ಐಸಿಸ್ ಜೊತೆ ನಂಟು: ಶಿವಮೊಗ್ಗದಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನ | JANATA NEWS

ಶಿವಮೊಗ್ಗ : ಶಿವಮೊಗ್ಗ ಪೊಲೀಸರ ವಿಶೇಷ ತನಿಖಾ ತಂಡವು ಇಬ್ಬರು ಶಂಕಿತ ಉಗ್ರರ ಬಂದಿಸಿದೆ. ಮಂಗಳೂರಿನ ಮಾಜ್ ಹಾಗೂ ಶಿವಮೊಗ್ಗದ ಸೈಯದ್ ಯಾಸಿನ್ ಅಲಿಯಾಸ್ ಬೈಲುನನ್ನ ಬಂಧಿಸಲಾಗಿದೆ.
ಬಂಧಿತರನ್ನು ಮಂಗಳೂರಿನ 22 ವರ್ಷದ ಮಾಜ್ ಮುನೀರ್ ಅಹಮ್ಮದ್ ಮತ್ತು ಸಿದ್ದೇಶ್ವರ ನಗರದ 21 ವರ್ಷದ ಸಯ್ಯದ್ ಯಾಸೀನ್ ಎಂದು ಗುರುತಿಸಲಾಗಿದೆ. ಇವರುಗಳು 2020ರಲ್ಲಿ ಗೋಡೆ ಬರಹ ಕೇಸ್ ನಲ್ಲಿ ಐಸಿಎಸ್ ಆರೋಪಿಗಳಾಗಿದ್ದಾರೆ.
ತೀರ್ಥಹಳ್ಳಿಯ ಸೊಪ್ಪುಗುಡ್ಡೆ ನಿವಾಸಿ ಶಾರೀಕ್ ಮತ್ತು ಆತನ ಸಹಚರರಾದ ಮಾಜ್ ಮುನೀರ್ ಅಹಮ್ಮದ್ ಹಾಗೂ ಸಯ್ಯದ್ ಯಾಸೀನ್ ನಿಷೇಧಿತ ಭಯೋತ್ಪಾದಕ ಸಂಘಟನೆಯ ನಂಟನ್ನು ಹೊಂದಿರುವ ಕಾರಣಕ್ಕೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ.
English summary :Link with ISIS: Two suspected militants arrested in Shimoga