ಮನೆಯ ಗೋಡೆ ಕುಸಿದುಬಿದ್ದು ವೃದ್ಧೆ ಸಾವು | JANATA NEWS

ಗದಗ : ಬೆಟಗೇರಿಯ ಕುಲಕರ್ಣಿ ಗಲ್ಲಿಯಲ್ಲಿ ಮನೆ ಗೋಡೆ ಕುಸಿದು ವೃದ್ಧೆಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ಗದಗನ ಬೆಟಗೇರಿಯ ಕುಲಕರ್ಣಿ ಗಲ್ಲಿ ನಿವಾಸಿ ಸೂಸವ್ವ ಕಲ್ಮಠ 60 ಸಾವನ್ನಪ್ಪಿದ್ದಾರೆ. ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಶಿಥಿಲಗೊಂಡಿದ್ದ ಗೋಡೆ ಬೆಳಗಿನ ಜಾವ ಕುಸಿದಿತ್ತು ಪರಿಣಾಮ ಹಾಲ್ ನಲ್ಲಿ ಮಲಗಿದ್ದ ಸೂಸವ್ವ ಕಲ್ಮಠ, ಬಸಮ್ಮ ನಡಕಟ್ಟಿನ ಅವರ ಮೇಲೆ ಗೋಡೆ ಬಿದ್ದಿದೆ.
ಮನೆಯ ಮತ್ತೊಂದು ಭಾಗದಲ್ಲಿ ಮಲಗಿದ್ದ ಅಡವಯ್ಯ ಕಲ್ಮಠ ಅವರು ಗೋಡೆ ಕುಸಿದ ತಕ್ಷಣ ಕುಟುಂಬಸ್ಥರು ಗೋಡೆಯ ಅವಶೇಷಗಳ ಅಡಿ ಸಿಲುಕಿದ್ದನ್ನ ಗಮನಿಸಿ ಜನರ ಸಹಾಯದಿಂದ ಮಣ್ಣಿನಡಿ ಸಿಲುಕಿದ್ದ ಇಬ್ಬರನ್ನ ರಕ್ಷಿಸಿದ್ದಾರೆ.
ಈ ದುರ್ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಾತ್ರಿ ಸುರಿದ ಮಳೆಗೆ ಗೋಡೆ ಶಿಥಲಗೊಂಡು ಕುಸಿದಿದೆ. ಅಡವಯ್ಯ ಕಲ್ಮಠ, ಬಸಮ್ಮ ನಡಕಟ್ಟಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.