ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ: ಹನಿಟ್ರ್ಯಾಪ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್! | JANATA NEWS

ರಾಮನಗರ : ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ಅತೀ ದೊಡ್ಡ ಭಕ್ತವೃಂದ ಹೊಂದಿರುವ ಕಂಚುಗಲ್ ಬಂಡೆಮಠ ಎಂದೇ ಖ್ಯಾತಿ ಪಡೆದಿದೆ. ಬಂಡೆ ಮಠದ ಬಸವಲಿಂಗ ಸ್ವಾಮೀಜಿ ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶ್ರೀ ಕಂಚುಗಲ್ ಬಂಡೇಮಠದ ಗುರು ಮಡಿವಾಳೇಶ್ವರ ಬಸವಲಿಂಗ ಸ್ವಾಮೀಜಿ ಸ್ವಾಮೀಜಿ(45) ಮಠದಲ್ಲೇ ನೇಣಿಗೆ ಶರಣಾಗಿದ್ದಾರೆ. ರಾಮನಗರ ಜಿಲ್ಲೆ ಮಾಗಡಿ ತಾಲೂಕಿನಲ್ಲಿರುವ ಬಂಡೇಮಠದಲ್ಲಿ ನೇಣಿಗೆ ಶರಣಾಗಿದ್ದಾರೆ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕುದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೂರು ಪುಟಗಳ ಡೆತ್ನೋಟ್ ಪತ್ತೆಯಾಗಿದೆ. ಬಸವಲಿಂಗ ಶ್ರೀಗಳಿಗೆ ಕಿರುಕುಳ ನೀಡ್ತಿದ್ದವರ ಹೆಸರನ್ನು ಡೆತ್ ನೋಟ್ನಲ್ಲಿ ಉಲ್ಲೇಖ ಮಾಡಿದ್ದಾರೆ ಎನ್ನಲಾಗ್ತಿದೆ.
ಸ್ವಾಮೀಜಿ ಐದು ಪುಟದ ಡೆತ್ ನೋಟ್ ಬರೆದಿದ್ದಾರೆ, ಮೂರು ಪುಟ ಪೊಲೀಸರಿಗೂ ಸಿಕ್ಕಿದ್ದು, ತನಿಖೆ ನಡೆಯುತ್ತಿದೆ. ಡೆತ್ನೋಟ್ ಬಗ್ಗೆ ಸಾಕಷ್ಟು ಊಹಾಪೋಹಗಳು ಕೇಳಿಬರುತ್ತಿವೆ.
ಈ ಮಠವು ಸಿದ್ದಗಂಗಾ ಮಠದ ಶಾಖಾಮಠದ ಮೂಲ ಮಠವಾಗಿದೆ. ಮರ್ಯಾದೆಗೆ ಅಂಜಿ ಆತ್ಮಹತ್ಯೆ ನಿರ್ಧಾರ ಮಾಡಿದ್ದು, ಯಾವುದೋ ಆಡಿಯೋ, ವಿಡಿಯೋ ಅಪಾದನೆಯಿಂದ ವರ್ಚಸ್ಸಿಗೆ ಧಕ್ಕೆಯುಂಟಾಗುತ್ತದೆ ಎಂಬ ಹಿನ್ನೆಲೆ ಶ್ರೀಗಳು ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುವ ಡೆತ್‌ನೋಟ್ ನಿಜವಾದುದಲ್ಲ, ಕೇವಲ 1-2 ಅಂಶಗಳು ಸಾಮ್ಯತೆ ಇದೆ ಎಂದಿದ್ದಾರೆ.
ಸಾಯುವ ಮುನ್ನ ಸ್ವಾಮೀಜಿ ಮೂರು ಪುಟಗಳ ಡೆತ್ ನೋಟ್ ಬರೆದಿದ್ದು, ನನ್ನ ಮಠವನ್ನು ಕಿತ್ತುಕೊಳ್ಳಬೇಕು, ನಾನು ಅವರ ಕಂಟ್ರೋಲ್ನಲ್ಲಿರಬೇಕು, ಇದೇ ಕಾರಣಕ್ಕೆ ಮಠಕ್ಕೆ ಆ ಸ್ವಾಮೀಜಿ ಓರ್ವ ಯುವತಿಯನ್ನು ಬಿಟ್ಟಿದ್ರು, ಆ ಯುವತಿಯ ಸಲುಗೆಗೆ ಮರುಳಾಗಿ ನಾನು ಹೆಣ್ಣಿನ ಮೋಹಕ್ಕೆ ಬಿದ್ದಿದ್ದೆ. ಇದನ್ನು ವಿಡಿಯೋ ಮಾಡಿ ಪ್ರತಿದಿನ ಚಿತ್ರಹಿಂಸೆ ನೀಡ್ತಾ ಇದ್ರು ಎಂದು ಬಸವಲಿಂಗಶ್ರೀ ಡೆತ್ನೋಟ್ ಬರೆದಿದ್ದಾರೆ ಎನ್ನಲಾಗಿದೆ.. ಸದ್ಯ ಡೆತ್ನೋಟ್, ಸ್ವಾಮೀಜಿಯ ಎರಡು ಮೊಬೈಲ್ ಸೀಜ್ ಮಾಡಲಾಗಿದ್ದು, ಕುದೂರು ಪೊಲೀಸರು FSL ಪರೀಕ್ಷೆಗೆ ಕಳಿಸಿದ್ದಾರೆ ಎನ್ನಲಾಗಿದೆ. ತನಿಖೆಯ ಬಳಿಕವಷ್ಟೇ ಸತ್ಯಾಸತ್ಯತೆ ಹೊರಬೀಳಬೇಕಿದೆ