ನೀನು ಅಧಿಕಾರದಲ್ಲಿದ್ದಾಗ ಏನು ಮಾಡಿದೆ ಎಂದು ಎಲ್ಲವೂ ಗೊತ್ತಿದೆ: ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ರಾಮುಲು ವಾಗ್ದಾಳಿ | JANATA NEWS

ಗದಗ : ನೀನು ಅಧಿಕಾರದಲ್ಲಿದ್ದಾಗ ಏನು ಮಾಡಿದೆ ಎಂದು ಎಲ್ಲವೂ ಗೊತ್ತಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಕೊಡಲಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ..
ಗದಗದಲ್ಲಿ ಮಾತಾಡಿದ ಸಚಿವ ಶ್ರೀರಾಮುಲು ಅವರು ಸಿಎಂ ಸಿದ್ದರಾಮಯ್ಯ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಕೊಡಬೇಕು ಅಂತಾ ಇದೆ. ಇದನ್ನು ಡಾ.ಅಂಬೇಡ್ಕರ್ ಸಂವಿಧಾನದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ ಇವತ್ತು ಎಸ್ಸಿ, ಎಸ್ಟಿಗೆ ಬಿಜೆಪಿ ಸರ್ಕಾರ ಮೀಸಲಾತಿ ಕೊಟ್ಟಿದೆ. ನಮ್ಮ ಸರ್ಕಾರ ಕೊಟ್ಟ ಬಳಿಕ ಏನೇನೋ ಹೇಳ್ತಾ ಇದ್ದೀರಲ್ಲಾ, ಈಗ ನಿಮ್ಮ ಮಾತುಗಳನ್ನು ಕೇಳುವ ಪರಿಸ್ಥಿತಿಯಲ್ಲಿ ಯಾರೂ ಇಲ್ಲ ಎಂದು ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ.
ಜೇನುಗೂಡಿಗೆ ಕಲ್ಲು ಹಾಕುದು ಬೇಡ ಅಂತ ಮೀಸಲಾತಿ ನೀಡಿರಲಿಲ್ಲ. ಜಸ್ಟಿಸ್ ನಾಗಮೋಹನ ದಾಸ್ ಅವರ ವರದಿಯನ್ನೂ ಜಾರಿ ಮಾಡ್ಲಿಲ್ಲ. ಮಂಡಲ್ ಕಮೀಷನ್ ಆಗುವಾಗ ಸಿದ್ದರಾಮಯ್ಯ ಎಲ್ಲಿದ್ದರು?ಇವತ್ತು ಮಂಡಲ್ ಕಮೀಷನ್, ನಾಗಮೋಹನದಾಸ್ ವರದಿ ಜಾರಿ ಬಗ್ಗೆ ಕೇಳಿತ್ತೀಯಾ? ನೀನೇನು ಮಾಡಿದ್ದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಏಕ ವಚನದಲ್ಲೇ ರಾಮುಲು ಪ್ರಶ್ನೆ ಮಾಡಿದ್ದಾರೆ.
ಬಾಬಾ ಸಾಹೇಬರ ಆಶಯದಂತೆ ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ನೀಡಲಾಗಿದೆ. ಮೀಸಲಾತಿ ಕೊಟ್ಟ ನಂತರ ನಿನ್ನ ಕಥೆ ಕೇಳುವವರು ಇಲ್ಲಿ ಯಾರೂ ಇಲ್ಲ. ನಿನ್ನ ಅಹಂಕಾರ ಜಾಸ್ತಿಯಾಗಿದೆ. ಚುನಾವಣೆಯಲ್ಲಿ ಜನರು ಅಹಂಕಾರ ಇಳಿಸಲಿದ್ದಾರೆ ಎಂದು ಶ್ರೀರಾಮುಲು ಹೇಳಿದ್ದಾರೆ.
ರಾಮುಲು ಎಲ್ಲಿದ್ರು ಅಂತಾ ಗೋತ್ತಿಲ್ಲಾ, ನೀನು ಅಧಿಕಾರದಲ್ಲಿದ್ದಾಗ ಏನು? ಮಾಡಿದ್ದೀಯಾ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಕೊಟ್ಟಿಯಾ..? ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನೀಡಿ ಎಂದು ಹೇಳಿದ್ದಾರೆ. ಜನರು ನಿನ್ನನ್ನೂ ತಿರಸ್ಕಾರ ಮಾಡಿದ್ದಾರೆ. ಮುಂದಿನ ದಿನದಲ್ಲಿ ನಿನ್ನ ಅಹಂಕಾರ ಜಾಸ್ತಿಯಾದ್ರೆ ಖಂಡಿತ ನೀನು ಮನೆಗೆ ಹೋಗುತ್ತೀಯಾ ನಿನ್ನ ಅಹಂಕಾರವನ್ನು ಚುನಾವಣೆಯಲ್ಲಿ ಜನರು ಇಳಿಸುವ ಕೆಲಸ ಮಾಡುತ್ತಾರೆ ಎಂದು ರಾಮುಲು ಗುಡುಗಿದ್ದಾರೆ.