ಪಿಜಿಯ ಬಾತ್ರೂಮ್ನಲ್ಲಿ ಯುವಕನ ಅನುಮಾನಾಸ್ಪದ ಶವ ಪತ್ತೆ | JANATA NEWS

ಬೆಂಗಳೂರು : ಪಿಜಿಯಲ್ಲಿ ವಾಸವಿದ್ದ ಯುವಕನೋರ್ವನ ಶವ ಬಾತ್ ರೂಮ್ನಲ್ಲಿ ಪತ್ತೆಯಾದ ಘಟನೆ ದಾಸರಹಳ್ಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಅನಿಲ್ ಕುಮಾರ್ ಮೃತ ಯುವಕ. ಸಿನಿಮಾ ರಂಗದಲ್ಲಿ ಹೆಸರು ಮಾಡಬೇಕು ಅಂತ ಶಿವಮೊಗ್ಗ ದಿಂದ ಬೆಂಗಳೂರಿಗೆ ಬಂದಿದ್ದ.
ಗೋವಿಂದರಾಜನಗರ ಠಾಣಾ ವ್ಯಾಪ್ತಿಯ ಅಗ್ರಹಾರ ದಾಸರಹಳ್ಳಿಯ ಪಿಜಿಯಲ್ಲಿ ವಾಸವಿದ್ದ ಅನಿಲ್ ಕುಮಾರ್, ಸೆಪ್ಟೆಂಬರ್ 16ರಿಂದ ನಾಪತ್ತೆಯಾಗಿದ್ದ.
ಕೊನೆಯದಾಗಿ ಮನೆಗೆ ಕರೆ ಮಾಡಿದಾಗ ಫುಡ್ ಪಾಯಿಸನ್ ಆಗಿರುವುದಾಗಿ ಅನಿಲ್ ಹೇಳಿಕೊಂಡಿದ್ದ. ಬಾತ್ರೂಂಗೆ ಹೋದವನು ಪತ್ತೆ ಇರಲಿಲ್ಲ. ಕರೆಗಳಿಗೂ ರೆಸ್ಪಾನ್ಸ್ ಮಾಡ್ತಿರಲಿಲ್ಲ.
ಅಲ್ಲಿ ಇಲ್ಲಿ ಹುಡುಕಾಡಿದರೂ ಸಿಕ್ಕಿರಲಿಲ್ಲ. ಮೂರು ದಿನಗಳ ಬಳಿಕ ಹೌಸ್ ಕೀಪಿಂಗ್‌ನವರು ಬಾತ್ರೂಂ ಸ್ವಚ್ಚತೆಗೆ ಹೋದ ಸಂಧರ್ಭದಲ್ಲಿ ಅನಿಲ್‌ನ ಕೊಳೆತ ಶವ ಪತ್ತೆಯಾಗಿದೆ. ಇವೆಲ್ಲಾವೂ ಪಿಜಿಯಲ್ಲಿ ಸ್ಚಚ್ಚತೆ ಇರದ ಕಾರಣ ತನ್ನ ಮಗನಿಗೆ ಫುಡ್ ಪಾಯ್ಸನ್ ಆಗಿರಬಹುದು ಹೀಗಾಗಿ ಇದೊಂದು ಅಹಸಜ ಸಾವು ಎಂದು ಅನಿಲ್ ತಂದೆಯ ಆರೋಪ ಮಾಡಿದ್ದಾರೆ.
ಈ ಸಂಬಂಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.