ಮತ್ತೆ ಹೆಣ್ಣು ಮಗು ಹುಟ್ಟಿತೆಂದು ಮನನೊಂದು ಆತ್ಮಹತ್ಯೆಗೆ ಶರಣಾದ ತಂದೆ | JANATA NEWS

ಕೋಲಾರ : ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದಳು ಎಂದು ಮನನೊಂದು ಆತ್ಮಹತ್ಯೆಗೆ ಶರಣಾಗಿರುವಂತಹ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಶೆಟ್ಟಿಹಳ್ಳಿ ಗ್ರಾಮದಲ್ಲಿ ಡ್ರೈವರ್ ಕೆಲಸ ಮಾಡಿಕೊಂಡಿದ್ದ ಲೋಕೇಶ್ಗೆ ಕಳೆದ ಎಂಟು ವರ್ಷಗಳ ಹಿಂದೆ ಆಂಧ್ರ ಪ್ರದೇಶ ಪುಂಗನೂರಿನ ಸಿರಿಶ ಎನ್ನುವವರೊಂದಿಗೆ ಮದುವೆ ಮಾಡಲಾಗಿತ್ತು. ಇದಾದ ನಂತರ ಲೋಕೇಶ್ಗೆ ಎರಡು ವರ್ಷಗಳ ಅಂತರದಲ್ಲಿ ಮೂರು ಜನ ಹಣ್ಣುಮಕ್ಕಳಾಗಿವೆ.
ಲೋಕೇಶ್ ನಾಲ್ಕನೇ ಬಾರಿ ಆದ್ರು ಗಂಡು ಮಗು ಜನಿಸುತ್ತದೆ ಎಂದು ಆಸೆ ಹೊಂದಿದ್ದರಂತೆ. ಆದರೆ ನಾಲ್ಕನೇ ಮಗುವೂ ಹೆಣ್ಣಾಗಿದ್ದಕ್ಕೆ ಲೋಕೇಶ್ ಮನನೊಂದಿದ್ದರು ಎನ್ನಲಾಗಿದೆ.
ಕೆಲವರು ಅದೇ ವಿಚಾರವಾಗಿ ಲೋಕೇಶ್ ಮನಸ್ಸಿಗೆ ನೋವಾಗುವಂತೆ ಮಾತನಾಡಿದ್ದರಂತೆ ಎನ್ನಲಾಗಿದೆ. ಇದರಿಂದ ಲೋಕೇಶ್ ತಮ್ಮ ಪತ್ನಿಗೆ ನಾಟಿ ಔಷದವನ್ನೂ ಸಹ ಕೊಡಿಸಿದ್ದರಂತೆ.
ಹೀಗಿರುವಾಗಲೇ ನವೆಂಬರ್ 4 ರಂದು ಲೋಕೇಶ್ ಪತ್ನಿಗೆ ಸಿರಿಶಗೆ ನಾಲ್ಕನೇ ಮಗುವಾಗಿದ್ದು, ಅದೂ ಕೂಡಾ ಹೆಣ್ಣುಮಗುವಾಗಿದೆ. ವಿಷಯ ತಿಳಿದು ಕಣ್ಣೀರು ಹಾಕಿ ತೀವ್ರವಾಗಿ ನೊಂದಿದ್ದ ಲೋಕೇಶ್ ನಿನ್ನೆ ರಾತ್ರಿ ಮನೆಯಲ್ಲಿ ಒಂಟಿಯಾಗಿ ಮಲಗಿದ್ದಾನೆ.
ರಾತ್ರಿ ತಮ್ಮ ಮನೆಯಲ್ಲಿ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಎಂದಿನಂತೆ ಲೋಕೇಶ್ ತಾಯಿ ಮನೆಗೆ ಬಂದು ನೋಡಿದ್ದು, ಲೋಕೇಶ್ ಆತ್ಮಹತ್ಯೆಗೆ ಶರಣಾಗಿರುವುದು ಕಂಡುಬಂದಿದೆ. ಪತ್ನಿ ಹಾಗೂ ಮಕ್ಕಳ ರೋಧನೆ ಮುಗಿಲು ಮುಟ್ಟಿದೆ.
ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.