪಿಎಫ್‌ಐ ನಿಷೇಧ ಒಳಗೊಳಗೆ ಕುದಿಯುತ್ತಿದೆ, ವಿರೋಧಕ್ಕೆ ಸಾಧ್ಯವಾಗದೆ ಆರ್ ಎಸ್‌ಎಸ್ ನಿಷೇಧಕ್ಕೆ ಒತ್ತಾಯಿಸುತ್ತಿದ್ದಾರೆ
ಸಿದ್ದರಾಮಯ್ಯಗೆ ತಲೆಕೆಟ್ಟಿದೆ,  ಆರ್ ಎಸ್ ಎಸ್ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಬಿಡಬೇಕು!
ಸಿದ್ದರಾಮಯ್ಯಗೆ ತಲೆಕೆಟ್ಟಿದೆ, ಆರ್ ಎಸ್ ಎಸ್ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಬಿಡಬೇಕು!
ಪಿಎಫ್‌ಐ ಪರವಾಗಿ ಯಾರೇ ಧ್ವನಿ ಎತ್ತಿದರೂ ಕಾನೂನು ಕ್ರಮ: ಆರಗ ಜ್ಞಾನೇಂದ್ರ
ಪಿಎಫ್‌ಐ ಪರವಾಗಿ ಯಾರೇ ಧ್ವನಿ ಎತ್ತಿದರೂ ಕಾನೂನು ಕ್ರಮ: ಆರಗ ಜ್ಞಾನೇಂದ್ರ
ಕಂದಾಯ ನಿವೇಶನಗಳನ್ನು ಭೂ ಪರಿವರ್ತನೆ ವ್ಯಾಪ್ತಿಗೆ ತರಲು ಸರ್ಕಾರ ಚಿಂತನೆ
ಕಂದಾಯ ನಿವೇಶನಗಳನ್ನು ಭೂ ಪರಿವರ್ತನೆ ವ್ಯಾಪ್ತಿಗೆ ತರಲು ಸರ್ಕಾರ ಚಿಂತನೆ
ಸಿಬಿಐ ರೇಡ್: ಗೇಟ್​ಗೆ ಬೀಗ, ಮನೆಯ ಹೊರಾಂಗಣದಲ್ಲಿ ಪತ್ರಿಕೆ ಓದುತ್ತಾ ಕುಳಿತ ಡಿಕೆ ಶಿವಕುಮಾರ್ ತಾಯಿ!
ಸಿಬಿಐ ರೇಡ್: ಗೇಟ್​ಗೆ ಬೀಗ, ಮನೆಯ ಹೊರಾಂಗಣದಲ್ಲಿ ಪತ್ರಿಕೆ ಓದುತ್ತಾ ಕುಳಿತ ಡಿಕೆ ಶಿವಕುಮಾರ್ ತಾಯಿ!
ಭಾರತ್ ಜೋಡೋ ಯಾತ್ರೆಯ ಕಾಂಗ್ರೆಸ್ ಫ್ಲೆಕ್ಸ್​ಗಳಿಗೆ ಹರಿದ ಕಿಡಿಗೇಡಿಗಳು, ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ
ಭಾರತ್ ಜೋಡೋ ಯಾತ್ರೆಯ ಕಾಂಗ್ರೆಸ್ ಫ್ಲೆಕ್ಸ್​ಗಳಿಗೆ ಹರಿದ ಕಿಡಿಗೇಡಿಗಳು, ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ
ಎಸ್​ಡಿಪಿಐ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ
ಎಸ್​ಡಿಪಿಐ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ
ಜಮ್ಮು ಮತ್ತು ಕಾಶ್ಮೀರದಲ್ಲಿ 2 ಸ್ಪೋಟ : ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್‌ನಲ್ಲಿ ಸ್ಪೋಟ
ಜಮ್ಮು ಮತ್ತು ಕಾಶ್ಮೀರದಲ್ಲಿ 2 ಸ್ಪೋಟ : ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್‌ನಲ್ಲಿ ಸ್ಪೋಟ
ನೂತನ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರನ್ನಾಗಿ(ಸಿಡಿಎಸ್) ಲೆ. ಜನರಲ್ ಅನಿಲ್ ಚೌಹಾಣ್ ನೇಮಕ
ನೂತನ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರನ್ನಾಗಿ(ಸಿಡಿಎಸ್) ಲೆ. ಜನರಲ್ ಅನಿಲ್ ಚೌಹಾಣ್ ನೇಮಕ
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ನಿಷೇಧಿಸಿದ ಕೇಂದ್ರ ಸರ್ಕಾರ
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ನಿಷೇಧಿಸಿದ ಕೇಂದ್ರ ಸರ್ಕಾರ
ಅಮೇರಿಕ ವೀಸಾ ವಿಳಂಬದ ಕುರಿತು ಪ್ರಸ್ತಾಪಿಸಿದ ವಿದೇಶಾಂಗ ಸಚಿವ : ಶೀಘ್ರದಲ್ಲೇ ಸರಿಪಡಿಸುವ ಆಶ್ವಾಸನೆ ನೀಡಿದ ಅಮೇರಿಕ
ಅಮೇರಿಕ ವೀಸಾ ವಿಳಂಬದ ಕುರಿತು ಪ್ರಸ್ತಾಪಿಸಿದ ವಿದೇಶಾಂಗ ಸಚಿವ : ಶೀಘ್ರದಲ್ಲೇ ಸರಿಪಡಿಸುವ ಆಶ್ವಾಸನೆ ನೀಡಿದ ಅಮೇರಿಕ

ನ್ಯೂಸ್ MORE NEWS...