Fri,Dec09,2022
ಕನ್ನಡ / English

ಸರ್ಕಾರಿ ಶಾಲಾ-ಕಾಲೇಜುಗಳಿಗೆ ಪ್ರಹ್ಲಾದ್ ಜೋಶಿ ಬಂಪರ್ ಗಿಫ್ಟ್, 1177 ಸರ್ಕಾರಿ ಶಾಲೆಗಳಿಗೆ ಬಣ್ಣದರ್ಪಣೆ | JANATA NEWS

28 Oct 2022
548

ಧಾರವಾಡ : ಧಾರವಾಡ ಲೋಕಸಭಾ ಕ್ಷೇತ್ರದ ಎಲ್ಲಾ ಸರ್ಕಾರಿ ಶಾಲಾ ಕಾಲೇಜುಗಳಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ದೀಪಾವಳಿ ಬಂಪರ್ ಗಿಫ್ಟ್ ನೀಡಿದ್ದಾರೆ. 1177 ಶಾಲಾ ಕಾಲೇಜುಗಳಿಗೆ ಹೊಸದಾಗಿ ಬಣ್ಣ ಹಚ್ವುವ ಬಣ್ಣದರ್ಪಣೆ ಕಾರ್ಯಕ್ರಮದ ಜೊತೆಗೆ, 320 ಹೊಸ ಕ್ಲಾಸ್ ರೂಮ್ ಗಳನ್ನ ಕಟ್ಟಿಸಿಕೊಡುವುದಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಘೋಷಿಸಿದ್ದಾರೆ.

ಪ್ರಹ್ಲಾದ್ ಜೋಶಿ ಅವರು ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು‌ ಹೊಸ ಹೊಸ ಕಾರ್ಯಕ್ರಮಗಳ ಮೂಲಕ ನಮಗೆ ಪ್ರೇರಣೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಿಗೆ ಹೊಸ ರೂಪ ನೀಡಲು ಬಣ್ಣದರ್ಪಣೆ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ನಾಳೆ ಕುಂದಗೋಳದ ಹರಭಟ ಶಾಲೆ ಮೈದಾನದಲ್ಲಿ ಚಾಲನೆ ನೀಡಲಾಗುತ್ತದೆ ಎಂದರು.

ಸರ್ಕಾರಿ ಶಾಲಾ, ಕಾಲೇಜುಗಳಿಗೆ ಬಣ್ಣದರ್ಪಣೆ ಮಾಡುವ ಕಾರ್ಯಕ್ಕೆ ಮುಂದಾಗಿದ್ದು, ಕೆಲವರು ಶಾಲೆ ಹಾಳಾಗಿದೆ, ಕೆಲವರು ಶಾಲೆ ಕೆಟ್ಟಿದೆ, ಶಾಲೆ ಗಲೀಜಾಗಿದೆ ಎಂದೆಲ್ಲಾ ಬರುತ್ತಿದ್ದಾರೆ. ಎಲ್ಲವನ್ನೂ ನೋಡಿದ ಬಳಿಕ ಇಂತಹ ಶಾಲೆಗಳಿಗೆ ಹೊಸ ಸ್ವರೂಪ ನೀಡಲು ಹೊಸ ಯೋಜನೆ ರೂಪಿಸಲಾಗುತ್ತಿದೆ.

ಪ್ರಲ್ಹಾದ್ ಜೋಶಿ ಅವರ ಕ್ಷಮತಾ ಸೇವಾ ಸಂಸ್ಥೆಯಿಂದ ಉಚಿತವಾಗಿ ಬಣ್ಣವನ್ನ ನೀಡಲಾಗುವುದು. ಕ್ಲಾಸ್ ರೂಮ್ ಗಳಿಗೆ ಬಣ್ಣ ಹಚ್ಚಲು 20 ಲೀಟರ್ ಪೇಂಟ್ ಅನ್ನ ಉಚಿತವಾಗಿ ನೀಡಲಾಗುವುದು ಎಂದು ಜೋಶಿ ಹೇಳಿದರು. ಶಾಲೆಯ ಹೊರ ಗೋಡೆಗಳಿಗೂ ಪ್ರತ್ಯೇಕವಾಗಿ ಬಣ್ಣ ವಿತರಿಸಲಾಗುವುದು. ಶಾಲೆಗಳಿಗೆ ಬಣ್ಣ ಹಚ್ಚಲು ಶ್ರಮದಾನದ ಕಾರ್ಯಕ್ಕೆ ವಿದ್ಯಾರ್ಥಿ ಸಂಘಟನೆಗಳು, ಸೇವಾ ಸಂಘಸಂಸ್ಥೆಗಳು, ಶಿಕ್ಷಕರು ಮುಂದೆ ಬರಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನವಿ ಮಾಡಿದರು. 20 ರೂಪಾಯಿ ಬಾಂಡ್ ಪೇಪರ್ ಮೇಲೆ ಸಹಿ ಹಾಕಿ ಶಾಲೆಗೆ ಬಣ್ಣ ಹಚ್ಚುವ ಒಪ್ಪಂದದೊಂದಿಗೆ ಸಂಘ ಸಂಸ್ಥೆಗಳು ಉಚಿತವಾಗಿ ಬಣ್ಣ ಪಡೆಯಬಹುದಾಗಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜನ ಭಾಗೀಧಾರಿ ಆಂದೋಲನಗಳನ್ನು ದೇಶಕ್ಕೆ ಪರಿಚಯಿಸಿದರು.ಸ್ವಚ್ಛ ಭಾರತ ಇರಬಹುದು, ಗಂಗಾ ಕಲ್ಯಾಣ ಯೋಜನೆಗಳಿಗೆ ಜನರಿಂದ ಬಹಳ ಅದ್ಭುತವಾದ ಪ್ರತಿಕ್ರಿಯೆ ದೊರಕಿತು. ಅದೇ ರೀತಿಯಲ್ಲಿ ನಮ್ಮ ಜಿಲ್ಲೆಯಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಈ ರೀತಿಯ ಅಭಿಯಾನ ಮಾಡಲು ಮುಂದಾಗಿದ್ದೇವೆ. ಇದೇನು ವೋಟು ಗಿಟ್ಟಿಸುವ ಕಾರ್ಯಕ್ರಮವಲ್ಲ. ಇದರಲ್ಲಿ ಸ್ವಚ್ಛತೆಯಿಂದ ಸೌಂದರ್ಯದೆಡೆಗೆ ಎಂಬ ಧ್ಯೇಯವಾಕ್ಯವನ್ನು ಇಟ್ಟುಕೊಂಡು ಈ ಬಣ್ಣದರ್ಪಣೆ ಅಭಿಯಾನ ನಡೆಸಲು ಮುಂದಾಗಿದ್ದೇವೆ. ಈ ಕಾರ್ಯಕ್ರಮದಲ್ಲಿ ಒಟ್ಟು 1177 ಶಾಲೆ ಕಾಲೇಜುಗಳಿದ್ದು ಅದರಲ್ಲಿ 984 ಪ್ರಾಥಮಿಕ ಶಾಲೆಗಳು,139 ಪ್ರೌಢಶಾಲೆ, ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳ ಸಂಖ್ಯೆ 54 ಇದೆ ಎಂದು ಮಾಹಿತಿ ನೀಡಿದರು.

RELATED TOPICS:
English summary :Prahlad Joshi bumper gift to govt schools and colleges, 1177 govt schools painted

ಪತ್ನಿ ಬಗ್ಗೆ ಕೆಟ್ಟದಾಗಿ ಮಾತನಾಡಿದ ಸ್ನೇಹಿತನ ಹತ್ಯೆ: ಆರೋಪಿ ಬಂಧನ
ಪತ್ನಿ ಬಗ್ಗೆ ಕೆಟ್ಟದಾಗಿ ಮಾತನಾಡಿದ ಸ್ನೇಹಿತನ ಹತ್ಯೆ: ಆರೋಪಿ ಬಂಧನ
ಕರ್ನಾಟಕದಲ್ಲಿ ನಾವು ಸುಮ್ಮನೆ ಇದ್ದರೂ ಗೆಲ್ತೀವಿ: ಸಿದ್ದರಾಮಯ್ಯ
ಕರ್ನಾಟಕದಲ್ಲಿ ನಾವು ಸುಮ್ಮನೆ ಇದ್ದರೂ ಗೆಲ್ತೀವಿ: ಸಿದ್ದರಾಮಯ್ಯ
ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು
ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು
ಗುಣಮಟ್ಟ , ಕಡಿಮೆ ವೆಚ್ಚ ಇದ್ದರೆ ಮಾತ್ರ ರ‍್ಯಾಪಿಡ್‌ ರಸ್ತೆ ಪರಿಗಣನೆ
ಗುಣಮಟ್ಟ , ಕಡಿಮೆ ವೆಚ್ಚ ಇದ್ದರೆ ಮಾತ್ರ ರ‍್ಯಾಪಿಡ್‌ ರಸ್ತೆ ಪರಿಗಣನೆ
ಸಿದ್ರಾಮುಲ್ಲಾಖಾನ್ ಎಂದು ನನ್ನ ಹೆಸರಿಗೆ ಮುಸ್ಲಿಮ್ ಹೆಸರು ಸೇರಿಸಿರುವುದು ನನಗೆ ಬೇಸರವಿಲ್ಲ!
ಸಿದ್ರಾಮುಲ್ಲಾಖಾನ್ ಎಂದು ನನ್ನ ಹೆಸರಿಗೆ ಮುಸ್ಲಿಮ್ ಹೆಸರು ಸೇರಿಸಿರುವುದು ನನಗೆ ಬೇಸರವಿಲ್ಲ!
ನನ್ನನ್ನು ಮುಲ್ಲಾ ಅಂತಾ ಕರೆದರೆ ಮುಲ್ಲಾಗಳು ಒಪ್ಪಿಕೊಳ್ಳಲ್ಲ
ನನ್ನನ್ನು ಮುಲ್ಲಾ ಅಂತಾ ಕರೆದರೆ ಮುಲ್ಲಾಗಳು ಒಪ್ಪಿಕೊಳ್ಳಲ್ಲ
ಚಿತ್ರದುರ್ಗ ವೈದ್ಯೆ ರೂಪಾ ಸಾವು ಕೇಸ್: ಪೋಸ್ಟ್ ಮಾರ್ಟಂನಲ್ಲಿ ಸಾವಿನ ರಹಸ್ಯ ಬಯಲು!
ಚಿತ್ರದುರ್ಗ ವೈದ್ಯೆ ರೂಪಾ ಸಾವು ಕೇಸ್: ಪೋಸ್ಟ್ ಮಾರ್ಟಂನಲ್ಲಿ ಸಾವಿನ ರಹಸ್ಯ ಬಯಲು!
ಭೀಕರ ಅಪಘಾತ: ಸರ್ಕಲ್​ ಇನ್​ಸ್ಪೆಕ್ಟರ್, ಪತ್ನಿ ಸಾವು
ಭೀಕರ ಅಪಘಾತ: ಸರ್ಕಲ್​ ಇನ್​ಸ್ಪೆಕ್ಟರ್, ಪತ್ನಿ ಸಾವು
ಬಿಜೆಪಿಗೆ ಸೇರಲು ಮುಂದಾದ ರೌಡಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್
ಬಿಜೆಪಿಗೆ ಸೇರಲು ಮುಂದಾದ ರೌಡಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್
ಆ ದಿನಗಳು ಕಥೆ ಯಾರದ್ದು ಎಂದು ಸಿದ್ದರಾಮಯ್ಯ ಹೇಳಬೇಕು: ಸಿದ್ದರಾಮಯ್ಯಗೆ ಸಿ.ಟಿ ರವಿ ತಿರುಗೇಟು
ಆ ದಿನಗಳು ಕಥೆ ಯಾರದ್ದು ಎಂದು ಸಿದ್ದರಾಮಯ್ಯ ಹೇಳಬೇಕು: ಸಿದ್ದರಾಮಯ್ಯಗೆ ಸಿ.ಟಿ ರವಿ ತಿರುಗೇಟು
ಕಾಲು ಜಾರಿ ಕಾಲುವೆಗೆ ಬಿದ್ದು ಇಬ್ಬರು ರೈತರ ಸಾವು
ಕಾಲು ಜಾರಿ ಕಾಲುವೆಗೆ ಬಿದ್ದು ಇಬ್ಬರು ರೈತರ ಸಾವು
ಏಳು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಜೋಡಿ, ಪತ್ನಿ ಮೇಲೆ ಪತಿಗೆ ಅನುಮಾನ: ನೇಣು ಹಾಕಿಕೊಂಡ ಪತ್ನಿ
ಏಳು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಜೋಡಿ, ಪತ್ನಿ ಮೇಲೆ ಪತಿಗೆ ಅನುಮಾನ: ನೇಣು ಹಾಕಿಕೊಂಡ ಪತ್ನಿ

ನ್ಯೂಸ್ MORE NEWS...