ಇಡಿ ನೋಟಿಸ್ ಅಲ್ಲ, ಬಿಜೆಪಿ ಬೆದರಿಕೆ ಪತ್ರ- ಡಿಕೆಶಿ ಆಗ್ಲಿ, ಕಾಂಗ್ರೆಸ್ ಆಗ್ಲಿ ಹೆದರೋ ಪ್ರಶ್ನೆಯೇ ಇಲ್ಲ : ಡಿ.ಕೆ ಸುರೇಶ್ | JANATA NEWS

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಇಡಿ ನೋಟಿಸ್ ಜಾರಿ ಮಾಡಿದೆ. ನೋಟಿಸ್ ವಿಚಾರವಾಗಿ ಸಂಸದ ಡಿ.ಕೆ. ಸುರೇಶ್ ಪ್ರತಿಕ್ರಯೆ ನೀಡಿದ್ದಾರೆ. ಡಿ.ಕೆ ಶಿವಕುಮಾರ್‌ಗೆ ಕಳುಹಿಸಿರುವುದು ಇಡಿ ನೋಟಿಸ್ ಅಲ್ಲ, ಬಿಜೆಪಿ ಬೆದರಿಕೆ ಪತ್ರ, ಬಿಜೆಪಿ ಬೆದರಿಕೆ ಪತ್ರಕ್ಕೆ ಡಿ.ಕೆ. ಶಿವಕುಮಾರ್ ಆಗಲಿ ಕಾಂಗ್ರೆಸ್ ಆಗಲಿ ಹೆದರುವ ಪ್ರಶ್ನೆಯೇ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದು ಇಡಿ ನೋಟಿಸ್ ಅಲ್ಲ, ಬಿಜೆಪಿ ಬೆದರಿಕೆ ಪತ್ರ. ಬಿಜೆಪಿ ಬೆದರಿಕೆ ಪತ್ರಕ್ಕೆ ಡಿ.ಕೆ. ಶಿವಕುಮಾರ್ ಆಗಲಿ ಕಾಂಗ್ರೆಸ್ ಆಗಲಿ ಎದರುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿಗೆ ಟಾಂಗ್ ಕೊಟ್ಟರು.
ಅವರು ಏನೇ ಮಾಡಿದ್ರು ಅದನ್ನ ಎದುರಿಸಲು ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷ ತಯಾರಿದೆ. ಶಿವಕುಮಾರ್ ಅವರನ್ನ ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ಏನು ಮಾಡುತ್ತಾರೋ ಗೊತ್ತಿಲ್ಲ. ಆದ್ರೆ ಇದು ಬಿಜೆಪಿ ಪಕ್ಷದ ನೋಟಿಸ್ ಅಷ್ಟೇ ಎಂದು ಕಿಡಿಕಾರಿದರು.
ಇದೇ ವೇಳೆ, 75 ವರ್ಷಗಳಿಂದ ರಾಮನಗರ ಅಭಿವೃದ್ಧಿಯಾಗಿಲ್ಲ ಎಂಬ ಸಚಿವ ಅಶ್ವಥ್ ನಾರಾಯಣ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿಯಂತಹ ಕೊಳಕು ಹಾಗೂ ಭ್ರಷ್ಟ ರಾಜಕೀಯ 75 ವರ್ಷದಲ್ಲಿ ಇರಲಿಲ್ಲ. ನಾಡಕಚೇರಿ ಹಾಗೂ ತಹಶೀಲ್ದಾರ್ ಕಚೇರಿಯಲ್ಲಿ ಕೆಲಸ ಆಗಬೇಕು ಅಂದರೆ ಹಣ ಕೊಡಬೇಕು. ಪೊಲೀಸ್ ಠಾಣೆಯಲ್ಲಿ ಕೆಲಸ ಆಗಬೇಕಾದರೆ ಹಣ ಕೊಡಬೇಕು. ಯಾರಿಗಾದರೂ ಉದ್ಯೋಗ ಕೊಡಬೇಕಾದರೂ ಹಣ ಕೊಡಬೇಕು.
ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಹೀಗಾಗಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಆಡಳಿತ ಅವಧಿ ಬಗ್ಗೆ ತನಿಖೆ ಮಾಡುತ್ತೇವೆ ಅಂತಿದ್ದಾರೆ. ತನಿಖೆ ಮಾಡಿ ಅವರ ತಾಕತ್ತನ್ನು ಪ್ರದರ್ಶನ ಮಾಡಲಿ. ಬರೀ ಭಾಷಣದಲ್ಲಿ ತಾಕತ್ತು ಪ್ರದರ್ಶನ ಆಗುವುದು ಬೇಡ. ಅವರ ಬಳಿ ಆಧಾರ ಇದ್ದರೆ, ರಾಜ್ಯದ ಜನರ ಬಳಿ ಬಹಿರಂಗ ಪಡಿಸಲಿ. ಇವರ ಈ ಬೆದರಿಕೆಗೆ ಹೆದರುವಂತಹ ವ್ಯಕ್ತಿತ್ವ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಕಾಂಗ್ರೆಸ್‍ಗೆ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.