ಪರಿಸರ ಪ್ರೇಮಿ ಸಾಲು ಮರದ ವೀರಾಚಾರಿ ಸಾವಿಗೆ ಶರಣು | JANATA NEWS

ದಾವಣಗೆರೆ : ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಮಿಟ್ಲಕಟ್ಟೆ ಗ್ರಾಮದ ಪರಿಸರ ಪ್ರೇಮಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಲು ಮರದ ವೀರಾಚಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನ್ಯಾಯಬೆಲೆ ಅಂಗಡಿಯಲ್ಲಿನ ಅಕ್ರಮ ವಿರೋಧಿಸಿ ಹೋರಾಟ ನಡೆಸುತ್ತಿದ್ದ ಪರಿಸರಪ್ರೇಮಿ ಸಾಲುಮರದ ವೀರಾಚಾರಿ(70) ಅವರು ನ್ಯಾಯ ಸಿಗಲಿಲ್ಲವೆಂದು ಮನನೊಂದು ತಾನೇ ಬೆಳೆಸಿದ ಮರದಲ್ಲಿ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇವರ ಸಾವಿನ ಸುದ್ದಿ ಕೇಳುತ್ತಿದ್ದಂತೆ ಆಡಳಿತ ವ್ಯವಸ್ಥೆ ವಿರುದ್ಧ ಆಕ್ರೋಶ ಹೊರಹಾಕಿದ ಹರಿಹರ ತಾಲೂಕು ಮಿಟ್ಲಕಟ್ಟೆ ಗ್ರಾಮಸ್ಥರು ತಡೆ ನಡೆಸಿದರು. ಈ ಸಾವಿಗೆ ನ್ಯಾಯ ಬೇಕು ಎಂದು ಪ್ರತಿಭಟನೆ ನಡೆಸುತ್ತಿದ್ದ ಗ್ರಾಮಸ್ಥರ ಮನವೊಸಲಿಸಿದ ಜಿಲ್ಲಾಧಿಕಾರಿಗಳು, ನ್ಯಾಯಾಲಯದ ತಡೆಯಾಜ್ಞೆ ತೆರವಿಗೆ ಪ್ರಯತ್ನ ನಡೆಸುವುದಾಗಿಯೂ, ನಂತರ ಈ ವಿಚಾರವನ್ನು ಸಂಬಂಧಿಸಿದ ಸಮಿತಿಯ ಮುಂದಿಟ್ಟು ಪರಿಹಾರ ಕಂಡುಕೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರ ಪರಿಸ್ಥಿತಿ ತಿಳಿಯಾಯಿತು.
ಜನರಿಗೆ ಸರ್ಕಾರದಿಂದ ನೀಡೋ ಅಕ್ಕಿ, ಗೋಧಿ, ರಾಗಿಯನ್ನ ಕಡಿಮೆ ನೀಡಲಾಗ್ತಾ ಇತ್ತು ಅಲ್ಲದೆ ಉಳಿದ ಅಕ್ಕಿ, ಗೋಧಿ ರಾಗಿ ಕಾಳ ಸಂತೆಯಲ್ಲಿ ಮಾರಾಟ ಮಾಡುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಹಾಗೂ ಆಹಾರ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದ ವೀರಾಚಾರಿ, ಒಂದು ವೇಳೆ ತಮ್ಮ ಹೋರಾಟಕ್ಕೆ ಮನ್ನಣೆ ಸಿಗದೆ ಇದ್ದರೆ ನೇಣು ಹಾಕಿಕೊಳ್ಳುವುದಾಗಿ ಹೇಳಿದ್ದರು..