ಸೋಶಿಯಲ್ ಮೀಡಿಯಾ ಮೂಲಕ 40 ಲಕ್ಷ ರೂ. ವಂಚನೆ! ಗಂಡನೂ ಸಾಥ್! | JANATA NEWS

ವಿಜಯಪುರ : ಯುವಕನೊಬ್ಬನಿಗೆ ಹಾಸನದ ಫೇಸ್‌ಬುಕ್ ಗೆಳತಿಯಿಂದ ಉಂಟಾಗಿದ್ದ 40 ಲಕ್ಷ ರೂ. ಪಂಗನಾಮ ಪ್ರಕರಣದ ಆರೋಪಿ ಮಹಿಳೆಯನ್ನು ವಿಜಯಪುರ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.
ಆನ್ಲೈನ್ ನಲ್ಲಿ ಪರಿಚಯವಾಗಿದ್ದ ಹಾಸನ ಮೂಲದ ಹುಡುಗಿ ಹಾಗೂ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಗಲೂರು ಗ್ರಾಮದ ಯುವಕ ಪರಶುರಾಮ.
ಪರಶುರಾಮ ಎಂಬಾತ ಹೈದ್ರಾಬಾದ್ ನಲ್ಲಿ ಕಟ್ಟಡ ಕಾರ್ಮಿಕರ ಸೂಪರ್ ವೈಸರ್ ಆಗಿದ್ದ, ಅವನಿಗೆ 30 ಸಾವಿರ ಸಂಬಳ ಬರುತ್ತಿತ್ತು. ಈತನಿಗೆ ಫೇಸ್‌ಬುಕ್ ಮೂಲಕ ಫ್ರೆಂಡ್‌ಶಿಪ್ ರಿಕ್ವೆಸ್ಟ್ ಕಳುಹಿಸಿ ಪರಿಚಯ ಮಾಡಿಕೊಂಡ ಹಾಸನ ಮೂಲದ ಮಂಜುಳಾ ಪ್ರೀತಿಯ ನಾಟಕವಾಡಿ, ತಾನು ಐಎಎಸ್ ಓದುತ್ತಿರುವುದಾಗಿ ತಿಳಿಸಿ ಲಕ್ಷ ಲಕ್ಷ ಹಣವನ್ನು ಯುವಕನಿಂದ ಪಡೆದಿದ್ದಳು.
ಅವಳ ಓದಿಗಾಗಿ ಮನೆಯಲ್ಲಿ ಕೂಡಿಟ್ಟಿದ್ದ 5 ಲಕ್ಷ ರೂ. ಹಣ, ಒಂದು ಪ್ಲಾಟ್ ಸೇರಿ ಎಲ್ಲವನ್ನು ಮಾರಿ ಹಣ ಕಳುಹಿಸಿದ್ದನು. ಆದರೆ ಸುಮಾರು 40 ಲಕ್ಷ ದಷ್ಟು ಹಣ ಕಳಿಸಿದರೂ ಅವಳಿಗೆ ಆತ ಭೇಟಿ ಆಗಿರಲಿಲ್ಲ.
ಈ ನಡುವೆ ಸಲುಗೆ ಬೆಳೆದಿತ್ತು. ಈ ಸಲುಗೆ ಪ್ರೀತಿಗೆ ತಿರುಗಿತ್ತು. ಇಬ್ಬರೂ ಒಬ್ಬರನೊಬ್ಬರು ನೋಡದೆಯೇ ಮನಸಾರೆ ಪ್ರೀತಿಸುತ್ತಿದ್ದರು. ಅವಳ ಫೇಸ್ ಬುಕ್ ಡಿಪಿ ನೋಡಿ ಮಾರುಹೋಗಿದ್ದ. ಅಂದಹಾಗೆ ಅಲ್ಲಿ ಇದ್ದಿದ್ದು ನಟಿ ಕೀರ್ತಿ ಸುರೇಶ್ ಅವರ ಫೋಟೋ.
ಈತ ಸ್ನಾನ ಮಾಡುವ ಸಂದರ್ಭದಲ್ಲಿ ವಿಡಿಯೋ ಕಾಲ್ ಮಾಡಿ ಅದನ್ನು ರಿಕಾರ್ಡ ಮಾಡಿಕೊಂಡಿದ್ದಳು. ಬಳಿಕ ಆ ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೆಲ್ ಮಾಡಿ, ಹಣಕ್ಕಾಗಿ ಡಿಮ್ಯಾಂಡ್ ಇಟ್ಟು ಹಂತ ಹಂತವಾಗಿ ಲಕ್ಷಾಂತರ ರೂ. ಹಣವನ್ನು ಕಿತ್ತುಕೊಂಡಿದ್ದಾರೆ.
ಇದರಿಂದ ರೋಸಿ ಹೋದ ಯುವಕ ವಿಜಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದನು. ಪೊಲೀಸರು ಆರೋಪಿ ಮಂಜುಳಾಳನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ತನ್ನ ಗಂಡನೂ ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಮಹಿಳೆ ಬಾಯಿ ಬಿಟ್ಟಿದ್ದಾರೆ. ಪೋಲಿಸರು ಬಂದ ಮಾಹಿತಿ ತಿಳಿದ ಮಂಜುಳಾ ಗಂಡ ಎಸ್ಕೇಪ್ ಆಗಿದ್ದಾನೆ.
ಈತನ ಹಣದಲ್ಲಿ ಮಂಜುಳಾ 100 ಗ್ರಾಂ ಬಂಗಾರ, ಒಂದು ಹುಂಡೈ ಕಾರ್, ಬೈಕ್ ಖರೀದಿ ಮಾಡಿದ್ದಾಳೆ, ಜೊತೆಗೆ ಊರಲ್ಲಿ ಮನೆಯನ್ನು ಕೂಡಾ ಕಟ್ಟುತ್ತಿದ್ದಲು ಎನ್ನಲಾಗಿದೆ.