ಚಿತ್ರದುರ್ಗ ಮುರುಘಾ ಮಠದಿಂದ ಇಬ್ಬರು ಬಾಲಕರು ನಾಪತ್ತೆ | JANATA NEWS
ಚಿತ್ರದುರ್ಗ : ಚಿತ್ರದುರ್ಗ ಮುರುಘಾ ಮಠದ ಹಾಸ್ಟೆಲ್‌ನಿಂದ ಇಬ್ಬರು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ.
ಕಲಬುರಗಿಯ 11 ವರ್ಷದ ಹಾಗೂ ಕೊಪ್ಪಳದ 13 ವರ್ಷದ ಬಾಲಕ ಸೆ.8ರಂದು ನಾಪತ್ತೆಯಾಗಿದ್ದಾರೆ. ಮುರುಘಾ ಮಠದ SJM ಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದು, ಮಠದ ಜಯದೇವ ಹಾಸ್ಟೆಲ್ ನಲ್ಲಿದ್ದರು.
ಹಾಸ್ಟೆಲ್ ನಿಂದ ಶಾಲೆಗೆ ತೆರಳಿದ್ದ ಮಕ್ಕಳು ವಾಪಸ್ ಹಾಸ್ಟೆಲ್‌ಗೆ ಬಂದಿಲ್ಲ. ಸಂಜೆ ಹಾಸ್ಟೆಲ್ ಗೆ ಬಾರದ ಹಿನ್ನೆಲೆ ಮಕ್ಕಳ ಬಗ್ಗೆ ಸಿಬ್ಬಂದಿ ವಿಚಾರಿಸಿದ್ದಾರೆ. ಆ ದಿನ ಶಾಲೆಗೂ ಹೋಗಿಲ್ಲ ಎನ್ನುವುದು ತಿಳಿದುಬಂದಿದೆ.
ಮಕ್ಕಳು ಮನೆಗೂ ಬಂದಿಲ್ಲ ಎಂದು ಪೋಷಕರು ಹೇಳಿದ್ದಾರೆ. ಇದರಿಂದ ಪೋಷಕರ ಸೂಚನೆ ಮೇರೆಗೆ ಹಾಸ್ಟೆಲ್ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಮಕ್ಕಳ ಪತ್ತೆಗೆ ಪೊಲೀಸರು ಶೋಧ ನಡೆಸಿದ್ದಾರೆ.