ವಿಮ್ಸ್ ಸರಣಿ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಸತ್ತವರು ನಾಲ್ವರಲ್ಲ, ಇಬ್ಬರು ಮಾತ್ರ | JANATA NEWS

ಬಳ್ಳಾರಿ : ವಿಮ್ಸ್‌ನಲ್ಲಿ ಸತ್ತವರು ನಾಲ್ವರಲ್ಲ, ಇಬ್ಬರು ಮಾತ್ರ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ ಅವರು ಮಾಹಿತಿ ನೀಡಿದ್ದಾರೆ.
ವಿಮ್ಸ್‌ಗೆ ಭೇಟಿ ನೀಡಿ ಮಾಹಿತಿ ಪಡೆದ ಬಳಿಕ ಮಾತನಾಡಿ, ಘಟನೆ ಸಂಬಂಧ ಸಂಪೂರ್ಣ ಮಾಹಿತಿಯನ್ನು ತನಿಖಾ ಸಮಿತಿ ಎಲ್ಲ ವಿಭಾಗಗಳಿಂದಲೂ ಮಾಹಿತಿ ಪಡೆದುಕೊಂಡಿದೆ.
ರಾಜ್ಯದಲ್ಲಿ ವಿಮ್ಸ್ ಒಂದು ಅತ್ಯುತ್ತಮ ಸಂಸ್ಥೆ. ಇಲ್ಲಿ ಸತ್ತವರ ಸಂಖ್ಯೆ ಎರಡು ಮಾತ್ರ ಅಂತ ತಿಳಿಸಿದ ಅವರು. ಈ ಪ್ರಕರಣದ ಹಿಂದೆ ಯಾವುದೇ ಕಾಣದ ಕೈಗಳಿದ್ದರು ಕ್ರಮ ತೆಗೆದುಕೊಳ್ಳುತ್ತೇವೆ. ತನಿಖೆಯ ನಂತರ ಸತ್ಯ ತಿಳಿಯಲಿದೆ ಎಂದು ತಿಳಿಸಿದರು.
ನೇಮಕಾತಿ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ನೀಡಿದ್ದೇವೆ. ನಮ್ಮ ಸರ್ಕಾರ ಅತೀ ಹೆಚ್ಚು ಬದ್ಧತೆಯಿಂದ ಕೆಲಸ ಮಾಡಿದೆ. ವಿಮ್ಸ್‌ನಲ್ಲಿ ಸಾವು ಸಂಭವಿಸಿದ ಮಾಹಿತಿ ಬಂದಾಗ ನನ್ನ ಆರೋಗ್ಯ ಸರಿ ಇರಲಿಲ್ಲ. ಹೀಗಾಗಿ ನಾನು ಸದನಕ್ಕೆ ಮಾಹಿತಿ ಕೊಡಲು ಆಗಿಲ್ಲ. ನನ್ನ ಪರವಾಗಿ ಶ್ರೀರಾಮುಲು ಮಾಹಿತಿ ನೀಡಿದ್ದಾರೆ. ರಾಜ್ಯದ ಜನತೆಗೆ ಸತ್ಯ ತಿಳಿಯಬೇಕು. ಹೀಗಾಗಿ ತನಿಖಾ ಸಮಿತಿ ರಚನೆ ಮಾಡಿ ತನಿಖೆ ನಡೆಸಲಾಗುತ್ತಿದೆ ಎಂದರು.
ಜಿಲ್ಲಾ ಉಸ್ತುವಾರಿ ಹಾಗೂ ಸಾರಿಗೆ ಸಚಿವ ಬಿ.ಶ್ರೀರಾಮುಲು ಸಿದ್ದರಾಮಯ್ಯ ಅವರು ಹೇಳಿದರು, ಸುಳ್ಳು ಹೇಳಿ ರಾಜಕೀಯ ಮಾಡಿಕೊಂಡು ಬಂದಿಲ್ಲ. ನಾನು ಸುಳ್ಳು ಹೇಳಿ ರಾಜಕೀಯ ಮಾಡಿದ್ರೆ ದೊಡ್ಡ ವ್ಯಕ್ತಿಯಾಗುತ್ತಿದೆ ಅಂತ ಹೇಳಿದರು. ತನಿಖಾ ಸಮಿತಿ ವರದಿ ನೀಡಿದ ಬಳಿಕ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಲಾಗುವುದು. ಒಂದು ವೇಳೆ ವಿಮ್ಸ್ ಆಡಳಿತದಿಂದ ತಪ್ಪಾಗಿದ್ದರೆ ಅವರ ಮೇಲೆ ಎಫ್ಐಆರ್ ದಾಖಲು ಮಾಡಲಾಗುವುದು ಎಂದರು.
ಇಲ್ಲಿ ಸತ್ತವರ ಸಂಖ್ಯೆ ಎರಡು ಮಾತ್ರ. ಬೆಳಗ್ಗೆ 8:30ಕ್ಕೆ ಕರೆಂಟ್ ಕಟ್ ಆಗಿದೆ. ಒಂದು ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಪ್ರತಿ ವಿಭಾಗದ ಮುಖ್ಯಸ್ಥರ ಜೊತೆಯಲ್ಲಿ ನಾನು ಸಭೆ ನಡೆಸಿದ್ದೇನೆ. ಒಬ್ಬ ವ್ಯಕ್ತಿಗೆ ಹಲವಾರು ವರ್ಷಗಳಿಂದ ಕಿಡ್ನಿ ವೈಫಲ್ಯ ಇತ್ತು. ಅವರಿಗೆ ಬಿಪಿ ಹೆಚ್ಚಾಗಿತ್ತು. ಬ್ರೇನ್‍ನಲ್ಲಿ ಬ್ಲೀಡಿಂಗ್ ಕೂಡಾ ಆಗಿತ್ತು. ಈ ಸಮಸ್ಯೆಯನ್ನು ರೋಗಿಯ ಸಂಬಂಧಿಕರಿಗೆ ತಿಳಿಸಿದ್ದಾರೆ. ಬಳಿಕ ಅವರು 9:30ಕ್ಕೆ ಮೃತಪಟ್ಟಿದ್ದಾರೆ. ಇವರಿಗೆ ಎಲ್ಲ ರೀತಿಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಇನ್ನೊಬ್ಬ ರೋಗಿಗೂ ಆರೋಗ್ಯ ಸಮಸ್ಯೆ ಇತ್ತು. ಈ ಸಾವು ಹೀಗೆ ಸಂಭವಿಸಿದೆ ಅಂತ ಹೇಳಲು ಸಾಧ್ಯವಿಲ್ಲ. ಈ ಬಗ್ಗೆ ಕಾರಣ ನೀಡಿ ಆಸ್ಪತ್ರೆಯ ಆಡಳಿತ ವರ್ಗ ನನಗೆ ರಿಪೋರ್ಟ್ ನೀಡಿದೆ ಎಂದರು