ಮರ್ಯಾದಾ ಹತ್ಯೆ: ಪ್ರೇಮಿಗಳನ್ನ ಒಂದು ಮಾಡ್ತೀವಿ ಎಂದು ಕರೆದು ಹತ್ಯೆ | JANATA NEWS

ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯಲ್ಲಿ ಭೀಕರ ಮರ್ಯಾದಾ ಹತ್ಯೆ ಬೆಳಕಿಗೆ ಬಂದಿದೆ. ಯುವತಿಯ ತಂದೆ ಹಾಗೂ ಮಾವಂದಿರು ಪ್ರೇಮಿಗಳಿಬ್ಬರನ್ನು ಕೊಲೆಗೈದು ಕೃಷ್ಣಾ ನದಿಗೆ ಎಸೆದಿದ್ದಾರೆ ಎನ್ನಲಾಗಿದೆ.
ಕಳೆದ ಕೆಲ ದಿನಗಳ ಹಿಂದೆ ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ಇಬ್ಬರ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಗ್ರಾಮದ ವಿಶ್ವನಾಥ್ ನೆಲಗಿ(24) ಹಾಗೂ ರಾಜೇಶ್ವರಿ(18) ಹತ್ಯೆಯಾದ ಪ್ರೇಮಿಗಳು. ಸುಮಾರು 4-5 ವರ್ಷಗಳಿಂದ ವಿಶ್ವನಾಥ್ ಹಾಗೂ ರಾಜೇಶ್ವರಿ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು.
ಈ ವಿಚಾರ ತಿಳಿದ ರಾಜೇಶ್ವರಿ ಪೋಷಕರು, ಅಪ್ರಾಪ್ತ ಮಗಳ ಪ್ರೀತಿಗೆ ಅಡ್ಡಿಪಡಿಸಿ ಬುದ್ಧಿ ಮಾತು ಹೇಳಿದ್ದರು. ವಿಶ್ವನಾಥ್‌ನ ಮನೆಯವರು ಆತನನ್ನು ಕೂಲಿ ಕೆಲಸಕ್ಕೆಂದು ಕೇರಳದ ಕಾಸರಗೋಡಿಗೆ ಕಳುಹಿಸಿದ್ದರು.
ಆದರೆ ರಾಜೇಶ್ವರಿಯ ತಂದೆ ಪರಸಪ್ಪ ಕರಡಿ ಇಬ್ಬರನ್ನೂ ಒಂದು ಮಾಡಿಸುವುದಾಗಿ ನಂಬಿಸಿ, ವಿಶ್ವನಾಥ್‌ನನ್ನು ಊರಿಗೆ ಬರುವಂತೆ ಹೇಳಿದ್ದಾರೆ. ನರಗುಂದ ಬಳಿ ಇದ್ದ ವಿಶ್ವನಾಥನನ್ನು ನಂಬಿಸಿ ರಾಜೇಶ್ವರಿ, ನಿನ್ನನ್ನು ಒಂದು ಮಾಡೋದಾಗಿ ಬೇವಿನಮಟ್ಟಿ ಗ್ರಾಮದಿಂದ ಕರೆದೊಯ್ದಿದ್ದರಂತೆ. ಇತ್ತ ಬಾಲಕಿಯನ್ನು ಕರೆತಂದಿದ್ದ ಆರೋಪಿಗಳು ರಾಜೇಶ್ವರಿ ಕತ್ತನ್ನು ವೇಲ್ ನಿಂದ ಬಿಗಿದು ಕೊಲೆ ಮಾಡಿದ್ದರಂತೆ. ಇತ್ತ ವಿಶ್ವನಾಥನ ಮರ್ಮಾಂಗ ಹಾಗೂ ಎದೆಗೆ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದರಂತೆ.
ಅಲ್ಲಿಂದ ಇಬ್ಬರ ಮೃತ ದೇಹಗಳನ್ನು ಕ್ರೂಸರ್ ವಾಹನದಲ್ಲಿ ಕೊಂಡೊಯ್ದಿದ್ದಾರೆ. ಶವಗಳನ್ನು ಹುನಗುಂದ ಎನ್‌ಹೆಚ್ 50ಯ ಕೃಷ್ಣಾ ನದಿ ಬ್ರಿಡ್ಜ್ ಮೇಲೆ ಕೊಂಡೊಯ್ದು, ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಶವಗಳ ಮೇಲಿನ ಬಟ್ಟೆ ಬಿಚ್ಚಿ, ಹರಿಯುತ್ತಿದ್ದ ಕೃಷ್ಣಾ ನದಿಗೆ ಎಸೆದಿದ್ದಾರೆ. ನಂತರ ಅವರಿಬ್ಬರ ಬಟ್ಟೆಗಳನ್ನು ಸಂಗಮ ಕ್ರಾಸ್ ಬಳಿ ತಂದು ಸುಟ್ಟು ಹಾಕಿದ್ದಾರೆ.
ವಿಚಾರಣೆಗೆ ಸಂದರ್ಭದಲ್ಲಿ ಅನುಮಾನಗೊಂಡ ಪೊಲೀಸರು, ಶಂಕೆಯ ಮೇರೆಗೆ ಅಕ್ಟೋಬರ್ 15 ರಂದು ಯುವತಿಯ ಸಹೋದರ ರವಿ ಹುಲ್ಲಣ್ಣವರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಆರೋಪಿ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.
ಯುವತಿ ತಂದೆ ಪರಸಪ್ಪ ಕರಡಿ ಕುಮ್ಮಕ್ಕಿನಿಂದಲೇ ಕೊಲೆ ಮಾಡಿದ್ದಾಗಿ ಹೇಳಿದ್ದಾನೆ ಎನ್ನಲಾಗಿದೆ. ಪ್ರಕರಣದ ಸಂಬಂಧ ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು, ರಾಜೇಶ್ವರಿ ಕರಡಿ (17) ವಿಶ್ವನಾಥ ನೆಲಗಿ (22) ಕೊಲೆಯಾದ ಪ್ರೇಮಿಗಳು. ಪ್ರಕರಣದಲ್ಲಿ ರಾಜೇಶ್ವರಿ ಅಣ್ಣ ರವಿ ಹುಲ್ಲಣ್ಣವರ (19), ಮಾವಂದಿರರಾದ ಹನುಮಂತ ಮಲ್ನಾಡದ (22), ಬೀರಪ್ಪ ದಳವಾಯಿ (18) ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.