Sat,Jul27,2024
ಕನ್ನಡ / English

ಹಿಂದಿ ಹೇರಿಕೆ ವಿವಾದ: ಮೋದಿ ಅವರು ಮಧ್ಯ ಪ್ರವೇಶ ಮಾಡಬೇಕು, ಗೃಹ ಸಚಿವರಿಗೆ ತಿಳಿವಳಿಕೆ ಮೂಡಿಸಬೇಕು | JANATA NEWS

15 Oct 2022
2069

ಬೆಂಗಳೂರು : ಕೇಂದ್ರದ ಗೃಹ ಸಚಿವರು ದೇಶದಲ್ಲಿ ಹಲವಾರು ಭಾಷೆಗಳನ್ನು ನಾಶ ಮಾಡುವ ನಿಟ್ಟಿನಲ್ಲಿ ಆರಂಭಿಕ ಹೆಜ್ಜೆಗಳನ್ನು ಇಟ್ಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಶನಿವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಸ್ಥಳೀಯ ಭಾಷೆಗಳನ್ನು ಉದ್ಧಾರ ಮಾಡುತ್ತೇವೆ ಎಂದು ಕೇಂದ್ರ ಸಚಿವರು ಹಿಂದಿಯನ್ನು ಹೇರಿಕೆ ಮಾಡಲು ಹೊರಟಿದ್ದಾರೆ. ಇದು ಸರಿಯಲ್ಲ, ನಾವು ಒಪ್ಪುವುದಿಲ್ಲ ಎಂದರು.

ಈ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರವೇಶ ಮಾಡಬೇಕು, ಗೃಹ ಸಚಿವರಿಗೆ ತಿಳಿವಳಿಕೆ ಮೂಡಿಸಬೇಕು. ಪದೇಪದೆ ಭಾಷೆಗಳ ವಿಷಯವನ್ನೇ ಕೆದಕುತ್ತಾ ಕೂರುವುದು ಸರಿಯಲ್ಲ. ಇದನ್ನೇ ಹೀಗೆಯೇ ಕೆದಕುತ್ತಾ ಹೋದರೆ ದೇಶದ ಸಮಗ್ರತೆ, ಏಕತೆಗೆ ಧಕ್ಕೆ ಆಗುತ್ತದೆ. ಈ ಬಗ್ಗೆ ಗೃಹ ಸಚಿವರ ನೇತೃತ್ವದ ಸಮಿತಿ ರಾಷ್ಟ್ರಪತಿಗಳಿಗೆ ಸಲ್ಲಿಸಿರುವ ವರದಿಯನ್ನು ಒಪ್ಪಲು ಸಾಧ್ಯವಿಲ್ಲ ಎಂದರು.

ಬಿಜೆಪಿಯವರು ಒಂದು ಕಡೆ ಹೇಳುತ್ತಾರೆ ರಾಷ್ಟ್ರವನ್ನು ಒಂದು ಮಾಡಬೇಕೆಂದು. ಆದರೆ, ಭಾಷೆಗಳನ್ನು ನಾಶ ಮಾಡಿ ಒಂದು ರಾಷ್ಟ್ರ ಕಟ್ಟೋಕೆ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು. ಕೇಂದ್ರದ ಧೋರಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು. 120 ದೇಶಗಳ ಪೈಕಿ ಬಡತನದಲ್ಲಿ ನಮ್ಮ ದೇಶ 104 ನೇ ಸ್ಥಾನದಲ್ಲಿದೆ. ದೇಶದಲ್ಲಿ ಇರುವ ಸಮಸ್ಯೆ ಬಗೆಹರಿಸಿ ಮೊದಲು ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಭಾಷೆ ವಿಷಯದಲ್ಲಿ ಸಮಸ್ಯೆ ಆದರೆ ನಮ್ಮಲ್ಲಿರುವ ಕನ್ನಡ ಸಂಘ ಸಂಸ್ಥೆ ಜೊತೆಗೆ ನಮ್ಮ ಪಕ್ಷ ಕೂಡ ಕೈಜೋಡಿಸಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ರವಾನಿಸಿದರು.

ಎರಡೂ ರಾಷ್ಟ್ರೀಯ ಪಕ್ಷಗಳು ದೇಶಕ್ಕೆ ಮಾರಕ. ಒಂದೇ ನಾಣ್ಯದ ಎರಡೂ ಮುಖ. ಒಂದೆಡೆ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ, ಇನ್ನೊಂದು ಕಡೆ ಭಾಷೆಯ ದಬ್ಬಾಳಿಕೆ ಪ್ರಾರಂಭ ಆಗಿದೆ. ದಕ್ಷಿಣ ಭಾರತದಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಬಾಗಿಲು ಹಾಕಿದ್ದಾರೆ. ಕರ್ನಾಟಕದಲ್ಲೂ ಬಹಳ ದೂರ ಇಲ್ಲ ಎಂದು ಕುಮಾರಸ್ವಾಮಿ ಹರಿಹಾಯ್ದರು.

RELATED TOPICS:
English summary :Hindi Imposition Controversy: Modi should intervene, Home Minister should be made aware

ನೇಪಾಳ ವಿಮಾನ ಅಪಘಾತದಲ್ಲಿ 18 ಮಂದಿ ಸಾವು : ರನ್‌ವೇಯಿಂದ ಸ್ಕಿಡ್ ಆಗಿ ಸೌರ್ಯ ಏರ್‌ಲೈನ್ಸ್ ವಿಮಾನ
ನೇಪಾಳ ವಿಮಾನ ಅಪಘಾತದಲ್ಲಿ 18 ಮಂದಿ ಸಾವು : ರನ್‌ವೇಯಿಂದ ಸ್ಕಿಡ್ ಆಗಿ ಸೌರ್ಯ ಏರ್‌ಲೈನ್ಸ್ ವಿಮಾನ
ಮುಡಾ ಹಗರಣದ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಆಗ್ರಹಿಸಿ ಬಿಜೆಪಿ ಜೆಡಿಎಸ್ ಸದಸ್ಯರ ಅಹೋರಾತ್ರಿ ಧರಣಿ ಮುಂದುವರಿಕೆ
ಮುಡಾ ಹಗರಣದ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಆಗ್ರಹಿಸಿ ಬಿಜೆಪಿ ಜೆಡಿಎಸ್ ಸದಸ್ಯರ ಅಹೋರಾತ್ರಿ ಧರಣಿ ಮುಂದುವರಿಕೆ
ಒಲಿಂಪಿಕ್ ಉದ್ಘಾಟನಾ ಸಮಾರಂಭಕ್ಕೂ ಮುನ್ನ ಪ್ಯಾರಿಸ್‌ನಲ್ಲಿ ಆಸ್ಟ್ರೇಲಿಯನ್ ಮಹಿಳೆಯ ಸಾಮೂಹಿಕ ಅತ್ಯಾಚಾರವೆಸಗಿದ 5 ವಲಸಿಗರು
ಒಲಿಂಪಿಕ್ ಉದ್ಘಾಟನಾ ಸಮಾರಂಭಕ್ಕೂ ಮುನ್ನ ಪ್ಯಾರಿಸ್‌ನಲ್ಲಿ ಆಸ್ಟ್ರೇಲಿಯನ್ ಮಹಿಳೆಯ ಸಾಮೂಹಿಕ ಅತ್ಯಾಚಾರವೆಸಗಿದ 5 ವಲಸಿಗರು
ಸ್ವಾಮಿ ಅವಿಮುಕ್ತೇಶ್ವರಾನಂದ್ ಒಬ್ಬ ನಕಲಿ ಬಾಬಾ, ಕ್ರಿಮಿನಲ್ - ಜೋತಿರ್ಮಠ ಟ್ರಸ್ಟ್‌ನ ಸ್ವಾಮಿ ಶ್ರೀ ಗೋವಿಂದಾನಂದ ಸರಸ್ವತಿ ಮಹಾರಾಜ್
ಸ್ವಾಮಿ ಅವಿಮುಕ್ತೇಶ್ವರಾನಂದ್ ಒಬ್ಬ ನಕಲಿ ಬಾಬಾ, ಕ್ರಿಮಿನಲ್ - ಜೋತಿರ್ಮಠ ಟ್ರಸ್ಟ್‌ನ ಸ್ವಾಮಿ ಶ್ರೀ ಗೋವಿಂದಾನಂದ ಸರಸ್ವತಿ ಮಹಾರಾಜ್
ಬ್ಲೂ ಸ್ಕ್ರೀನ್ ಆಫ್ ಡೆತ್ : ಜಗತ್ತಿನಾದ್ಯಂತ ಮೈಕ್ರೋಸಾಫ್ಟ್ ವಿಂಡೋಸ್ ಬಳಕೆದಾರಾರಿಗೆ ಕಾಡಿದ ಪೆಡಂಭೂತ
ಬ್ಲೂ ಸ್ಕ್ರೀನ್ ಆಫ್ ಡೆತ್ : ಜಗತ್ತಿನಾದ್ಯಂತ ಮೈಕ್ರೋಸಾಫ್ಟ್ ವಿಂಡೋಸ್ ಬಳಕೆದಾರಾರಿಗೆ ಕಾಡಿದ ಪೆಡಂಭೂತ
ಇಂಡಿ ಅಲಯನ್ಸ್‌ಗೆ ಬಹಿರಂಗವಾಗಿ ಬೆಂಬಲ ಸೂಚಿಸಿದ ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ
ಇಂಡಿ ಅಲಯನ್ಸ್‌ಗೆ ಬಹಿರಂಗವಾಗಿ ಬೆಂಬಲ ಸೂಚಿಸಿದ ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ
ಅಕ್ರಮ ಆಸ್ತಿ ಪ್ರಕರಣವನ್ನು ರದ್ದುಗೊಳಿಸುವಂತೆ ಡಿಕೆ.ಶಿವಕುಮಾರ್ ಸಲ್ಲಿಸಿದ್ದ ಮನವಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
ಅಕ್ರಮ ಆಸ್ತಿ ಪ್ರಕರಣವನ್ನು ರದ್ದುಗೊಳಿಸುವಂತೆ ಡಿಕೆ.ಶಿವಕುಮಾರ್ ಸಲ್ಲಿಸಿದ್ದ ಮನವಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
ಪೆಟ್ರೋಲ್-ಡೀಸೆಲ್ ಹಾಗೂ ಹಾಲಿನ ದರ ಏರಿಸಿದ ಬೆನ್ನಲ್ಲೇ ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ದರ ಸಹ ಹೆಚ್ಚಳ
ಪೆಟ್ರೋಲ್-ಡೀಸೆಲ್ ಹಾಗೂ ಹಾಲಿನ ದರ ಏರಿಸಿದ ಬೆನ್ನಲ್ಲೇ ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ದರ ಸಹ ಹೆಚ್ಚಳ
ಮುಸ್ಲಿಂ ಮಹಿಳೆಯರಿಗೆ ಜೀವನಾಂಶ : ಸುಪ್ರೀಂ ಕೋರ್ಟ್ ತೀರ್ಪು ಶರಿಯಾ ಕಾನೂನಿಗೆ ವಿರುದ್ಧ - ಅಖಿಲ ಭಾರತ ಮುಸ್ಲಿಂ ಮಂಡಳಿ
ಮುಸ್ಲಿಂ ಮಹಿಳೆಯರಿಗೆ ಜೀವನಾಂಶ : ಸುಪ್ರೀಂ ಕೋರ್ಟ್ ತೀರ್ಪು ಶರಿಯಾ ಕಾನೂನಿಗೆ ವಿರುದ್ಧ - ಅಖಿಲ ಭಾರತ ಮುಸ್ಲಿಂ ಮಂಡಳಿ
ಡರೋ ಮತ್ : ಯಾವ ಸಾಮಾಜಿಕ ಕೂಟದಲ್ಲಿ ಭಾಗವಹಿಸಿದ್ದೀರಾ ಹೇಳಲು ಭಯಪಡಬೇಡಿ ಡಿಕೆಶಿವಕುಮಾರ್ ಗೆ ಆರ್. ಅಶೋಕ ತರಾಟೆ
ಡರೋ ಮತ್ : ಯಾವ ಸಾಮಾಜಿಕ ಕೂಟದಲ್ಲಿ ಭಾಗವಹಿಸಿದ್ದೀರಾ ಹೇಳಲು ಭಯಪಡಬೇಡಿ ಡಿಕೆಶಿವಕುಮಾರ್ ಗೆ ಆರ್. ಅಶೋಕ ತರಾಟೆ
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲಿನ ಗುಂಡಿನ ದಾಳಿ ತೀವ್ರವಾಗಿ ಖಂಡಿಸಿದ ಪ್ರಧಾನಿ ಮೋದಿ
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲಿನ ಗುಂಡಿನ ದಾಳಿ ತೀವ್ರವಾಗಿ ಖಂಡಿಸಿದ ಪ್ರಧಾನಿ ಮೋದಿ
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆ ಯತ್ನ : ಚುನಾವಣಾ ರ್ಯಾಲಿಯಲ್ಲಿ ಗುಂಡಿನ ದಾಳಿ
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆ ಯತ್ನ : ಚುನಾವಣಾ ರ್ಯಾಲಿಯಲ್ಲಿ ಗುಂಡಿನ ದಾಳಿ

ನ್ಯೂಸ್ MORE NEWS...