Thu,Sep29,2022
ಕನ್ನಡ / English

1952ರಲ್ಲಿ ಕಳಚಿಕೊಂಡಿದ್ದ ಜೀವವೈವಿಧ್ಯದ ಕೊಂಡಿ ಮರುಸ್ಥಾಪನೆ, ಕುನೋ ನ್ಯಾಷನಲ್ ಅರಣ್ಯಕ್ಕೆ ಬಿಡುಗಡೆ ಮಾಡಿದ ಪ್ರಧಾನಿ ಮೋದಿ | JANATA NEWS

17 Sep 2022
427

ಭೋಪಾಲ್​ : ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ತಮ್ಮ ಜನ್ಮದಿನದಂದು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದಿಂದ ವಿಮಾನದಲ್ಲಿ ತಂದ ಚೀತಾಗಳನ್ನು ಬಿಡುಗಡೆ ಮಾಡಿದರು.

ಫೆಡೋರಾ ಟೊಪ್ಪಿ ಧರಿಸಿದ ಪ್ರಧಾನಿ ಮೋದಿ, ವೃತ್ತಿಪರ ಕ್ಯಾಮೆರಾದೊಂದಿಗೆ ಬೆಕ್ಕಿನ ಜಾತಿಯ ಈ ವನ್ಯಜೀವಿಗಳ ಚಿತ್ರಗಳನ್ನು ಸೆರೆಹಿಡಿದರು. ಬಳಿಕ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿ, ದಶಕಗಳ ಬಳಿಕ ಇಂದು ಚೀತಾಗಳು ನಮ್ಮ ನೆಲಕ್ಕೆ ಮರಳಿವೆ. ಈ ಐತಿಹಾಸಿಕ ದಿನದಂದು ಎಲ್ಲ ಭಾರತೀಯರಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಮತ್ತು ನಮೀಬಿಯಾ ಸರ್ಕಾರಕ್ಕೂ ಧನ್ಯವಾದ ತಿಳಿಸುತ್ತೇನೆ. ನಮೀಬಿಯಾ ನೆರವು ಇಲ್ಲದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.

janata

ದೇಶದಿಂದ ಚೀತಾಗಳು ಅಳಿದು ಹೋಗಿವೆ ಎಂದು 1952ರಲ್ಲಿ ನಾವು ಘೋಷಣೆ ಮಾಡಿದ್ದು ದುರದೃಷ್ಟಕರ ಸಂಗತಿ. ಇದಾದ ಬಳಿಕವೂ ಹಲವು ದಶಕಗಳಿಂದ ಚೀತಾಗಳಿಗೆ ಪುನರ್ವಸತಿ ಕಲ್ಪಿಸಲು ಯಾವುದೇ ಅರ್ಥಪೂರ್ಣ ಪ್ರಯತ್ನಗಳು ನಡೆದಿರಲಿಲ್ಲ. ಆದರೆ, ನಾವಿಂದು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸುತ್ತಿರುವಾಗ, ದೇಶವು ಹೊಸ ಶಕ್ತಿಯೊಂದಿಗೆ ಚೀತಾಗಳನ್ನು ಪುನರ್ವಸತಿ ಮಾಡಲು ಪ್ರಾರಂಭಿಸಿದ್ದೇವೆ ಎಂದರು.

ಅಂತಾರಾಷ್ಟ್ರೀಯ ಮಾರ್ಗಸೂಚಿಗಳನ್ನು ಅನುಸರಿಸಿ, ಭಾರತವು ಈ ಚೀತಾಗಳನ್ನು ನೆಲೆಗೊಳಿಸಲು ತನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತಿದೆ. ನಮ್ಮ ಪ್ರಯತ್ನ ವಿಫಲವಾಗಲು ಬಿಡಬಾರದು ಎಂದು ಕರೆ ಕೊಟ್ಟರು.

ಈ ಚೀತಾಗಳನ್ನು ಉಪಗ್ರಹದ ಮೂಲಕ ಗಮನಿಸಲು ಎಲ್ಲ ಚೀತಾಗಳಿಗೂ ರೇಡಿಯೋ ಕಾಲರ್‌ಗಳನ್ನು ಅಳವಡಿಸಲಾಗಿದೆ. ಈ ಚೀತಾಗಳ ಪ್ರತಿ ನಿಮಿಷದ ಚಲನವಲನಗಳ ಮೇಲೆ ದಿನದ 24 ಗಂಟೆಯೂ ನಿಗಾ ವಹಿಸಲು ಇದಕ್ಕೆಂದೇ ಮೀಸಲಾದ ತಂಡವೊಂದು ಕೆಲಸ ಮಾಡಲಿದೆ.

ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡುಗಡೆಯಾದ ಚೀತಾಗಳನ್ನು ನೋಡಲು ದೇಶವಾಸಿಗಳು ತಾಳ್ಮೆ ತೋರಿಸಬೇಕು, ಕೆಲವು ತಿಂಗಳು ಕಾಯಬೇಕು. ಇಂದು ಈ ಚಿರತೆಗಳು ಅತಿಥಿಗಳಾಗಿ ಬಂದಿವೆ, ಅವರಿಗೆ ಈ ಪ್ರದೇಶದ ಬಗ್ಗೆ ತಿಳಿದಿಲ್ಲ.

ಈ ಚೀತಾಗಳು ಕುನೊ ರಾಷ್ಟ್ರೀಯ ಉದ್ಯಾನವನವನ್ನು ತಮ್ಮ ಮನೆಯನ್ನಾಗಿ ಮಾಡಿಕೊಳ್ಳಲು, ನಾವು ಈ ಚೀತಾಗಳಿಗೂ ಕೆಲವು ತಿಂಗಳುಗಳ ಸಮಯವನ್ನು ನೀಡಬೇಕಾಗಿದೆ.

ಅಂತಾರಾಷ್ಟ್ರೀಯ ಮಾರ್ಗಸೂಚಿಗಳನ್ನು ಅನುಸರಿಸಿ, ಭಾರತವು ಈ ಚಿರತೆಗಳನ್ನು ನೆಲೆಗೊಳಿಸಲು ತನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತಿದೆ. ನಮ್ಮ ಪ್ರಯತ್ನಗಳು ವಿಫಲವಾಗಲು ನಾವು ಬಿಡಬಾರದು.

ಮಧ್ಯಪ್ರದೇಶದ ಕುನೋ ಉದ್ಯಾನವನದಲ್ಲಿ ಎಂಟು ಚೀತಾಗಳು ಸೇರಿಕೊಂಡಂತಾಗಿದ್ದು, ಇದರಲ್ಲಿ ಐದು ಹೆಣ್ಣು, ಮೂರು ಗಂಡು ಚೀತಾಗಳಿವೆ. ದಕ್ಷಿಣ ಆಫ್ರಿಕಾದ ನಮೀಬಿಯಾದಿಂದ ಬಿ747 ಜಂಬೋ ಜೆಟ್ ವಿಮಾನದ ಮೂಲಕ ಎಂಟು ಚೀತಾಗಳನ್ನು ಭಾರತಕ್ಕೆ ತರಲಾಗಿತ್ತು. ಬರೋಬ್ಬರಿ 8,400 ಕಿಲೋ ಮೀಟರ್ ಪ್ರಯಾಣದ ಮೂಲಕ ಚೀತಾಗಳನ್ನು ಕರೆತರಲಾಗಿತ್ತು.

RELATED TOPICS:
English summary :Prime Minister Narendra Modi releases the cheetahs that were brought from Namibia this morning, at Kuno National Park in Madhya Pradesh.

ಆರ್ ಎಸ್‌ಎಸ್ ಮುಖಂಡನ ಕಾರಿನ ಮೇಲೆ KILL YOU ಬರಹ ಪ್ರಕರಣ: ಇಬ್ಬರ ಬಂಧನ
ಆರ್ ಎಸ್‌ಎಸ್ ಮುಖಂಡನ ಕಾರಿನ ಮೇಲೆ KILL YOU ಬರಹ ಪ್ರಕರಣ: ಇಬ್ಬರ ಬಂಧನ
ಕಾಂಗ್ರೆಸ್ ಗೆ ಪಿಎಫ್‌ಐ ನಿಷೇಧ ಒಳಗೊಳಗೆ ಕುದಿಯುತ್ತಿದೆ, ವಿರೋಧಕ್ಕೆ ಸಾಧ್ಯವಾಗದೆ ಆರ್ ಎಸ್‌ಎಸ್ ನಿಷೇಧಕ್ಕೆ ಒತ್ತಾಯಿಸುತ್ತಿದ್ದಾರೆ
ಕಾಂಗ್ರೆಸ್ ಗೆ ಪಿಎಫ್‌ಐ ನಿಷೇಧ ಒಳಗೊಳಗೆ ಕುದಿಯುತ್ತಿದೆ, ವಿರೋಧಕ್ಕೆ ಸಾಧ್ಯವಾಗದೆ ಆರ್ ಎಸ್‌ಎಸ್ ನಿಷೇಧಕ್ಕೆ ಒತ್ತಾಯಿಸುತ್ತಿದ್ದಾರೆ
ಸಿದ್ದರಾಮಯ್ಯಗೆ ತಲೆಕೆಟ್ಟಿದೆ,  ಆರ್ ಎಸ್ ಎಸ್ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಬಿಡಬೇಕು!
ಸಿದ್ದರಾಮಯ್ಯಗೆ ತಲೆಕೆಟ್ಟಿದೆ, ಆರ್ ಎಸ್ ಎಸ್ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಬಿಡಬೇಕು!
ಪಿಎಫ್‌ಐ ಪರವಾಗಿ ಯಾರೇ ಧ್ವನಿ ಎತ್ತಿದರೂ ಕಾನೂನು ಕ್ರಮ: ಆರಗ ಜ್ಞಾನೇಂದ್ರ
ಪಿಎಫ್‌ಐ ಪರವಾಗಿ ಯಾರೇ ಧ್ವನಿ ಎತ್ತಿದರೂ ಕಾನೂನು ಕ್ರಮ: ಆರಗ ಜ್ಞಾನೇಂದ್ರ
ಕಂದಾಯ ನಿವೇಶನಗಳನ್ನು ಭೂ ಪರಿವರ್ತನೆ ವ್ಯಾಪ್ತಿಗೆ ತರಲು ಸರ್ಕಾರ ಚಿಂತನೆ
ಕಂದಾಯ ನಿವೇಶನಗಳನ್ನು ಭೂ ಪರಿವರ್ತನೆ ವ್ಯಾಪ್ತಿಗೆ ತರಲು ಸರ್ಕಾರ ಚಿಂತನೆ
ಸಿಬಿಐ ರೇಡ್: ಗೇಟ್​ಗೆ ಬೀಗ, ಮನೆಯ ಹೊರಾಂಗಣದಲ್ಲಿ ಪತ್ರಿಕೆ ಓದುತ್ತಾ ಕುಳಿತ ಡಿಕೆ ಶಿವಕುಮಾರ್ ತಾಯಿ!
ಸಿಬಿಐ ರೇಡ್: ಗೇಟ್​ಗೆ ಬೀಗ, ಮನೆಯ ಹೊರಾಂಗಣದಲ್ಲಿ ಪತ್ರಿಕೆ ಓದುತ್ತಾ ಕುಳಿತ ಡಿಕೆ ಶಿವಕುಮಾರ್ ತಾಯಿ!
ಭಾರತ್ ಜೋಡೋ ಯಾತ್ರೆಯ ಕಾಂಗ್ರೆಸ್ ಫ್ಲೆಕ್ಸ್​ಗಳಿಗೆ ಹರಿದ ಕಿಡಿಗೇಡಿಗಳು, ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ
ಭಾರತ್ ಜೋಡೋ ಯಾತ್ರೆಯ ಕಾಂಗ್ರೆಸ್ ಫ್ಲೆಕ್ಸ್​ಗಳಿಗೆ ಹರಿದ ಕಿಡಿಗೇಡಿಗಳು, ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ
ಎಸ್​ಡಿಪಿಐ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ
ಎಸ್​ಡಿಪಿಐ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ
ಜಮ್ಮು ಮತ್ತು ಕಾಶ್ಮೀರದಲ್ಲಿ 2 ಸ್ಪೋಟ : ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್‌ನಲ್ಲಿ ಸ್ಪೋಟ
ಜಮ್ಮು ಮತ್ತು ಕಾಶ್ಮೀರದಲ್ಲಿ 2 ಸ್ಪೋಟ : ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್‌ನಲ್ಲಿ ಸ್ಪೋಟ
ನೂತನ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರನ್ನಾಗಿ(ಸಿಡಿಎಸ್) ಲೆ. ಜನರಲ್ ಅನಿಲ್ ಚೌಹಾಣ್ ನೇಮಕ
ನೂತನ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರನ್ನಾಗಿ(ಸಿಡಿಎಸ್) ಲೆ. ಜನರಲ್ ಅನಿಲ್ ಚೌಹಾಣ್ ನೇಮಕ
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ನಿಷೇಧಿಸಿದ ಕೇಂದ್ರ ಸರ್ಕಾರ
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ನಿಷೇಧಿಸಿದ ಕೇಂದ್ರ ಸರ್ಕಾರ
ಅಮೇರಿಕ ವೀಸಾ ವಿಳಂಬದ ಕುರಿತು ಪ್ರಸ್ತಾಪಿಸಿದ ವಿದೇಶಾಂಗ ಸಚಿವ : ಶೀಘ್ರದಲ್ಲೇ ಸರಿಪಡಿಸುವ ಆಶ್ವಾಸನೆ ನೀಡಿದ ಅಮೇರಿಕ
ಅಮೇರಿಕ ವೀಸಾ ವಿಳಂಬದ ಕುರಿತು ಪ್ರಸ್ತಾಪಿಸಿದ ವಿದೇಶಾಂಗ ಸಚಿವ : ಶೀಘ್ರದಲ್ಲೇ ಸರಿಪಡಿಸುವ ಆಶ್ವಾಸನೆ ನೀಡಿದ ಅಮೇರಿಕ

ನ್ಯೂಸ್ MORE NEWS...