ವಿದ್ಯುತ್ ತಗುಲಿ ಇಬ್ಬರು ಫೋಟೋಗ್ರಾಫರ್ ಸಾವು | JANATA NEWS

ಮಂಡ್ಯ : ದೀಪಾವಳಿ ಹಬ್ಬದ ಹಿನ್ನೆಲೆ ಸ್ಟುಡಿಯೋ ಕ್ಲೀನ್ ಮಾಡುತ್ತಿದ್ದ ವೇಳೆ ವಿದ್ಯುತ್ ಶಾರ್ಟ್ಸರ್ಕ್ಯೂಟ್ನಿಂದ ಇಬ್ಬರು ಫೋಟೋಗ್ರಾಫರ್ಗಳು ಮೃತಪಟ್ಟಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬೆಸಗರಹಳ್ಳಿಯಲ್ಲಿ ಈ ಅವಘಡ ಸಂಭವಿಸಿದೆ.
ಮೃತ ಫೋಟೋಗ್ರಾಫರ್ ಅನ್ನು ವಿವೇಕ್(45) ಮತ್ತು ಮಧುಸೂಧನ್(35) ಎಂದು ಗುರುತಿಸಲಾಗಿದೆ.
ದೀಪಾವಳಿ ಹಬ್ಬದ ನಿಮಿತ್ತ, ಮಧುಸೂದನ ಮತ್ತು ವಿವೇಕ ಸ್ಟುಡಿಯೋ ಸ್ವಚ್ಛಗೊಳಿಸುತ್ತಿದ್ದರು. ಈ ವೇಳೆ ಕಬ್ಬಿಣದ ಬೋರ್ಡ್ ತೆರವುಗೊಳಿಸಿ ಸ್ವಚ್ಛಗೊಳಿಸುತ್ತಿದ್ದಾಗ 11 ಕೆ.ವಿ ವಿದ್ಯುತ್ ತಗುಲಿ ಇಬ್ಬರು ಛಾಯಾಗ್ರಾಹರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬೆಸಗರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
RELATED TOPICS:
English summary :Two photographers die in electrocution