ಒನ್ ಸೈಡ್ ಲವ್, ರಸ್ತೆಯಲ್ಲಿ ನಿಂತಿದ್ದ ಅಮಾಯಕನ ಮೇಲೆ ಮಾರಣಾಂತಿಕ ಹಲ್ಲೆ! | JANATA NEWS

ಬೆಂಗಳೂರು : ಒನ್ ಸೈಡ್ ಲವ್ ಸ್ಟೋರಿ, ಇನ್ಯಾರದೋ ಮೇಲಿನ ದ್ವೇಷಕ್ಕೆ ರಸ್ತೆಯಲ್ಲಿ ನಿಂತಿದ್ದ ಅಪರಿಚಿತನಿಗೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿರುವುದು ಎರಡು ದಿನಗಳ ಹಿಂದೆ ಬೆಂಗಳೂರಿನ ಮಾಗಡಿ ರಸ್ತೆ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಆರೋಪಿ ಮಂಜೇಶ್ ಎಂಬಾತ ಯುವತಿಯೋರ್ವಗಳನ್ನು ಪ್ರೀತಿಸುತ್ತಿದ್ದ. ಆದರೆ ಆಕೆ ನಿತಿನ್ ಎಂಬಾತನನ್ನ ಪ್ರೀತಿ ಮಾಡುತ್ತಿದ್ದಳಂತೆ. ವಿಷಯ ತಿಳಿದ ಮಂಜೇಶ್, ನಿತಿನ್ ಕರೆದು ದಾಳಿ ಮಾಡಲು ಯೋಜನೆ ಮಾಡಿಕೊಂಡಿದ್ದಾನೆ.
ಈ ವೇಳೆ ನಿತಿನ್ ತನ್ನ ಸಹೋದರನ ಜೊತೆ ಬರುವುದಾಗಿ ಹೇಳಿದ್ದ. ನಿತಿನ್ ಸಿಗುವುದಾಗಿ ಹೇಳಿದಾಗ ಟೂಲ್ಸ್ ಸಮೇತ ಎಂಟ್ರಿ ಕೊಟ್ಟ ಮಂಜೇಶ್ ಆ್ಯಂಡ್ ಗ್ಯಾಂಗ್ ತನ್ನ ಗೆಳೆಯನ ಜೊತೆ ನಿಂತಿದ್ದ ದೀಪು ಎಂಬಾತನನ್ನು ನೋಡಿ ನಿತಿನ್ ಎಂದು ತಿಳಿದು ಅಟ್ಯಾಕ್ ಮಾಡಿ ಪರಾರಿಯಾಗಿದ್ದಾನೆ ಎಂದು ತಿಳಿಸಿದ್ದಾರೆ.
ದೀಪು ನಾನು ಅವನಲ್ಲ ಎಂದು ಹೇಳಲು ಹೊರಟರೂ ಆತನ ಮಾತು ಕೇಳದೇ ಮನಬಂದಂತೆ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಸದ್ಯ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಮಾಗಡಿ ರಸ್ತೆ ಪೊಲೀಸ್ ಸಿಬ್ಬಂದಿ ಮಂಜೇಶ್ನನ್ನು ಬಂಧಿಸಿದ್ದು, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳ ಆಧರಿಸಿ ಆರೋಪಿಗಳ ಹುಡುಕಾಟಕ್ಕೆ ಮಾಗಡಿ ರಸ್ತೆ ಪೊಲೀಸರು ಮುಂದಾಗಿದ್ದಾರೆ.