Fri,Dec09,2022
ಕನ್ನಡ / English

ರೇಣುಕಾಚಾರ್ಯರ ತಮ್ಮನ ಮಗನ ಶವ ಭದ್ರಾ ಮೇಲ್ದಂಡೆ ಕಾಲುವೆಯಲ್ಲಿ ಪತ್ತೆ | JANATA NEWS

03 Nov 2022
568

ದಾವಣಗೆರೆ : ಅಕ್ಟೋಬರ್ 30ರ ರಾತ್ರಿಯಿಂದ ಕಾಣೆಯಾಗಿದ್ದ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಸಹೋದರನ ಮಗ ಚಂದ್ರಶೇಖರ್​ 4 ದಿನಗಳ ಬಳಿಕ ಶವವಾಗಿ ಪತ್ತೆಯಾಗಿದ್ದಾನೆ.

ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್ (24) ಐದು ದಿನಗಳ ಬಳಿಕ ಇಂದು(ನ.3) ಶವ ಪತ್ತೆಯಾಗಿದೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕಡದಕಟ್ಟೆ ಗ್ರಾಮದ ಬಳಿ ಇರುವ ತುಂಗಾ ಕಾಲುವೆಯಲ್ಲಿ ಕಾರು ಸಹಿತ ಚಂದ್ರಶೇಖರ್ ಶವ ಪತ್ತೆಯಾಗಿದೆ.

ಹೊನ್ನಾಳಿ ಹಾಗೂ ನ್ಯಾಮತಿ ಮಾರ್ಗ ಮಧ್ಯೆ ಇರುವ ಕಾಲುವೆಯಲ್ಲಿ ಪತ್ತೆಯಾದ ಕಾರನ್ನು ಮೇಲಕ್ಕೆ ಎತ್ತಲಾಗಿದೆ. ಕಾರಿನಲ್ಲೇ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಾರಿನ ಏರ್‌ ಬ್ಯಾಗ್‌ ತೆರೆದಿದ್ದು, ಹಿಂಭಾಗದಲ್ಲಿ ಶವ ಪತ್ತೆಯಾಗಿದೆ. ಮುಂಭಾಗದ ಗಾಜು ಒಡೆದಿದ್ದರೆ ಹಿಂಭಾಗದಲ್ಲಿ ಕಾರು ನಜ್ಜುಗುಜ್ಜಾಗಿದೆ.

ಕಾರಿನೊಳಗೆ ಕೊಳೆತ ಸ್ಥಿತಿಯಲ್ಲಿ ಚಂದ್ರಶೇಖರ್​ರ ಮೃತದೇಹ ಸಿಕ್ಕಿದೆ. ಕಾರಿನ ಹಿಬ್ಬಂದಿ ಸೀಟಿನಲ್ಲಿ ಚಂದ್ರಶೇಖರ್​ರ ಶವ ಪತ್ತೆಯಾಗಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆಮಾಡಿದೆ. ಕಾರು ಕಾಲುವೆಗೆ ಬಿದ್ದಿದ್ದೇಗೆ? ಕಾರು ಪಲ್ಟಿಯಾಗಿ ಬಳಿಕ ಕಾಲುವೆಗೆ ಉರುಳಿತೇ? ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.

ಒಂದು ವೇಳೆ ಚಂದ್ರು ಸೀಟ್ ಬೆಲ್ಟ್ ಹಾಕಿದ್ದರೇ ಅವರು ಡ್ರೈವಿಂಗ್ ಸೀಟಿನಲ್ಲೇ ಇರುತ್ತಿದ್ದರು. ಅವರ ಮೃತ ದೇಹ ಹಿಂದಿನ ಸೀಟಿನಲ್ಲಿ ಪತ್ತೆಯಾಗಿದ್ದರಿಂದ ಬೇರೆಯವರು ಕಾರು ಡ್ರೈವಿಂಗ್ ಮಾಡಿದ್ರಾ? ಹೀಗೆ ಹತ್ತು ಹಲವು ಅನುಮಾನಗಳು ಪೊಲೀಸರಿಗೆ ಮೂಡಿದ್ದು, ಈ ಬಗ್ಗೆ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ರೇಣುಕಾಚಾರ್ಯರು ಕುಸಿದು ಬಿದ್ದು ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಕುಟುಂಬಸ್ಥರ ಆಕ್ರಂದ ಮುಗಿಲು ಮುಟ್ಟಿದೆ.

RELATED TOPICS:
English summary :Ex-Minister Renukacharya nephew, who was missing since Oct. 30, found dead in the Tunga

ಪತ್ನಿ ಬಗ್ಗೆ ಕೆಟ್ಟದಾಗಿ ಮಾತನಾಡಿದ ಸ್ನೇಹಿತನ ಹತ್ಯೆ: ಆರೋಪಿ ಬಂಧನ
ಪತ್ನಿ ಬಗ್ಗೆ ಕೆಟ್ಟದಾಗಿ ಮಾತನಾಡಿದ ಸ್ನೇಹಿತನ ಹತ್ಯೆ: ಆರೋಪಿ ಬಂಧನ
ಕರ್ನಾಟಕದಲ್ಲಿ ನಾವು ಸುಮ್ಮನೆ ಇದ್ದರೂ ಗೆಲ್ತೀವಿ: ಸಿದ್ದರಾಮಯ್ಯ
ಕರ್ನಾಟಕದಲ್ಲಿ ನಾವು ಸುಮ್ಮನೆ ಇದ್ದರೂ ಗೆಲ್ತೀವಿ: ಸಿದ್ದರಾಮಯ್ಯ
ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು
ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು
ಗುಣಮಟ್ಟ , ಕಡಿಮೆ ವೆಚ್ಚ ಇದ್ದರೆ ಮಾತ್ರ ರ‍್ಯಾಪಿಡ್‌ ರಸ್ತೆ ಪರಿಗಣನೆ
ಗುಣಮಟ್ಟ , ಕಡಿಮೆ ವೆಚ್ಚ ಇದ್ದರೆ ಮಾತ್ರ ರ‍್ಯಾಪಿಡ್‌ ರಸ್ತೆ ಪರಿಗಣನೆ
ಸಿದ್ರಾಮುಲ್ಲಾಖಾನ್ ಎಂದು ನನ್ನ ಹೆಸರಿಗೆ ಮುಸ್ಲಿಮ್ ಹೆಸರು ಸೇರಿಸಿರುವುದು ನನಗೆ ಬೇಸರವಿಲ್ಲ!
ಸಿದ್ರಾಮುಲ್ಲಾಖಾನ್ ಎಂದು ನನ್ನ ಹೆಸರಿಗೆ ಮುಸ್ಲಿಮ್ ಹೆಸರು ಸೇರಿಸಿರುವುದು ನನಗೆ ಬೇಸರವಿಲ್ಲ!
ನನ್ನನ್ನು ಮುಲ್ಲಾ ಅಂತಾ ಕರೆದರೆ ಮುಲ್ಲಾಗಳು ಒಪ್ಪಿಕೊಳ್ಳಲ್ಲ
ನನ್ನನ್ನು ಮುಲ್ಲಾ ಅಂತಾ ಕರೆದರೆ ಮುಲ್ಲಾಗಳು ಒಪ್ಪಿಕೊಳ್ಳಲ್ಲ
ಚಿತ್ರದುರ್ಗ ವೈದ್ಯೆ ರೂಪಾ ಸಾವು ಕೇಸ್: ಪೋಸ್ಟ್ ಮಾರ್ಟಂನಲ್ಲಿ ಸಾವಿನ ರಹಸ್ಯ ಬಯಲು!
ಚಿತ್ರದುರ್ಗ ವೈದ್ಯೆ ರೂಪಾ ಸಾವು ಕೇಸ್: ಪೋಸ್ಟ್ ಮಾರ್ಟಂನಲ್ಲಿ ಸಾವಿನ ರಹಸ್ಯ ಬಯಲು!
ಭೀಕರ ಅಪಘಾತ: ಸರ್ಕಲ್​ ಇನ್​ಸ್ಪೆಕ್ಟರ್, ಪತ್ನಿ ಸಾವು
ಭೀಕರ ಅಪಘಾತ: ಸರ್ಕಲ್​ ಇನ್​ಸ್ಪೆಕ್ಟರ್, ಪತ್ನಿ ಸಾವು
ಬಿಜೆಪಿಗೆ ಸೇರಲು ಮುಂದಾದ ರೌಡಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್
ಬಿಜೆಪಿಗೆ ಸೇರಲು ಮುಂದಾದ ರೌಡಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್
ಆ ದಿನಗಳು ಕಥೆ ಯಾರದ್ದು ಎಂದು ಸಿದ್ದರಾಮಯ್ಯ ಹೇಳಬೇಕು: ಸಿದ್ದರಾಮಯ್ಯಗೆ ಸಿ.ಟಿ ರವಿ ತಿರುಗೇಟು
ಆ ದಿನಗಳು ಕಥೆ ಯಾರದ್ದು ಎಂದು ಸಿದ್ದರಾಮಯ್ಯ ಹೇಳಬೇಕು: ಸಿದ್ದರಾಮಯ್ಯಗೆ ಸಿ.ಟಿ ರವಿ ತಿರುಗೇಟು
ಕಾಲು ಜಾರಿ ಕಾಲುವೆಗೆ ಬಿದ್ದು ಇಬ್ಬರು ರೈತರ ಸಾವು
ಕಾಲು ಜಾರಿ ಕಾಲುವೆಗೆ ಬಿದ್ದು ಇಬ್ಬರು ರೈತರ ಸಾವು
ಏಳು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಜೋಡಿ, ಪತ್ನಿ ಮೇಲೆ ಪತಿಗೆ ಅನುಮಾನ: ನೇಣು ಹಾಕಿಕೊಂಡ ಪತ್ನಿ
ಏಳು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಜೋಡಿ, ಪತ್ನಿ ಮೇಲೆ ಪತಿಗೆ ಅನುಮಾನ: ನೇಣು ಹಾಕಿಕೊಂಡ ಪತ್ನಿ

ನ್ಯೂಸ್ MORE NEWS...