Fri,Dec09,2022
ಕನ್ನಡ / English

ಸಿದ್ದರಾಮಯ್ಯಗೆ ಧಮ್ ಇದ್ದರೆ ಬಾದಾಮಿಯಿಂದ ಸ್ಪರ್ಧೆ ಮಾಡಲಿ, ಇಲ್ಲವೆ ಚಾಮುಂಡಿ ಕ್ಷೇತ್ರಕ್ಕೆ ಬಂದು ನೋಡಲಿ | JANATA NEWS

31 Oct 2022
524

ಬೆಂಗಳೂರು : ಧಮ್ ಇದ್ದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾದಾಮಿಯಿಂದ ಸ್ಫರ್ಧೆ ಮಾಡಲಿ; ಇಲ್ಲವೆ ಚಾಮುಂಡಿ ಕ್ಷೇತ್ರಕ್ಕೆ ಬಂದು ನೋಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಸವಾಲು ಹಾಕಿದ್ದಾರೆ.

ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಸಿಎಂ ಆದವರಿಗೆ ಅವರ ಕ್ಷೇತ್ರದಲ್ಲಿ ನಿಲ್ಲಲು ಯೋಗ್ಯತೆ ಇಲ್ಲವೆಂದಾದರೆ ಅವರಿಗೆ ಬೇರೆಯವರ ಬಗ್ಗೆ ಮಾತನಾಡೋ ಹಕ್ಕೇನಿದೆ, ನೈತಿಕತೆ ಇದೆಯಾ..? ಕ್ಷೇತ್ರ ಹುಡುಕುವ ದುಸ್ಥಿತಿ ಇವರಿಗೆ ಬಂದಿದೆ. ಮೋದಿಯವರ ಬಗ್ಗೆ ಏಕವಚನದಲ್ಲಿ ಮಾತನಾಡ್ತಾರೆ. ಮೋದಿ ಹೋದಲ್ಲಿ ಗೆಲ್ತಾರೆ, ಸಿದ್ರಾಮಣ್ಣ, ರಾಹುಲ್ ಹೋದಲ್ಲೆಲ್ಲಾ ಸೋಲ್ತಾರೆ. ಸಿದ್ದು ಚಾಮುಂಡಿ, ಬಾದಾಮಿ ಆಯ್ತು ಈಗ ಕೋಲಾರ ಕಡೆ ನೋಡ್ತಿದ್ದಾರೆ ಎಂದರು.

ಮೋದಿಯವರ ಬಗ್ಗೆ ಏಕವಚನದಲ್ಲಿ ಮಾತನಾಡ್ತಾರೆ. ಮೋದಿ ಹೋದಲ್ಲಿ ಗೆಲ್ತಾರೆ, ಸಿದ್ರಾಮಣ್ಣ, ರಾಹುಲ್ ಹೋದಲ್ಲೆಲ್ಲಾ ಸೋಲ್ತಾರೆ. ಸಿದ್ದು ಚಾಮುಂಡಿ, ಬಾದಾಮಿ ಆಯ್ತು ಈಗ ಕೋಲಾರ ಕಡೆ ನೋಡ್ತಿದ್ದಾರೆ. ಅವರಿಗೆ ಸ್ಥಿರ ಕ್ಷೇತ್ರವಿಲ್ಲ. ಸಿದ್ದರಾಮಯ್ಯ ಒಬ್ಬ ರಾಜಕೀಯ ಮುತ್ಸದ್ದಿ ಅಂತಾದರೆ ಎದೆ ತಟ್ಟಿ ಹೇಳಬೇಕು. ಕಾಂಗ್ರೆಸ್ ಕಡಿಮೆ ಅಂತರದಿಂದ ಗೆಲ್ಲುವ ಕ್ಷೇತ್ರದಿಂದ ಗೆಲ್ತೇನೆ ಅಂತ ಹೇಳಬೇಕು ಎಂದರು.

ಮೋದಿ ಅವರು ಬಿಜೆಪಿ ವೀಕ್ ಪ್ಲೇಸ್ ವಾರಣಾಸಿಗೆ ಹೋಗಿ ಅತಿಹೆಚ್ಚು ವೋಟ್‌ ಗಳಿಸಿದ್ರು. ಯಡಿಯೂರಪ್ಪನವರು ನಿರಂತರವಾಗಿ ಶಿಕಾರಿಪುರದಿಂದಲೇ ಗೆದ್ರು. ಒಂದು ದಿನ ಕ್ಷೇತ್ರ ಬಿಡಲಿಲ್ಲ. ಇದು ಯಡಿಯೂರಪ್ಪ ತಾಕತ್. ಕ್ಷೇತ್ರ ಹುಡುಕುವ ನಾಯಕರಿಂದ ಕಾಂಗ್ರೆಸ್ ಹೀನಾಯ ಸ್ಥಿತಿಯಲ್ಲಿದೆ. ಇಷ್ಟಿದ್ದರೂ ಕಾಂಗ್ರೆಸ್ ನಲ್ಲಿ ಸಿಎಂ ಸ್ಥಾನಕ್ಕೆ ಸಿದ್ದು ಮುಂದಾಗಿ ಪೈಪೋಟಿ ನಡೆಸಿರೋದು ನಾಟಕ, ಹಾಸ್ಯ. ಕಾಂಗ್ರೆಸ್ ನಲ್ಲಿ ಈಗ ಗೊಂದಲ ಶುರುವಾಗಿದೆ, ಬಿಜೆಪಿಯಲ್ಲಿ ಗೊಂದಲ ಇಲ್ಲ ಎಂದರು.

ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್​ ಖಂಡಿತ ಟಿಕೆಟ್ ನೀಡುವುದಿಲ್ಲ. ಮಲ್ಲಿಕಾರ್ಜುನ ಖರ್ಗೆ ಸಿದ್ದರಾಮಯ್ಯ ಅವರನ್ನು ಗೆಲ್ಲಲು ಬಿಡುವುದಿಲ್ಲ. ಸಿದ್ದರಾಮಯ್ಯ, ಖರ್ಗೆ ಹಾಗೂ ಪರಮೇಶ್ವರ್ ಅವರಿಗೆ ದ್ರೋಹ ಮಾಡಿದ್ದು ಖರ್ಗೆ ಮನಸ್ಸಿನಲ್ಲಿ ಇನ್ನೂ ಇದೆ. ಹೀಗಾಗಿ ಈ ಭಾರಿ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸುವುದು ಖಂಡಿತ.

ಸಿದ್ದರಾಮಯ್ಯ ರಾಜ್ಯದ ರಾಜಕೀಯದ ಖಳನಾಯಕ. ಇವರು ಯಾರನ್ನೂ ಬದುಕಲು ಬಿಡುವುದಿಲ್ಲ. ಸಿದ್ದರಾಮಯ್ಯ ಕಾಂಗ್ರೆಸ್ ಸೇರಲು ದೇವೇಗೌಡರನ್ನು ತುಳಿದು, ಜೆಡಿಎಸ್​ನಿಂದ ಹೊರಬಂದರು. ಇಂದಿರಾಗಾಂಧಿಯನ್ನು ಕೆಟ್ಟ ಶಬ್ದಗಳಿಂದ ಬೈದವರು, ಸೋನಿಯಾಗಾಂಧಿ ಕಾಲು ಹಿಡಿದು, ಭಿಕ್ಷೆ ಬೇಡಿ ಸಿಎಂ‌ ಆದರು ಎಂದು ಟೀಕಿಸಿದರು.

RELATED TOPICS:
English summary :If Siddaramaiah has Dham, let him contest with almonds

ಪತ್ನಿ ಬಗ್ಗೆ ಕೆಟ್ಟದಾಗಿ ಮಾತನಾಡಿದ ಸ್ನೇಹಿತನ ಹತ್ಯೆ: ಆರೋಪಿ ಬಂಧನ
ಪತ್ನಿ ಬಗ್ಗೆ ಕೆಟ್ಟದಾಗಿ ಮಾತನಾಡಿದ ಸ್ನೇಹಿತನ ಹತ್ಯೆ: ಆರೋಪಿ ಬಂಧನ
ಕರ್ನಾಟಕದಲ್ಲಿ ನಾವು ಸುಮ್ಮನೆ ಇದ್ದರೂ ಗೆಲ್ತೀವಿ: ಸಿದ್ದರಾಮಯ್ಯ
ಕರ್ನಾಟಕದಲ್ಲಿ ನಾವು ಸುಮ್ಮನೆ ಇದ್ದರೂ ಗೆಲ್ತೀವಿ: ಸಿದ್ದರಾಮಯ್ಯ
ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು
ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು
ಗುಣಮಟ್ಟ , ಕಡಿಮೆ ವೆಚ್ಚ ಇದ್ದರೆ ಮಾತ್ರ ರ‍್ಯಾಪಿಡ್‌ ರಸ್ತೆ ಪರಿಗಣನೆ
ಗುಣಮಟ್ಟ , ಕಡಿಮೆ ವೆಚ್ಚ ಇದ್ದರೆ ಮಾತ್ರ ರ‍್ಯಾಪಿಡ್‌ ರಸ್ತೆ ಪರಿಗಣನೆ
ಸಿದ್ರಾಮುಲ್ಲಾಖಾನ್ ಎಂದು ನನ್ನ ಹೆಸರಿಗೆ ಮುಸ್ಲಿಮ್ ಹೆಸರು ಸೇರಿಸಿರುವುದು ನನಗೆ ಬೇಸರವಿಲ್ಲ!
ಸಿದ್ರಾಮುಲ್ಲಾಖಾನ್ ಎಂದು ನನ್ನ ಹೆಸರಿಗೆ ಮುಸ್ಲಿಮ್ ಹೆಸರು ಸೇರಿಸಿರುವುದು ನನಗೆ ಬೇಸರವಿಲ್ಲ!
ನನ್ನನ್ನು ಮುಲ್ಲಾ ಅಂತಾ ಕರೆದರೆ ಮುಲ್ಲಾಗಳು ಒಪ್ಪಿಕೊಳ್ಳಲ್ಲ
ನನ್ನನ್ನು ಮುಲ್ಲಾ ಅಂತಾ ಕರೆದರೆ ಮುಲ್ಲಾಗಳು ಒಪ್ಪಿಕೊಳ್ಳಲ್ಲ
ಚಿತ್ರದುರ್ಗ ವೈದ್ಯೆ ರೂಪಾ ಸಾವು ಕೇಸ್: ಪೋಸ್ಟ್ ಮಾರ್ಟಂನಲ್ಲಿ ಸಾವಿನ ರಹಸ್ಯ ಬಯಲು!
ಚಿತ್ರದುರ್ಗ ವೈದ್ಯೆ ರೂಪಾ ಸಾವು ಕೇಸ್: ಪೋಸ್ಟ್ ಮಾರ್ಟಂನಲ್ಲಿ ಸಾವಿನ ರಹಸ್ಯ ಬಯಲು!
ಭೀಕರ ಅಪಘಾತ: ಸರ್ಕಲ್​ ಇನ್​ಸ್ಪೆಕ್ಟರ್, ಪತ್ನಿ ಸಾವು
ಭೀಕರ ಅಪಘಾತ: ಸರ್ಕಲ್​ ಇನ್​ಸ್ಪೆಕ್ಟರ್, ಪತ್ನಿ ಸಾವು
ಬಿಜೆಪಿಗೆ ಸೇರಲು ಮುಂದಾದ ರೌಡಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್
ಬಿಜೆಪಿಗೆ ಸೇರಲು ಮುಂದಾದ ರೌಡಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್
ಆ ದಿನಗಳು ಕಥೆ ಯಾರದ್ದು ಎಂದು ಸಿದ್ದರಾಮಯ್ಯ ಹೇಳಬೇಕು: ಸಿದ್ದರಾಮಯ್ಯಗೆ ಸಿ.ಟಿ ರವಿ ತಿರುಗೇಟು
ಆ ದಿನಗಳು ಕಥೆ ಯಾರದ್ದು ಎಂದು ಸಿದ್ದರಾಮಯ್ಯ ಹೇಳಬೇಕು: ಸಿದ್ದರಾಮಯ್ಯಗೆ ಸಿ.ಟಿ ರವಿ ತಿರುಗೇಟು
ಕಾಲು ಜಾರಿ ಕಾಲುವೆಗೆ ಬಿದ್ದು ಇಬ್ಬರು ರೈತರ ಸಾವು
ಕಾಲು ಜಾರಿ ಕಾಲುವೆಗೆ ಬಿದ್ದು ಇಬ್ಬರು ರೈತರ ಸಾವು
ಏಳು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಜೋಡಿ, ಪತ್ನಿ ಮೇಲೆ ಪತಿಗೆ ಅನುಮಾನ: ನೇಣು ಹಾಕಿಕೊಂಡ ಪತ್ನಿ
ಏಳು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಜೋಡಿ, ಪತ್ನಿ ಮೇಲೆ ಪತಿಗೆ ಅನುಮಾನ: ನೇಣು ಹಾಕಿಕೊಂಡ ಪತ್ನಿ

ನ್ಯೂಸ್ MORE NEWS...