ಎಸ್‌ಡಿಪಿಐ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ | JANATA NEWS

ಹಾವೇರಿ : ಎಸ್‌ಡಿಪಿಐ ನೋಂದಣಿಯಾದ ರಾಜಕೀಯ ಪಕ್ಷ. ಅದರ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಮುಂದಿನ ದಿನಗಳಲ್ಲಿ ಆಗುವ ಬೆಳವಣಿಗೆಗಳ ಆಧಾರದ ಮೇಲೆ ಅದರದ್ದೇ ಆದ ಕಾನೂನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ಮೇಗಾ ಡೈರಿ ಅಡಿಗಲ್ಲು, ಕೆಎಂಎಫ್ ಆಡಳಿತ ಕಚೇರಿ ಉದ್ಘಾಟನೆಗೆ ಬಂದಿದ್ದೇನೆ. ನಮ್ಮ ಬಜೆಟ್‌ನಲ್ಲಿ ಘೋಷಿಸಿದಂತೆ ಮೇಗಾ ಡೈರಿ ನಿರ್ಮಾಣಕ್ಕೆ ಅಡಿಗಲ್ಲು ಹಾಕುತ್ತಿದ್ದೇವೆ, ನಮ್ಮ ಕ್ಷೇತ್ರದ ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡುತ್ತಿದ್ದೇವೆ. ಜಿಲ್ಲೆಯ ಅಭಿವೃದ್ಧಿಗೆ ಬೇಕಾದ ಎಲ್ಲ ಕಾರ್ಯಗಳನ್ನು ಮಾಡುತ್ತಿದ್ದೇವೆ ಎಂದರು.
ನಾನು ಮನಸ್ಸು ಮಾಡಿದರೆ ಪ್ಲೆಕ್ಸ್, ಕಾರ್ಯಕ್ರಮ ಮಾಡಲು ಬಿಡೋದಿಲ್ಲ ಎನ್ನುವ ಡಿಕೆಶಿ ಹೇಳಿಕೆ ವಿಚಾರ ಕುರಿತಂತೆ ಮಾತನಾಡಿದ ಅವರು, ಡಿಕೆಶಿ ಏನಾದರೂ ಹೇಳಲಿ ಬಿಡಲಿ. ಪ್ಲೆಕ್ಸ್ ಹಾಕುವವರು ಅನುಮತಿ ಪಡೆದು ಹಾಕಬೇಕು. ಅನುಮತಿ ಪಡೆದಿದ್ದಾರೋ ಇಲ್ಲವೋ ನನಗೆ ಗೊತ್ತಿಲ್ಲ. ಯಾವುದೇ ರಾಜಕೀಯ ಪಕ್ಷದ ಪ್ಲೆಕ್ಸ್ ಹರಿಯೋ ಅವಶ್ಯಕತೆ ನಮಗಿಲ್ಲ ಇಲ್ಲ. ಎಲ್ಲರಿಗೂ ಗೊತ್ತಿದೆ ಯಾರು ಭಾರತ್ ಜೋಡೋ ಮಾಡಿದ್ದಾರೆ ಯಾರು ಭಾರತ್ ತೋಡೋ ಮಾಡಿದ್ದಾರೆ ಎಂದು ಹೇಳಿದರು
ಪಿಎಫ್ಐ ಬ್ಯಾನ್ ಮಾಡಿರೋದು ಎಲೆಕ್ಷನ್ ಗಿಮಿಕ್ ಎನ್ನುವ ಬಿಕೆ ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯಿಸಿ, ಹರಿಪ್ರಸಾದ್ ಹೇಳಿಕಯನ್ನು ವ್ಯಾಖ್ಯಾನ ಮಾಡಲು ಆಗೋದಿಲ್ಲ. ವಿಧ್ವಂಸಕ ಕೃತ್ಯಗಳು ನಮ್ಮೆದುರಿಗೆ ನಡೆದಿವೆ. ಪಿಎಫ್‌ಐ ನಿಷೇಧಿಸಿ ಅಂತಾ ಕಾಂಗ್ರೆಸ್‌ನವರು ಒತ್ತಾಯ ಮಾಡಿದ್ದರು. ಒಳಗೂ ಹೊರಗೂ ಹೋರಾಟ ಮಾಡಿದ್ದರು. ಈಗ ಎಲೆಕ್ಷನ್ ಗಿಮಿಕ್ ಅಂತಿರೋದು ಎಷ್ಟು ಸರಿ.? ಎಂದು ಪ್ರಶ್ನಿಸಿದರು