ರೋಗಿ ಪ್ರಾಣ ಉಳಿಸಲು 3 ಕೀ.ಮೀ ಓಡಿದ ವೈದ್ಯ ಗೋವಿಂದ್ ನಂದಕುಮಾರ್! | JANATA NEWS

ಬೆಂಗಳೂರು : ವೈದ್ಯರೊಬ್ಬರು ರೋಗಿಗೆ ಆಪರೇಷನ್ ಮಾಡಲು ಬರೋಬ್ಬರಿ ಮುಕ್ಕಾಲು ಗಂಟೆ ಓಡಿ ಆಸ್ಪತ್ರೆ ತಲುಪಿದ್ದಾರೆ.
ಡಾ. ಗೋವಿಂದ ನಂದಕುಮಾರ್. ಇವರು ನಗರದ ಪ್ರಸಿದ್ಧ ಆಸ್ಪತ್ರೆಯ ಗ್ಯಾಸ್ಟ್ರೋ ಎಂಟೆರೋಲಜಿ ತಜ್ಞ ವೈದ್ಯರು. ಮಣಿಪಾಲ್ ಆಸ್ಪತ್ರೆ ತಲುಪಲು ಇವರು ಆಗಸ್ಟ್ 30ರಂದು ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಆದರೆ, ಭಾರೀ ಮಳೆಯಿಂದ ನೀರು ನಿಂತ ಪರಿಣಾಮ ಸರ್ಜಾಪುರ - ಮಾರತ್ ಹಳ್ಳಿ ಬಳಿ ಟ್ರಾಫಿಕ್ ಜಾಮ್ ಇತ್ತು.
ಆಸ್ಪತ್ರೆಗೆ ಹೋಗುವ ಸಂದರ್ಭದಲ್ಲಿ ಅದಿನ್ನೂ 3 ಕಿಮೀ ದೂರ ಇರುವಾಗ ಕಿಮೀ ದೂರ ಇರುವಾಗ ಭಾರೀ ಟ್ರಾಫಿಕ್ ನಲ್ಲಿ ಸಿಲುಕಿಕೊಂಡರು. ಟ್ರಾಫಿಕ್ ಜಾಮ್‌ನಿಂದಾಗಿ ವೈದ್ಯರು ಆಸ್ಪತ್ರೆ ತಲುಪಲು ವಿಳಂಬವಾದರೆ ಬಹಳಷ್ಟು ರೋಗಿಗಳಿಗೆ ತೊಂದರೆ ಆಗುತ್ತಿತ್ತು. ಹೀಗಾಗಿ, ಇನ್ನು ತಡ ಮಾಡಿದರೆ ಕಷ್ಟ ಎಂದು ಅರಿತ ವೈದ್ಯರು ಟ್ರಾಫಿಕ್ ಜಾಮ್‌ನಿಂದ ಕೂಡಿದ್ದ ರಸ್ತೆಯಲ್ಲಿ ಕಾರಿನಿಂದ ಇಳಿದು ಓಡತೊಡಗಿದರು.
45 ನಿಮಿಷಗಳಲ್ಲಿ ಅವರು ಒಂದು ಶಸ್ತ್ರಚಿಕಿತ್ಸೆಯನ್ನು ನಡೆಸಬೇಕಿತ್ತು. ಹಾಗಾಗಿ ಅವರು ಕಾರಿನಿಂದ ಇಳಿದು ಹೀಗೆ ಓಡುತ್ತಾ ಹೋಗಿ ಆಸ್ಪತ್ರೆ ತಲುಪಿ ಆಪರೇಷನ್‌ಗಳನ್ನು ನಡೆಸಿದರು.
ವೈಧ್ಯರಿಗೆ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ