ಕಲುಷಿತ ನೀರು ಸೇವಿಸಿ 50ಕ್ಕೂ ಹೆಚ್ಚು ಜನ ಅಸ್ವಸ್ಥ | JANATA NEWS

ಬೆಳಗಾವಿ : ಕಲುಷಿತ ನೀರು ಸೇವಿಸಿ 3 ದಿನಗಳ ಅಂತರದಲ್ಲಿ 50 ಕ್ಕೂ ಅಧಿಕ ಜನರು ಅಸ್ವಸ್ಥಗೊಂಡಿರುವ ಘಟನೆ ಮುದೇನೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಬೋರ್‌ವೆಲ್‌ನಿಂದ ಬರುವ ನೀರನ್ನು ಸುಮಾರು ಒಂದು ವಾರದಿಂದ ಗ್ರಾಮಸ್ಥರು ಸೇವಿಸಿದ್ದಾರೆ. ಗ್ರಾಮದ ಎಲ್ಲರಿಗೂ ಏಕಕಾಲಕ್ಕೆ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ವಾಂತಿಭೇದಿ ಶುರುವಾಗಿದೆ.
ಬೋರ್‌ವೆಲ್ ನಿಂದ ಬರುವ ನೀರಿನ ಪೈಪ್ ಒಡೆದು, ಅದಕ್ಕೆ ಚರಂಡಿ ನೀರು ಸೇರಿಕೊಂಡಿದೆ. ಹಲವು ಭಾರಿ ಪಂಚಾಯತಿ ಪಿಡಿಒ ಗಮನ ಸೆಳೆದರೂ ಯಾವುದೇ ದುರಸ್ತಿ ಮಾಡದ ಕಾರಣ ಈ ಘಟನೆ ನಡೆದಿದೆ. ಇದಕ್ಕೆ ಪಂಚಾಯತಿಯವರೇ ಹೊಣೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮಕ್ಕೆ ರಾಯದುರ್ಗ ಶಾಸಕ ಮಹದೇವಪ್ಪ ಯಾದವಾಡ ಭೇಟಿ ನೀಡಿದ್ದು, ಅಸ್ವಸ್ಥರಿಗೆ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.