ಬೆಂಗಳೂರಲ್ಲಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ಸ್ಕೂಟರ್ಗೆ ಬಸ್ ಡಿಕ್ಕಿ- ತಾಯಿ ಮಗಳು ಗಂಭೀರ | JANATA NEWS
ಬೆಂಗಳೂರು : ರಸ್ತೆ ಗುಂಡಿ ತಪ್ಪಿಸಲು ಹೋಗಿ ಬಲಭಾಗಕ್ಕೆ ಸ್ಕೂಟರ್ ಚಲಾಯಿಸಿದ್ದರಿಂದ ಹಿಂಬದಿಯಿಂದ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದು ಅಮ್ಮ ಮಗಳು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ವಸಂತನಗರದ ನಿವಾಸಿ ಉಮಾ (42), ವನಿತಾ (22) ಗಾಯಗೊಂಡ ತಾಯಿ-ಮಗಳು. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್, ಹೊಂಡಾ ಆಯಕ್ಟೀವಾದಲ್ಲಿ ಹೋಗುತ್ತಿದ್ದ ತಾಯಿ, ಮಗಳ ಮೇಲೆ ಹರಿದಿದೆ.
ಪರಿಣಾಮ ವನಿತಾ ಮತ್ತು ಉಮಾ ಗಾಯಗೊಂಡಿದ್ದಾರೆ. ಉಮಾ ಅವರ ಸ್ಥಿತಿ ಚಿಂತಾಜನಕವಾಗಿದೆ. ಕೂಡಲೇ ಅವರನ್ನ ಬೌರಿಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ರಸ್ತೆ ಗುಂಡಿ ತಪ್ಪಿಸಲು ಹೋಗಿ ಬಲಭಾಗಕ್ಕೆ ಸ್ಕೂಟರ್ ಚಲಾಯಿಸಿದ್ದರಿಂದ ಹಿಂಬದಿಯಿಂದ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಗುದ್ದಿದೆ. ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಉಮಾ ಕಾಲಿನ ಮೇಲೆ ಬಸ್ ಚಕ್ರ ಹತ್ತಿದೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಮಲ್ಲೇಶ್ವರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.