ಪತ್ನಿಯ ಕತ್ತು ಹಿಸುಕಿ ಕೊಲೆಗೈದು ಪತಿ ಆತ್ಮಹತ್ಯೆ | JANATA NEWS

ಮಂಗಳೂರು : ಪತ್ನಿಯ ಕತ್ತು ಹಿಸುಕಿ ಕೊಂದು ಪತಿ ನೇಣಿಗೆ ಶರಣಾಗಿರುವಂತಹ ಘಟನೆ ಮಂಗಳೂರು ಹೊರವಲಯದ ಪಿಲಾರು ಎಂಬಲ್ಲಿ ನಡೆದಿದೆ.
ಪಿಲಾರು ನಿವಾಸಿ ಶೋಭಾ ಪೂಜಾರಿ(45) ಕೊಲೆಯಾದ ಮಹಿಳೆ. ಶಿವಾನಂದ(55) ನೇಣಿಗೆ ಶರಣಾದ ಪತಿ.
ಪೈಂಟರ್ ಕೆಲಸ ಮಾಡುತ್ತಿದ್ದ ಶಿವಾನಂದಗೆ ಪತ್ನಿ ಮೇಲೆ ಸಂಶಯ ಎನ್ನಲಾಗಿದೆ. ಅನೇಕ ಬಾರಿ ಸಂಶಯ ಪಟ್ಟು ಪತ್ನಿ ಜೊತೆ ಜಗಳ ಮಾಡಿದ್ದ ಎನ್ನಲಾಗಿದೆ. ಹಲವರ ಜೊತೆಗೆ ಅನೈತಿಕ ಸಂಬಂಧ ಇದೆ ಎಂದು ಪತ್ನಿಯ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿದ್ದರು.
ಗುರುವಾರ ಬೆಳಗ್ಗೆ ಕೂಡ ಪತ್ನಿಯೊಂದಿಗೆ ಜಗಳವಾಡಿದ್ದರು ಎನ್ನಲಾಗ್ತಿದೆ. ಮಗ ಕೆಲಸಕ್ಕೆ ತೆರಳಿದ್ದ ವೇಳೆ ಶಿವಾನಂದ ತಮ್ಮ ಪತ್ನಿಯನ್ನು ಹತ್ಯೆ ಮಾಡಿ ಬಳಿಕ ತಾವು ಸಹ ನೇಣು ಬಿಗಿದುಕೊಂಡು ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.