ಸೀಟ್ ಬೆಲ್ಟ್ ಧರಿಸದಿದ್ದರೆ ದಂಡ ದುಪ್ಪಟ್ಟು: ಆದೇಶ ಜಾರಿಗೊಳಿಸಿದ ಪೊಲೀಸ್ ಇಲಾಖೆ | JANATA NEWS

ಬೆಂಗಳೂರು : ರಾಜ್ಯದಲ್ಲಿ ಸೀಟ್ ಬೆಲ್ಟ್ ಧರಿಸದೇ ಕಾರು ಚಲಾಯಿಸಿದರೆ ದಂಡದ ಪ್ರಮಾಣ ದುಪ್ಪಟ್ಟಾಗಲಿದೆ. ಐದು ನೂರು ರೂಪಾಯಿ ಇದ್ದ ದಂಡದ ಹಣವನ್ನ ಒಂದು ಸಾವಿರಕ್ಕೆ ಏರಿಸಲಾಗಿದೆ.
ಸಂಚಾರ ನಿಯಮ ಪಾಲಿಸುವಂತೆ ಮಾಡುವ ಹಾಗೂ ರಸ್ತೆ ಅಪಘಾತ ತಗ್ಗಿಸುವ ಹಿನ್ನೆಲೆಯಲ್ಲಿ ಆಗಾಗ ನಿಯಮಗಳು ಪರಿಷ್ಕೃತವಾಗುತ್ತಿದ್ದು, ಇದೀಗ ಸೀಟ್ಬೆಲ್ಟ್ ಧರಿಸದ್ದಕ್ಕೆ ವಿಧಿಸುವ ದಂಡದಲ್ಲೂ ಪರಿಷ್ಕರಣೆ ಆಗಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸೂಚನೆ ಮೇರೆಗೆ ಪೊಲೀಸ್ ಇಲಾಖೆ ಹೊಸ ನಿಯಮವನ್ನು ಜಾರಿಗೆ ತಂದಿದೆ. ಸೀಟ್ ಬೆಲ್ಟ್ ಧರಿಸದೇ ವಾಹನ ಚಲಾಯಿಸುವವರ ವಿರುದ್ಧ ಒಂದು ಸಾವಿರ ರೂ. ದಂಡ ವಿಧಿಸಲು ರಾಜ್ಯದ ಎಲ್ಲ ಕಮೀಷನರೇಟ್ ಮತ್ತು ಎಸ್ಪಿಗಳಿಗೆ ಆದೇಶಿಸಲಾಗಿದೆ.
ಹೊಸ ಆದೇಶದ ಪ್ರಕಾರ ಸೀಟ್ಬೆಲ್ಟ್ ಧರಿಸದೆ ಸಿಕ್ಕಿಹಾಕಿಕೊಂಡರೆ 1 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಈ ಹಿಂದೆ ಇದು 500 ರೂ. ಇದ್ದು, ಈಗ ಪರಿಷ್ಕೃತ ಆದೇಶದಲ್ಲಿ ದುಪ್ಪಟ್ಟುಗೊಳಿಸಲಾಗಿದೆ.