ಗೌರಿ ಲಂಕೇಶ್ ಕೊಲೆ ಪ್ರಕರಣ: ಸಾಕ್ಷಿದಾರರಿಗೆ ಜೀವ ಬೆದರಿಕೆ ಆರೋಪ | JANATA NEWS

ಬೆಂಗಳೂರು : ಗೌರಿ ಲಂಕೇಶ್ ಕೊಲೆ ಪ್ರಕರಣದ ಆರೋಪಿ ಪರಮೇಶ್ ವಾಗ್ಮೋರೆ ಎಂಬಾತನನ್ನು ಗುರುತಿಸಿದ ಸಾಕ್ಷಿದಾರರಿಗೆ ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ.
ಪ್ರಕರಣ ಕುರಿತಂತೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಕೋಕಾ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಪ್ರಕರಣದ ಪ್ರಮುಖ ಆರೋಪಿ ಪರಮೇಶ್ ವಾಗ್ಮೋರೆಯನ್ನು ಗುರುತಿಸಲು ಆರೋಪಿಯ ಸ್ನೇಹಿತ ಸಿಂದಗಿ ಮೂಲದ ದೌಲತ್ ಹಿಪ್ಪರಗಿ ಎಂಬುವರನ್ನು ಕರೆಯಿಸಿ ಸಾಕ್ಷಿಯ ಹೇಳಿಕೆ ದಾಖಲಿಸಬೇಕಿತ್ತು.
ಕೋರ್ಟ್ ಕಲಾಪ ಆರಂಭವಾಗುತ್ತಿದ್ದಂತೆ ವಿಶೇಷ ಅಭಿಯೋಜಕ ಬಾಲನ್, ವಾಗ್ಮೋರೆ ಸ್ನೇಹಿತ ದೌಲತ್ ಹಿಪ್ಪರಗಿಗೆ ಸಾಕ್ಷಿ ಹೇಳದಂತೆ ಅವರ ಮನೆಗೆ ನಾಲ್ವರು ಹೋಗಿ ಬೆದರಿಸಿದ್ದಾರೆ. ಅಲ್ಲದೆ ಫೋನ್ ಕರೆ ಮಾಡಿ ಆಗಂತುಕರು ವಾಗ್ಮೋರೆ ವಿರುದ್ಧ ಏನೂ ಹೇಳದಂತೆ ಬೆದರಿಕೆ ಹಾಕಿರುವುದಾಗಿ ಪ್ರಕರಣದ ವಿಶೇಷ ಅಭಿಯೋಜಕ ಬಾಲನ್ ಆರೋಪಿಸಿದ್ದಾರೆ.