ಅಣ್ಣ-ತಮ್ಮ ಇಬ್ಬರೂ ತುಂಬಿ ಹರಿಯುವ ಕೃಷ್ಣ ನದಿಯಲ್ಲಿ ನಾಪತ್ತೆ | JANATA NEWS

ರಾಯಚೂರು : ಕೃಷ್ಣ ನದಿಯಲ್ಲಿ ಸಹೋದರರಿಬ್ಬರು ನೀರುಪಾಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಕೊಪ್ಪರ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯ ಬಳಿ ಸ್ನಾನಕ್ಕೆ ತೆರಳಿದ್ದಾಗ ದುರ್ಘಟನೆ ಸಂಭವಿಸಿದೆ. ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಕೊಪ್ಪರ ಗ್ರಾಮದ ರಜಾಕ್ ಮುಲ್ಲಾ ಉಸ್ಮಾನ್ (35), ಮೌಲಾಲಿ ಉಸ್ಮಾನ್ (30) ಅವರು ಕುಟುಂಬಸ್ಥರೊಂದಿಗೆ ಮಂಗಳವಾರ ಸಂಜೆ ಕೃಷ್ಣ ನದಿ ತೀರಕ್ಕೆ ತೆರಳಿದ್ದರು.
ನದಿಯಲ್ಲಿ ಸ್ನಾನ ಮಾಡುವ ವೇಳೆ ಬಾಲಕಿಯನ್ನ ಕಾಪಾಡಲು ಹೋಗಿ ನೀರುಪಾಲಾಗಿದ್ದಾರೆ. ಒಬ್ಬರನ್ನ ಕಾಪಾಡಲು ಒಬ್ಬರು ಹೋಗಿ ಇಬ್ಬರೂ ನೀರುಪಾಲಾಗಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಮತ್ತು ಎಸ್ಡಿಆರ್ಎಫ್ ತಂಡ ಶೋಧಕಾರ್ಯ ನಡೆಸುತ್ತಿದೆ.
RELATED TOPICS:
English summary :Both Anna and Tamma got lost in the overflowing Krishna river