ಗಂಡನ ಕಿರುಕುಳ ತಾಳಲಾಗದೆ 8 ತಿಂಗಳ ಗರ್ಭಿಣಿ ಆತ್ಮಹತ್ಯೆ | JANATA NEWS
ಬೆಂಗಳೂರು : ಗಂಡನ ಕಿರುಕುಳಕ್ಕೆ ಮನನೊಂದ 8 ತಿಂಗಳ ಗರ್ಭಿಣಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಶಿವನಪುರದಲ್ಲಿ ನಡೆದಿದೆ.
ಮೃತ ಗರ್ಭಿಣಿ ಸೌಂದರ್ಯ (19) ಒಂಭತ್ತು ತಿಂಗಳ ಹಿಂದೆ ಸಂತೋಷ್ ಎಂಬಾತನ ಜತೆಗೆ ಪ್ರೀತಿಸಿ ಮದುವೆಯಾಗಿದ್ದಳು. ಸೌಂದರ್ಯ ಪತಿ ಸಂತೋಷ್ ಕಿರುಕುಳ ನೀಡಿದ್ದರಿಂದಲೇ ತಮ್ಮ ಮಗಳು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಮೃತಳ ಕುಂಟುಂಬಸ್ಥರು ಆರೋಪ ಮಾಡಿದ್ದಾರೆ.
ಖಾಸಗಿ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಸೌಂದರ್ಯಾಳಿಗೆ ಇತ್ತೀಚೆಗೆ ಗಾರ್ಮೆಂಟ್ಸ್ನಲ್ಲಿ ಎಲ್ಲರೂ ಸೇರಿ ಸೀಮಂತ ಕಾರ್ಯ ಮಾಡಿದ್ದರು.
ಮೃತ ಮಹಿಳೆಯರ ಪೋಷಕರು ನೀಡಿದ ದೂರಿನ ಮೇರೆಗೆ ಮಾದನಾಯಕನ ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿ ಪತಿ ಸಂತೋಷ್ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
English summary :Unable to bear the harassment of her husband, 8 months pregnant committed suicide