ಕಾಶ್ಮೀರ ಅಲ್ಪಸಂಖ್ಯಾತ ಹಿಂದೂಗಳ ಹತ್ಯೆ : ಇದು ನ್ಯಾಯ ಸಿಗುವವರೆಗೆ ಎಂದಿಗೂ ನಿಲ್ಲುವುದಿಲ್ಲ - ಫಾರೂಕ್ ಅಬ್ದುಲ್ಲಾ | JANATA NEWS

ಶ್ರೀನಗರ : ಎಲ್ಲಿಯವರೆಗೆ ನ್ಯಾಯ ಸಿಗುವುದಿಲ್ಲವೋ, ಅಲ್ಲಿಯವರೆಗೆ ಇದು(ಅಲ್ಪಸಂಖ್ಯಾತ ಹಿಂದೂಗಳ ಹತ್ಯೆ) ಎಂದಿಗೂ ನಿಲ್ಲುವುದಿಲ್ಲ, ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಆಶ್ಚರ್ಯಕರ ಹಾಗೂ ಪರೋಕ್ಷವಾಗಿ ಬೆದರಿಕೆ ಹೇಳಿಕೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ, ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರು, ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಕಾಶ್ಮೀರಿ ಪಂಡಿತ್ ಪುರಾಣ್ ಕ್ರಿಶನ್ ಭಟ್ ಅವರ ಹತ್ಯೆಗೆ ತಮಗೆ ಆದ ಅನ್ಯಾಯವೇ ಕಾರಣವೆಂಬಂತೆ ಬಿಂಬಿಸಿದ್ದಾರೆ.
ದಶಕಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಹತ್ಯಾಕಾಂಡಕ್ಕೆ ತಮಗೆ ಆಗಿರುವ ಅನ್ಯಾಯವೇ ಕಾರಣ ಎಂಬಂತೆ ಸೂಚಿಸಿದ ಮಾಜಿ ಮುಖ್ಯಮಂತ್ರಿ, "ನ್ಯಾಯ ದೊರಕುವ ವರೆಗೂ" ಇದು (ಕಾಶ್ಮೀರಿ ಪಂಡಿತರ ಗುರಿ ಹತ್ಯೆ)ಗಳು ನಿಲ್ಲುವುದಿಲ್ಲ, ಎಂದು ಆತಂಕಕಾರಿ ಹೇಳಿಕೆ ನೀಡಿದ್ದಾರೆ.
"ಇದು(ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿ) ಎಂದಿಗೂ ನಿಲ್ಲುವುದಿಲ್ಲ. ನ್ಯಾಯ ಸಿಗುವವರೆಗೆ ಇದು ಎಂದಿಗೂ ನಿಲ್ಲುವುದಿಲ್ಲ. ಮೊದಲು ಅವರು ಆರ್ಟಿಕಲ್ 370 ರ ಕಾರಣದಿಂದಾಗಿ ಇಂತಹ ಹತ್ಯೆಗಳು ನಡೆಯುತ್ತಿವೆ ಎಂದು ಅವರು ಹೇಳಿದರು, ಆದರೆ ಈಗ ಅದನ್ನು ರದ್ದುಗೊಳಿಸಲಾಗಿದೆ, ಹಾಗಾದರೆ ಅಂತಹ ಹತ್ಯೆಗಳು ಏಕೆ ನಿಂತಿಲ್ಲ? ಯಾರು ಹೊಣೆ? ಪರಿಸ್ಥಿತಿ ಸುಧಾರಣೆ ಆದಂತೆ ನನಗೇನೂ ಅನಿಸುತ್ತಿಲ್ಲ" ಎಂದು ಅಬ್ದುಲ್ಲಾ ಹೇಳಿದರು.
ಕಳೆದ ವಾರ ಶೋಪಿಯಾನ್‌ನಲ್ಲಿ 56 ವರ್ಷದ ಕೃಷ್ಣ ಭಟ್ ಎಂಬಾತನನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಕಾಶ್ಮೀರಿ ಪಂಡಿತ್ ಆರಂಭದಲ್ಲಿ ಬುಲೆಟ್ ಗಾಯಗೊಂಡಿದ್ದರು. ಸಂತ್ರಸ್ತರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರವಾಗಿ ಗಾಯಗೊಂಡಿದ್ದ ಆತ ಮೃತಪಟ್ಟಿದ್ದಾನೆ, ಎಂದು ಪೊಲೀಸರು ತಿಳಿಸಿದ್ದಾರೆ.