Thu,Nov30,2023
ಕನ್ನಡ / English

ಮಿಕ್ಸಿ ಸ್ಫೋಟ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್, ಸ್ಫೋಟದ ಹಿಂದಿದೆ... | JANATA NEWS

29 Dec 2022
1970

ಹಾಸನ : ಹಾಸನ ನಗರದಲ್ಲಿ ಕೋರಿಯರ್‌ ಅಂಗಡಿಯೊಂದರಲ್ಲಿ ಡಿಸೆಂಬರ್ 26 ರಂದು ಮಿಕ್ಸಿ ಬ್ಲಾಸ್ಟ್‌ ಆಗಿತ್ತು. ಈ ಮಿಕ್ಸಿರ್​​​​​​​ ಬ್ಲಾಸ್ಟ್​​ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​​ ಸಿಕ್ಕಿದೆ.

ಘಟನೆ ಸಂಬಂಧ ಪೊಲೀಸರು ಹಾಸನ ನಗರದ ಮಹಿಳೆಯನ್ನು ಕೊಲೆ ಮಾಡುವ ಉದ್ದೇಶದಿಂದ ಮಿಕ್ಸಿಯಲ್ಲಿ ಸ್ಫೋಟಕ ಅಳವಡಿಸಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಹಾಸನ ನಿವಾಸಿಯಾಗಿದ್ದ ಮಹಿಳೆಯ ವಿಳಾಸಕ್ಕೆ ಪಾರ್ಸೆಲ್​ ಬಂದಿರುವುದು ಬೆಳಕಿಗೆ ಬಂದಿತ್ತು. ಕೊರಿಯರ್ ಮಾಲೀಕರು ಸಹ ಬಂದಿದ್ದ ಪಾರ್ಸೆಲ್​​ಅನ್ನು, ಮಹಿಳೆಯ ವಾಸಿಸುತ್ತಿದ್ದ ವಿಳಾಸಕ್ಕೆ ತಲುಪಿಸಿದ್ದರು.

ಆದರೆ ಪಾರ್ಸೆಲ್​​ ಮೇಲೆ ಯಾರು ಕಳುಹಿಸಿದ್ದಾರೆ ಎಂಬ ಮಾಹಿತಿ ಇಲ್ಲದ ಕಾರಣ ಮಹಿಳೆ ಪಾರ್ಸೆಲ್​​ಅನ್ನು ಮತ್ತೆ ​ಕೊರಿಯರ್​ ಸೆಂಟರ್​​ಗೆ ವಾಪಸ್ ನೀಡಿದ್ದರು. ಆ ವೇಳೆ ಕೊರಿಯರ್ ಸೆಂಟರ್ ಮಾಲೀಕರು, ಪಾರ್ಸೆಲ್​ ವಾಪಸ್ ಕಳುಹಿಸಲು 350 ಶುಲ್ಕ ರೂಪಾಯಿ ಶುಲ್ಕ ಆಗುತ್ತೆ ಅಂತ ಮಹಿಳೆಗೆ ತಿಳಿಸಿದ್ದರಂತೆ. ಆದರೆ ಪಾರ್ಸೆಲ್​ ಮೇಲೆ ಯಾವುದೇ ವಿಳಾಸ ಇಲ್ಲ, ಇದು ನನಗೆ ಬೇಡ ನೀವೇ ಏನಾದ್ರು ಮಾಡಿಕೊಳ್ಳಿ ಅಂತ ಹೇಳಿ ಆಕೆ ಅಲ್ಲಿಂದ ವಾಪಸ್ ಆಗಿದ್ದರಂತೆ. ಪಾರ್ಸೆಲ್​ ವಾಪಸ್ ಆಗಿದ್ದ ಕಾರಣ ಕೊರಿಯರ್ ಸೆಂಟರ್ ಮಾಲೀಕರು ಏನು ಮಾಡೋದು ಅಂತ ತಿಳಿಸಿಯದೇ, ಪಾರ್ಸೆಲ್ ನ್ನ ಟೇಬಲ್​ ಮೇಲಿಂದ ಕೆಳಗೆ ಇಡಲು ಮುಂದಾಗಿದ್ದ ವೇಳೆ ಮಿಕ್ಸಿ ಸ್ಫೋಟಗೊಂಡಿದೆ.

ಗಾಯಗೊಂಡಿದ್ದ ಕೋರಿಯರ್‌ ಮಳಿಗೆ ಮಾಲೀಕ ಶಶಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆತನ ಕೈಗೆ ದೊಡ್ಡ ತೀವ್ರ ಗಾಯವಾಗಿದ್ದು, ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತಿದ್ದಾರೆ.

ಘಟನೆ ಸಂಬಂಧ ಪೊಲೀಸರು ತನಿಖೆ ಪ್ರಾರಂಭಿಸಿದಾಗ ಭಯಾನಕ ಸ್ಫೋಟಕ ಸತ್ಯ ಬಯಲಾಗಿದೆ. ಅದೇನೆಂದರೆ..

ಈ ಮೊದಲೇ ವಿವಾಹ ಆಗಿದ್ದ ಮಹಿಳೆಯ ಪತಿಗೆ ಡಿವೋರ್ಸ್​ ನೀಡಿ ಮ್ಯಾಟ್ರಿಮೋನಿಯಲ್ಲಿ ತನ್ನ ಫೋಟೋವನ್ನ ಅಪ್‌ಲೋಡ್ ಮಾಡಿದ್ದಳು. ಈ ಫೋಟೋ ನೋಡಿದ ಆರೋಪಿ ಅನೂಪ್, ಮದುವೆ ಪ್ರಸ್ತಾಪ ಮಾಡಿದ್ದರು. ಇದಕ್ಕೆ ಮಹಿಳೆ ಸಮ್ಮತಿ ಸೂಚಿಸಿದ್ದಳು, ನಂತರ ಇಬ್ಬರೂ ಜೊತೆಯಲ್ಲೇ ಸುತ್ತಾಡಿದ್ದರು. ಆದರೆ ಕೆಲವು ದಿನಗಳಿಂದ ಇಬ್ಬರೂ ಬೇರೆಬೇರೆ ಆಗಿದ್ದರು ಎನ್ನಲಾಗಿದೆ.

ಮಹಿಳೆ, ಅನೂಪ್‌ ಕುಮಾರ್‌ ನಿಂದ ಲಕ್ಷಾಂತರ ರೂಪಾಯಿ ಹಣ ಸಾಲ ಪಡೆದುಕೊಂಡಿದ್ದರಂತೆ. ಆದರೆ ಹಣ ಪಡೆದುಕೊಂಡ ನಂತರ ಮಹಿಳೆ ತನ್ನ ವರಸೆ ಬದಲಿಸಿ, ಕೊಟ್ಟ ಹಣವನ್ನು ವಾಪಸ್ ಕೊಡದೆ, ಇತ್ತ ಮದುವೆಯೂ ಆಗದೆ ಆರೋಪಿಯಿಂದ ಅಂತರ ಕಾಯ್ದುಕೊಂಡಿದ್ದರು ಎಂಬ ಆರೋಪ ಕೇಳಿ ಬಂದಿದೆ.

ಇದರಿಂದ ಕೆರಳಿದ್ದ ಪ್ರಿಯಕರ ಅನೂಪ್.. ಮಿಕ್ಸಿಯಲ್ಲಿ ಸ್ಫೋಟಕ ಇಟ್ಟು ಪಾರ್ಸಲ್ ಕಳುಹಿಸಿ ಮಹಿಳೆ ಹತ್ಯೆಗೆ ಸಂಚು ರೂಪಿಸಿದ್ದ ಎನ್ನಲಾಗಿದೆ.

RELATED TOPICS:
English summary :Big twist in Mixi blast case, behind the blast...

ಸರ್ಕಾರಿ ಶಾಲೆಗಳಿಗೆ ಹಿಂದೂ ಹಬ್ಬಗಳ ರಜೆ ಕಡಿಮೆ, ಮುಸ್ಲಿಂ ಹಬ್ಬಕ್ಕೆ ಹೆಚ್ಚು : ಬಿಹಾರ ಸರ್ಕಾರದ ಎಡವಟ್ಟು
ಸರ್ಕಾರಿ ಶಾಲೆಗಳಿಗೆ ಹಿಂದೂ ಹಬ್ಬಗಳ ರಜೆ ಕಡಿಮೆ, ಮುಸ್ಲಿಂ ಹಬ್ಬಕ್ಕೆ ಹೆಚ್ಚು : ಬಿಹಾರ ಸರ್ಕಾರದ ಎಡವಟ್ಟು
ನೌಕಾಪಡೆಯಲ್ಲಿ ತರಬೇತಿ ಪಡೆಯುತ್ತಿರುವ ಅಗ್ನಿವೀರ್ ಮಹಿಳೆ ನೇಣು ಬಿಗಿದು ಆತ್ಮಹತ್ಯೆ
ನೌಕಾಪಡೆಯಲ್ಲಿ ತರಬೇತಿ ಪಡೆಯುತ್ತಿರುವ ಅಗ್ನಿವೀರ್ ಮಹಿಳೆ ನೇಣು ಬಿಗಿದು ಆತ್ಮಹತ್ಯೆ
ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಪ್ರಧಾನಿ ಮೋದಿ
ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಪ್ರಧಾನಿ ಮೋದಿ
ಯಶವಂತಪುರ ನಿಲ್ದಾಣದ ಪುನರಾಭಿವೃದ್ಧಿ ಮತ್ತು ಉಪನಗರ ರೈಲ್ವೆ ಪ್ರಗತಿಯನ್ನು ಪರಿಶೀಲಿಸಿದ ಕೇಂದ್ರ ರೈಲ್ವೆ ಸಚಿವರು
ಯಶವಂತಪುರ ನಿಲ್ದಾಣದ ಪುನರಾಭಿವೃದ್ಧಿ ಮತ್ತು ಉಪನಗರ ರೈಲ್ವೆ ಪ್ರಗತಿಯನ್ನು ಪರಿಶೀಲಿಸಿದ ಕೇಂದ್ರ ರೈಲ್ವೆ ಸಚಿವರು
ಪ್ರಧಾನಿ ಭದ್ರತಾ ಲೋಪ : 7 ಪಂಜಾಬ್ ಪೊಲೀಸ್ ಅಧಿಕಾರಿ ಅಮಾನತು
ಪ್ರಧಾನಿ ಭದ್ರತಾ ಲೋಪ : 7 ಪಂಜಾಬ್ ಪೊಲೀಸ್ ಅಧಿಕಾರಿ ಅಮಾನತು
ರನ್ನಿಂಗ್ ರೇಸ್‍ನಲ್ಲಿ ಸೋಲು, ಖಿನ್ನತೆಯಿಂದ ಕೀಟನಾಶಕ ಸೇವಿಸಿ ವಿದ್ಯಾರ್ಥಿನಿ ಆತ್ಮಹತ್ಯೆ!
ರನ್ನಿಂಗ್ ರೇಸ್‍ನಲ್ಲಿ ಸೋಲು, ಖಿನ್ನತೆಯಿಂದ ಕೀಟನಾಶಕ ಸೇವಿಸಿ ವಿದ್ಯಾರ್ಥಿನಿ ಆತ್ಮಹತ್ಯೆ!
ಸಿಬಿಐ ತನಿಖೆ ಹಿಂಪಡೆಯುವ ನಿರ್ಧಾರವನ್ನು ವಿರೋಧಿಸಿ ಬಿಜೆಪಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ ಮುಂದೂಡಿಕೆ
ಸಿಬಿಐ ತನಿಖೆ ಹಿಂಪಡೆಯುವ ನಿರ್ಧಾರವನ್ನು ವಿರೋಧಿಸಿ ಬಿಜೆಪಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ ಮುಂದೂಡಿಕೆ
ಕ್ಯಾಪ್ಟನ್ ಪ್ರಾಂಜಲ್ ಕುಟುಂಬಕ್ಕೆ ರಾಜ್ಯ ಸರ್ಕಾರದ ವತಿಯಿಂದ ರೂ. 50 ಲಕ್ಷ ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ
ಕ್ಯಾಪ್ಟನ್ ಪ್ರಾಂಜಲ್ ಕುಟುಂಬಕ್ಕೆ ರಾಜ್ಯ ಸರ್ಕಾರದ ವತಿಯಿಂದ ರೂ. 50 ಲಕ್ಷ ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ
ಸಿದ್ದರಾಮಯ್ಯ ಸರ್ಕಾರ ಕರ್ನಾಟಕದಲ್ಲಿ ಲೂಟಿಗೈದ 5 ಕೋಟಿಯನ್ನು ತೆಲಂಗಾಣದಲ್ಲಿ ಮತ ಆಮಿಷಕ್ಕಾಗಿ ಬಳಸುತ್ತಿದೆ - ಬಿಜೆಪಿ
ಸಿದ್ದರಾಮಯ್ಯ ಸರ್ಕಾರ ಕರ್ನಾಟಕದಲ್ಲಿ ಲೂಟಿಗೈದ 5 ಕೋಟಿಯನ್ನು ತೆಲಂಗಾಣದಲ್ಲಿ ಮತ ಆಮಿಷಕ್ಕಾಗಿ ಬಳಸುತ್ತಿದೆ - ಬಿಜೆಪಿ
 ಡಿಕೆ ಶಿವಕುಮಾರ್ ಅವರ ಖಾಸಗಿ ವಕೀಲರು ಅಡ್ವೋಕೇಟ್ ಜೆನರಲ್ ಆಗಿ ಸಿ.ಬಿ.ಐ ತನಿಖೆ ಹಿಂಪಡೆಯಲು ಶಿಫಾರಸು ಮಾಡಿದ್ದಾರೆ- ಯತ್ನಾಳ್
ಡಿಕೆ ಶಿವಕುಮಾರ್ ಅವರ ಖಾಸಗಿ ವಕೀಲರು ಅಡ್ವೋಕೇಟ್ ಜೆನರಲ್ ಆಗಿ ಸಿ.ಬಿ.ಐ ತನಿಖೆ ಹಿಂಪಡೆಯಲು ಶಿಫಾರಸು ಮಾಡಿದ್ದಾರೆ- ಯತ್ನಾಳ್
ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನಿ ಭಯೋತ್ಪಾದಕ ಮುಖಂಡನನ್ನು ಹೊಡೆದು ಹಾಕಿದ ಭಾರತ ಪಡೆ
ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನಿ ಭಯೋತ್ಪಾದಕ ಮುಖಂಡನನ್ನು ಹೊಡೆದು ಹಾಕಿದ ಭಾರತ ಪಡೆ
ಇಂದಿರಾಗಾಂಧಿ ಜನ್ಮದಿನವೇ ಭಾರತದ ಕ್ರಿಕೆಟ್ ತಂಡ ಸೋಲಲು ಕಾರಣ ಸಿಎಂ ಹೇಮಂತ್ ಬಿಸ್ವ ಶರ್ಮ
ಇಂದಿರಾಗಾಂಧಿ ಜನ್ಮದಿನವೇ ಭಾರತದ ಕ್ರಿಕೆಟ್ ತಂಡ ಸೋಲಲು ಕಾರಣ ಸಿಎಂ ಹೇಮಂತ್ ಬಿಸ್ವ ಶರ್ಮ

ನ್ಯೂಸ್ MORE NEWS...