ಸಾರ್ವಜನಿಕರಿಂದ ಕಿರುಕುಳ ಆರೋಪ: PSI ಗೀತಾಂಜಲಿ ಅಮಾನತು | JANATA NEWS
ರಾಯಚೂರು : ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ರಾಯಚೂರಿನ ಸಿರವಾರ ಠಾಣೆಯ ಪಿಎಸ್‌ಐ (PSI) ಗೀತಾಂಜಲಿ ಶಿಂಧೆ ಅವರನ್ನ ಅಮಾನತುಗೊಳಿಸಲಾಗಿದೆ.
ಇತ್ತೀಚೆಗಷ್ಟೇ ಯುವಕನೊಬ್ಬ ಡೆತ್ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಪ್ರಕರಣದಲ್ಲಿ ಭಾರಿ ಸದ್ದು ಮಾಡಿದ್ದ ಸಿರವಾರ ಪೊಲೀಸ್ ಠಾಣೆಯ ಮಹಿಳಾ ಪಿಎಸ್‌ಐ ಗೀತಾಂಜಲಿ ಶಿಂಧೆ ಅವರನ್ನು ಇದೀಗ ಅಮಾನತು ಮಾಡಲಾಗಿದೆ.
ಪಿಎಸ್‌ಐ (PSI) ವಿರುದ್ಧ ವಿವಿಧ ಆರೋಪಗಳು ಕೇಳಿಬರುತ್ತಿದ್ದು, ಕೆಲವರು ಖುದ್ದಾಗಿ ಜಿಲ್ಲಾ ಎಸ್ಪಿಗೆ ದೂರು ನೀಡಿದ್ದರು. ಹಾಗಾಗಿ ಕರ್ತವ್ಯಲೋಪ ಆರೋಪದ ಮೇಲೆ ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಆದೇಶ ಹೊರಡಿಸಿದ್ದಾರೆ.
ಪಿಎಸ್‌ಐ ಗೀತಾಂಜಲಿ ಶಿಂಧೆ ಅವರು ಮೂರು ತಿಂಗಳಿಂದ ವಿನಾಕಾರಣ ಠಾಣೆಗೆ ಕರೆಸಿ ನನಗೆ ಕಿರುಕುಳ ನೀಡುತ್ತಿದ್ದರು ಎಂದು ಸಿರವಾರದ ತಾಯಣ್ಣ ಎಂಬ ಯುವಕ ಆರೋಪ ಮಾಡಿ, ಡಿ.3ರಂದು ಡೆತ್ನೋಟ್ ಬರೆದು ನಾಪತ್ತೆಯಾಗಿದ್ದ. ಕೆಲ ಬಳಿಕ ಯುವಕ ಪತ್ತೆಯಾಗಿದ್ದ.