ಹಿಟ್ ಅಂಡ್ ರನ್: ಮೂವರು ಕೂಲಿ ಕಾರ್ಮಿಕರು ದುರ್ಮರಣ! | JANATA NEWS

ಬೆಂಗಳೂರು : ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕಾರ್ಮಿಕರ ಮೇಲೆ ಕ್ಯಾಂಟರ್ ಹರಿದು ಮೂವರು ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ಬೆಂಗಳೂರು ಹೊರವಲಯದ ಅತ್ತಿಬೆಲೆ ಮುಖ್ಯರಸ್ತೆಯ ಮಾಯಸಂದ್ರ ಬಳಿ ನಡೆದಿದೆ.
ಮೃತರೆಲ್ಲ ಉತ್ತರ ಭಾರತದ ಮೂಲದವರು ಎಂದು ತಿಳಿದುಬಂದಿದೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ವೇಗದಿಂದ ಬಂದ ಕ್ಯಾಂಟರ್ ವಾಹನ ಗುದ್ದಿದೆ.
ಗುದ್ದಿದ ರಭಸಕ್ಕೆ ವಾಹನದ ಅಡಿಗೆ ಸಿಲುಕಿ ಮೂವರು ಸಾವನ್ನಪ್ಪಿದ್ದಾರೆ. ಚಾಲಕ ವಾಹನ ನಿಲ್ಲಿಸದೇ ಎಸ್ಕೇಪ್ ಆಗಿದ್ದಾನೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹಗಳನ್ನು ಅತ್ತಿಬೆಲೆಯ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
English summary :Hit and run: Three laborers died!