₹50 ಸಾವಿರಕ್ಕೆ ತನ್ನ ಮಗುವನ್ನೇ ಮಾರಾಟ ಮಾಡಿದ ತಂದೆ! | JANATA NEWS
ಬೆಂಗಳೂರು : ತಂದೆ ತನ್ನ 25 ದಿನಗಳ ಮಗುವನ್ನೇ ₹ 50 ಸಾವಿರಕ್ಕೆ ಮಾರಾಟ ಮಾಡಿರುವ ಆಘಾತಕಾರಿ ಪ್ರಕರಣ ಚಾಮರಾಜನಗರದಲ್ಲಿ ನಡೆದಿದೆ.
ಪತಿ ತನಗೆ ಗಂಡು ಮಗು ಹುಟ್ಟಿದ ತಕ್ಷಣ ಪತ್ನಿ ವಿರೋಧದ ನಡುವೆಯೇ ಮಗುವನ್ನು ಮಾರಾಟ ಮಾಡಲು ಯತ್ನ ಮಾಡಿದ್ದಾನೆ. ವಿಷಯ ಬಹಿರಂಗಗೊಂಡ ನಂತರ ಪತ್ನಿಯ ಚಿಕಿತ್ಸೆಗೆ ಹಣ ಬೇಕಿತ್ತು. ಸಾಕಷ್ಟು ಸಾಲಗಳು ಇದ್ದವು. ಹೀಗಾಗಿ ಮಗುವನ್ನು ಬೇರೆಯವರಿಗೆ ಕೊಟ್ಟು ಹಣ ಹೊಂದಿಸಲು ಪ್ರಯತ್ನಪಟ್ಟೆ ಎಂದಿದ್ದಾನೆ
ಬಸವ, ನಾಗವೇಣಿ ದಂಪತಿ ಮದುವೆಯಾಗಿ 7 ವರ್ಷದ ಒಂದು ಗಂಡು ಮಗುವಿದೆ. ಇವರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. 25 ದಿನಗಳ ಹಿಂದೆ ನಾಗವೇಣಿ ಮತ್ತೊಂದು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.
ಆದರೆ 2ನೇ ಮಗು ಜನಿಸಿದ್ದೇ ತಡ, ಹಸೂಗೂಸನ್ನು 50 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಮಗುವನ್ನು ಮಾರಬೇಕೆನ್ನುವ ಗಂಡನ ಯೋಚನೆಯನ್ನು ಪತ್ನಿ ವಿರೋಧಿಸಿದ್ದರು.
ಮಗುವಿನ ಮಾರಾಟದ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಬಸವ ಮತ್ತು ನಾಗವೇಣಿ ದಂಪತಿಯನ್ನು ವಿಚಾರಣೆಗೆ ಒಳಪಡಿಸಿದರು. ಮಗು ಮಾರಾಟದ ಆರೋಪದ ಮೇಲೆ ಬಸವ ವಿರುದ್ಧ ಚಾಮರಾಜನಗರದ ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಗುವನ್ನು ಚಾಮರಾಜನಗರದ ಗಾಳೀಪುರ ಮೂಲದ ವ್ಯಕ್ತಿಯೊಬ್ಬನ ಮೂಲಕ 50 ಸಾವಿರ ರೂಪಾಯಿಗೆ ಮಾರಾಟ ಮಾಡಿ ಖಾಲಿ ಹಾಳೆಗೆ ಸಹಿ ಹಾಕಿಸಿಕೊಂಡರು ಎಂದು ಮಗುವಿನ ತಾಯಿ ಲೈಂಗಿಕ ಅಲ್ಪಸಂಖ್ಯಾತೆಗೆ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಮಕ್ಕಳ ರಕ್ಷಣಾ ಇಲಾಖೆಯ ಅಧಿಕಾರಿಗಳು ಸದ್ಯ ನಾಗವೇಣಿ ಆಕೆಯ ಮೊದಲ ಮಗುವನ್ನು ಬಾಲಮಂದಿರಕ್ಕೆ ಸೇರಿಸಿದ್ದಾರೆ. ನಾಗವೇಣಿ ಇನ್ನೂ ತಿಂಗಳ ಬಾಣಂತಿ. ಹೀಗಾಗಿ ಸ್ವಾಧಾರ ಕೇಂದ್ರದಲ್ಲಿ ಅವರಿಗೆ ಆಶ್ರಯ ನೀಡಲು ಅವಕಾಶ ಮಾಡಿಕೊಟ್ಟಿದ್ದೇವೆ. ಮಗುವನ್ನು ಪಡೆದಿರುವ ಬೆಂಗಳೂರಿನ ವ್ಯಕ್ತಿಯನ್ನು ಪತ್ತೆ ಹಚ್ಚಲು ಕ್ರಮ ಕೈಗೊಂಡಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.