ಮಲ್ಪೆ ಬೀಚ್ನಲ್ಲಿ 22 ಕೆ.ಜಿ. ತೂಕದ ಮೀನು, 2.34 ಲಕ್ಷ ರೂ.ಗೆ ಸೇಲ್ ಆಯ್ತು! | JANATA NEWS

ಉಡುಪಿ : ಮಲ್ಪೆ ಬೀಚ್ನಲ್ಲಿ ಸಿಕ್ಕಂತಹ 22 ಕೆ.ಜಿ. ತೂಕದ ಮೀನು ಹರಾಜಿನಲ್ಲಿ 2 ಲಕ್ಷ ರೂಪಾಯಿಗೂ ಅಧಿಕ ಬೆಲೆಗೆ ಮಾರಾಟವಾಗಿದೆ.
ಉಡುಪಿಯ ಮಲ್ಪೆ ಬಂದರಿನ ಮೀನುಗಾರರು ಆಳ ಸಮುದ್ರದಲ್ಲಿ ಮೀನು ಹಿಡಿಯಲು ಬೋಟ್ನಲ್ಲಿ ತೆರಳಿದ್ದರು. ಈ ವೇಳೆ ಮೀನುಗಾರರು ಹಾಕಿದ ಬಲೆಗೆ ಗೋಳಿ ಜಾತಿಗೆ ಸೇರಿದ 22 ಕೆ.ಜಿಯ ವಿಶೇಷ ಮೀನು ಬಿದ್ದಿದೆ.
ವಿಶೇಷ ಮೀನಿನ ಹೆಸರು ಗೋಳಿ ಮೀನು. ಔಷಧಕ್ಕೆ ಬಳಕೆಯಾಗುವ ಗೋಳಿ ಮೀನಿಗೆ ಬೇಡಿಕೆ ಮತ್ತು ಬೆಲೆ ಹೆಚ್ಚು ಎಂದು ತಿಳಿದುಬಂದಿದೆ
English summary :22 kg at Malpe Beach. Weight fish sold for 2.34 lakh rupees!