Tue,Jan31,2023
ಕನ್ನಡ / English

ನಮ್ಮ ಕ್ಲಿನಿಕ್ ಲೋಕಾರ್ಪಣೆಗೊಳಿಸಿದ ಸಿಎಂ, 114 ನಮ್ಮ ಕ್ಲಿನಿಕ್ ರಾಜ್ಯಾದ್ಯಂತ ಲೋಕಾರ್ಪಣೆ | JANATA NEWS

14 Dec 2022
553

ಧಾರವಾಡ : ಒಂದೇ ಸೂರಿನಡಿ 12 ವಿವಿಧ ಆರೋಗ್ಯ ಸೇವೆಗಳನ್ನು ಒದಗಿಸುವ ರಾಜ್ಯಾದ್ಯಂತ 114 ‘ನಮ್ಮ ಕ್ಲಿನಿಕ್’ ನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿಯವರು ಹುಬ್ಬಳ್ಳಿಯಲ್ಲಿ ಇಂದು ಲೋಕಾರ್ಪಣೆಗೊಳಿಸಿದರು.

ಹುಬ್ಬಳ್ಳಿ-ಧಾರವಾಡ ನಗರದ ಬೈರಿದೇವರಕೊಪ್ಪದಲ್ಲಿ ನಡೆದ ಬೃಹತ್​​ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ ರಾಜ್ಯದ ಜನರ ಆರೋಗ್ಯ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಪ್ರಾಥಮಿಕ ಹಂತದಲ್ಲೇ ಉತ್ತಮ ಚಿಕಿತ್ಸೆ ಸಿಗುವಂತೆ ಮಾಡಿದ್ದೇವೆ. ಈ ಬಜೆಟ್ ನಲ್ಲಿ ನಮ್ಮ ಕ್ಲಿನಿಕ್ ಗೆ ಹೆಚ್ಚು ಒತ್ತು ನೀಡಲಿದ್ದೇವೆ.

ಬಡವರಿಗೆ ಅನುಕೂಲವಾಗಲು ನಮ್ಮ ಕ್ಲಿನಿಕ್ ತೆರೆಯಲಾಗುತ್ತಿದೆ. ಜನವರಿ ಅಂತ್ಯದೊಳಗೆ ರಾಜ್ಯದಲ್ಲಿ 437 ನಮ್ಮ ಕ್ಲಿನಿಕ್ ಆರಂಭ ಮಾಡಲಾಗುವುದು ಎಂದು ತಿಳಿಸಿದರು. ಮೊದಲ ಹಂತದಲ್ಲಿ ಸುಮಾರು 438 ನಮ್ಮ ಕ್ಲಿನಿಕ್ ಆರಂಭಿಸಲಾಗುತ್ತಿದೆ. ಜನೆವರಿ ಅಂತ್ಯದೊಳಗೆ ಈ ಎಲ್ಲ ಕ್ಲಿನಿಕ್ ಗಳನ್ನು ಆರಂಭಗೊಳಿಸಲಾಗುವುದು ಎಂದರು.

ರಾಜ್ಯದ ರೈತರಿಗೆ ಮತ್ತೆ ಯಶಸ್ವಿನಿ ಯೋಜನೆ ಜಾರಿಗೆ ತಂದಿದ್ದೇವೆ. ಸಮುದಾಯ ಆಸ್ಪತ್ರೆಗಳಿಗೆ ಮತ್ತಷ್ಟು ಅನುದಾನ ನೀಡಲು ನಿರ್ಧರಿಸಿದ್ದೇವೆ. ರಾಜ್ಯದಲ್ಲಿ 40 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆರಂಭಿಸಲಾಗುತ್ತದೆ. ಜನವರಿ ತಿಂಗಳಿಂದ 60 ವರ್ಷ ದಾಟಿದವರಿಗೆ ಕಣ್ಣಿನ ತಪಾಸಣೆ ನಡೆಸುತ್ತೇವೆ. ಹುಬ್ಬಳ್ಳಿಯಲ್ಲಿ ಜಯದೇವ ಆಸ್ಪತ್ರೆಗೆ ಅಡಿಗಲ್ಲು ಹಾಕುತ್ತೇವೆ ಎಂದು ತಿಳಿಸಿದರು.

ಯೋಜನೆಗೆ ಚಾಲನೆ ನೀಡಿದ ಬಳಿಕ ಹುಬ್ಬಳ್ಳಿಯಿಂದ ದೆಹಲಿಗೆ ಹೊರಡುತ್ತಿದ್ದು, ಗಡಿ ವಿಚಾರದಲ್ಲಿ ನಮ್ಮ ನಿಲುವನ್ನು ಗೃಹ ಸಚಿವ ಅಮಿತ್ ಶಾ ಅವರಿಗೆ ಸ್ಪಷ್ಟಪಡಿಸ್ತೇನೆ ಎಂದು ತಿಳಿಸಿದರು.

ನಮ್ಮ ಕ್ಲಿನಿಕ್​ಗಳಲ್ಲಿ 12 ರೀತಿಯ ವೈದ್ಯಕೀಯ ಸೇವೆಗಳು ಲಭ್ಯವಿದೆ. ಪ್ರತಿ ನಮ್ಮ ಕ್ಲಿನಿಕ್​ನಲ್ಲಿಯೂ ವೈದ್ಯಕೀಯ ಅಧಿಕಾರಿ, ನರ್ಸ್, ಲ್ಯಾಬ್ ಟೆಕ್ನೀಷಿಯನ್ ಮತ್ತು ಗ್ರೂಪ್ ಡಿ ನೌಕರ ಇರುತ್ತಾರೆ.

12 ಪ್ರಮುಖ ಸೇವೆ -
* ಗರ್ಭಿಣಿ ಆರೈಕೆ
* ಶಿಶುವಿನ ಆರೈಕೆ
* ಮಕ್ಕಳ ಸೇವೆ
* ಕುಟುಂಬ ಕಲ್ಯಾಣ ಸೇವೆ
* ಸಾಂಕ್ರಾಮಿಕ ರೋಗಗಳ ನಿರ್ವಹಣೆ
* ಸಂಪೂರ್ಣ ಓಪಿಡಿ ಸೇವೆಗಳು
* ಮಧುಮೇಹ, ರಕ್ತದೊತ್ತಡ ಚೆಕ್ ಅಪ್
* ಕ್ಯಾನ್ಸರ್ ಸ್ಕ್ರೀನಿಂಗ್ ಸೇವೆ
ಬಾಯಿ ಆರೋಗ್ಯ ಸಮಸ್ಯೆಗಳು ಸೇವೆ
* ಕಣ್ಣಿನ ತಪಾಸಣೆ
* ಮೂಗು, ಗಂಟಲು ENT ಸೇವೆಗಳು
* ಮಾನಸಿಕ ಆರೋಗ್ಯ ಸ್ಕ್ರೀನಿಂಗ್ ಸೇವೆ
* ವೃದ್ಧಾಪ್ಯ ಆರೈಕೆ
ತುರ್ತು ವೈದ್ಯಕೀಯ ಸೇವೆ ಸೇರಿದಂತೆ ಒಟ್ಟು 12 ಪ್ರಮುಖ ಆರೋಗ್ಯ ಸೇವೆಗಳು ನಮ್ಮ ಕ್ಲಿನಿಕ್ ನಲ್ಲಿ ಲಭ್ಯವಿರಲಿದ್ದು, ಎಲ್ಲಾ ಸೇವೆಗಳು ಉಚಿತವಾಗಿ ಸಿಗಲಿದೆ.

RELATED TOPICS:
English summary :Our Clinic Lokarpana CM, 114 Our Clinic Lokarpana across the state

ಪೇಶಾವರ ಪೊಲೀಸ್ ಲೈನ್‌ ಮಸೀದಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ : 46 ಸಾವು, 100 ಗಾಯ
ಪೇಶಾವರ ಪೊಲೀಸ್ ಲೈನ್‌ ಮಸೀದಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ : 46 ಸಾವು, 100 ಗಾಯ
ಸ್ವಿಮ್ಮಿಂಗ್‌ ಪೂಲ್‌ ನಲ್ಲಿ ಈಜಲು ಇಳಿದಿದ್ದ ಖಾಸಗಿ ಶಾಲೆಯ ವಿದ್ಯಾರ್ಥಿಗಳಿಬ್ಬರ ಸಾವು
ಸ್ವಿಮ್ಮಿಂಗ್‌ ಪೂಲ್‌ ನಲ್ಲಿ ಈಜಲು ಇಳಿದಿದ್ದ ಖಾಸಗಿ ಶಾಲೆಯ ವಿದ್ಯಾರ್ಥಿಗಳಿಬ್ಬರ ಸಾವು
ಸಿದ್ದರಾಮಯ್ಯ ಮಗ ಮಾತ್ರವಲ್ಲ, ಡಿಕೆ ಮನೆಯಿಂದಲೂ ಮುಂದೆ ಬಿಜೆಪಿಗೆ ಸೇರಲಿದ್ದಾರೆ: ನಳಿನ್ ಕುಮಾರ್ ಕಟೀಲ್
ಸಿದ್ದರಾಮಯ್ಯ ಮಗ ಮಾತ್ರವಲ್ಲ, ಡಿಕೆ ಮನೆಯಿಂದಲೂ ಮುಂದೆ ಬಿಜೆಪಿಗೆ ಸೇರಲಿದ್ದಾರೆ: ನಳಿನ್ ಕುಮಾರ್ ಕಟೀಲ್
ಕಾಂಗ್ರೆಸ್​ ಪಕ್ಷ ಹಾಳಾಗಲು ಡಿ.ಕೆ.ಶಿವಕುಮರ್ ಮತ್ತು ವಿಷಕನ್ಯೆ ಕಾರಣ!
ಕಾಂಗ್ರೆಸ್​ ಪಕ್ಷ ಹಾಳಾಗಲು ಡಿ.ಕೆ.ಶಿವಕುಮರ್ ಮತ್ತು ವಿಷಕನ್ಯೆ ಕಾರಣ!
ಈಜಲು ಹೋಗಿ ಕೆರೆಯಲ್ಲಿ ಮುಳುಗಿದ ಬಾಲಕ, ಕೆರೆಯಲ್ಲಿ 3 ದಿನದಿಂದ ಶೋಧ!
ಈಜಲು ಹೋಗಿ ಕೆರೆಯಲ್ಲಿ ಮುಳುಗಿದ ಬಾಲಕ, ಕೆರೆಯಲ್ಲಿ 3 ದಿನದಿಂದ ಶೋಧ!
ಮನ್ ಕಿ ಬಾತ್‌ : ಸಿರಿಧಾನ್ಯ, ಇ-ತ್ಯಾಜ್ಯ, ಬುಡಕಟ್ಟು ಪದ್ಮ ಪ್ರಶಸ್ತಿ ಪುರಸ್ಕೃತರ ಪ್ರಸ್ತಾಪಿಸಿದ ಪ್ರಧಾನಿ ಮೋದಿ
ಮನ್ ಕಿ ಬಾತ್‌ : ಸಿರಿಧಾನ್ಯ, ಇ-ತ್ಯಾಜ್ಯ, ಬುಡಕಟ್ಟು ಪದ್ಮ ಪ್ರಶಸ್ತಿ ಪುರಸ್ಕೃತರ ಪ್ರಸ್ತಾಪಿಸಿದ ಪ್ರಧಾನಿ ಮೋದಿ
ಪೊಲೀಸ್ ಎಎಸ್ಐ ಗುಂಡಿನ ದಾಳಿಯಲ್ಲಿ ಒಡಿಶಾದ ಆರೋಗ್ಯ ಸಚಿವ ನಬಾ ಕಿಸೋರ್ ದಾಸ್ ಸಾವು
ಪೊಲೀಸ್ ಎಎಸ್ಐ ಗುಂಡಿನ ದಾಳಿಯಲ್ಲಿ ಒಡಿಶಾದ ಆರೋಗ್ಯ ಸಚಿವ ನಬಾ ಕಿಸೋರ್ ದಾಸ್ ಸಾವು
ಡಾ.ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ
ಡಾ.ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ
ನಂದಿ ಗಿರಿಧಾಮದಲ್ಲಿ ಟ್ರಕ್ಕಿಂಗ್ ಮಾಡಲು ಹೋಗಿ ಜಾರಿಬಿದ್ದಿದ್ದ ಇಬ್ಬರನ್ನು ರಕ್ಷಿಸಿದ 112 ತಂಡ
ನಂದಿ ಗಿರಿಧಾಮದಲ್ಲಿ ಟ್ರಕ್ಕಿಂಗ್ ಮಾಡಲು ಹೋಗಿ ಜಾರಿಬಿದ್ದಿದ್ದ ಇಬ್ಬರನ್ನು ರಕ್ಷಿಸಿದ 112 ತಂಡ
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ: ಬಿ ಎಸ್​ ಯಡಿಯೂರಪ್ಪ
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ: ಬಿ ಎಸ್​ ಯಡಿಯೂರಪ್ಪ
ದೇವರಿಗಾಗಿ ನಾಲಗೆಯನ್ನೇ ಕತ್ತರಿಸಿಕೊಂಡ ಭಕ್ತ!
ದೇವರಿಗಾಗಿ ನಾಲಗೆಯನ್ನೇ ಕತ್ತರಿಸಿಕೊಂಡ ಭಕ್ತ!
ವೇದಿಕೆ ಮೇಲೆ ಕುಸಿದು ಬಿದ್ದ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ, ಪ್ರಾಥಮಿಕ ಚಿಕಿತ್ಸೆ!
ವೇದಿಕೆ ಮೇಲೆ ಕುಸಿದು ಬಿದ್ದ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ, ಪ್ರಾಥಮಿಕ ಚಿಕಿತ್ಸೆ!

ನ್ಯೂಸ್ MORE NEWS...