ಯಡಿಯೂರಪ್ಪ ಅವರೇ ವಯಸ್ಸು ಆಗೋಯ್ತಲ್ಲ ನಮ್ಗೆ! | JANATA NEWS

ಬೆಂಗಳೂರು : ಯಡಿಯೂರಪ್ಪನವರೇ ವಯಸ್ಸು ಆಗೋಯ್ತಲ್ಲ ನಮಗೆ, ನೀವು ಕೌನ್ಸಿಲ್ ಗೆ ಹೋಗಲು ಆಗಲ್ಲ, ನಾನು ಹೋಗಲು ಆಗಲ್ಲ. ಹೀಗಂತ ಯಡಿಯೂರಪ್ಪ ಅವರ ಕಾಲೆಳೆದಿದ್ದು ಮಾಜಿ ಸಿಎಂ ಸಿದ್ದರಾಮಯ್ಯ. ವಿಧಾನಸೌಧದಲ್ಲಿ ಇಬ್ಬರು ನಾಯಕರು ಪರಸ್ಪರ ಎದುರಾದಾಗ ಉಭಯಕುಶಲೋಪಾರಿ ವಿಚಾರಿಸಿದರು.
ಮಾಜಿ ಸಿಎಂ ಯಡಿಯೂರಪ್ಪ ಬರುವಾಗ ಎದುರಿಗೆ ಸಿಎಂ ಬಸವರಾಜ ಬೊಮ್ಮಾಯಿ ಸಿಕ್ಕಿದ್ದಾರೆ. ಆ ವೇಳೆ ಬಿಎಸ್‍ವೈ ಬಳಿ ಸಿಎಂ, ಸರ್ ಕೌನ್ಸಿಲ್‍ಗೆ ಹೋಗ್ತಾ ಇದ್ದೇನೆ ಎಂದು ಹೇಳಿ ಅಲ್ಲಿಂದ ಹೊರಟಿದ್ದಾರೆ. ಬಳಿಕ ವಿಧಾನ ಸಭೆಯ ಆಡಳಿತ ಪಕ್ಷದ ಮೊಗಸಾಲೆಗೆ ಹೋಗುವ ದಾರಿಯಲ್ಲಿ ಎದುರಿಗೆ ಸಿಕ್ಕಿದ ಸಿದ್ದರಾಮಯ್ಯ ಅವರಿಗೆ ಜೋಕ್ ಮಾಡಿದ ಬಿಎಸ್ ವೈ, 'ಏನು ನೀವು ಕೌನ್ಸಿಲ್ ಗೆ ಹೋಗ್ತಾ ಇದ್ದೀರಾ' ಎಂದು ಪ್ರಶ್ನಿಸಿದರು.
ಇದಕ್ಕೆ ನಕ್ಕ ಸಿದ್ದರಾಮಯ್ಯ, 'ಯಡಿಯೂರಪ್ಪ ಅವರೇ ವಯಸ್ಸು ಆಗೋಯ್ತಲ್ಲ ನಮಗೆ. ನೀವು ಕೌನ್ಸಿಲ್ ಗೆ ಹೋಗಲು ಆಗಲ್ಲ, ನಾನು ಹೋಗಲು ಆಗಲ್ಲ' ಎಂದರು.
ವಿಧಾನಸಭಾ ಕಲಾಪಕ್ಕೆ ತೆರಳುವ ವೇಳೆ ಆಕಸ್ಮಿಕವಾಗಿ ಸಿಕ್ಕ ಮಾಜಿ ಮುಖ್ಯಮಂತ್ರಿ @BSYBJP ಅವರ ಜೊತೆ ಕೆಲಕ್ಷಣಗಳ ಆತ್ಮೀಯ ಮಾತುಕತೆ. pic.twitter.com/oqA7iKuSGQ
— Siddaramaiah (@siddaramaiah) September 22, 2022