ಅಪಘಾತದಲ್ಲಿ ಮೃತಪಟ್ಟ KSRTC ಸಿಬ್ಬಂದಿ ಕುಟುಂಬಕ್ಕೆ 1 ಕೋಟಿ ರೂಪಾಯಿ ನೆರವು | JANATA NEWS

ಬೆಂಗಳೂರು : ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ತನ್ನ ಸಿಬ್ಬಂದಿಗೆ ಒಂದು ಕೋಟಿ ರೂಪಾಯಿ ಮೊತ್ತದ ಅಪಘಾತ ವಿಮೆ ಯೋಜನೆ ಜಾರಿಗೆ ತಂದಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕೊಟ್ಟ ಮಾತಿನಂತೆ ನಡೆದುಕೊಂಡಿದೆ.
ಇತ್ತೀಚೆಗೆ ಅಪಘಾತವೊಂದರಲ್ಲಿ ಮೃತಪಟ್ಟ ಚಾಲಕನ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ವಿಮೆ ನೆರವಿನ ಚೆಕ್ ಅನ್ನು ಸಾರಿಗೆ ಸಚಿವ ಶ್ರೀರಾಮಲು ಅವರು ಹಸ್ತಾಂತರ ಮಾಡಿದ್ದಾರೆ.
ಪೋದ ಚಾಲಕ ಕಂ ನಿರ್ವಾಹಕರಾಗಿದ್ದ J.S.ಉಮೇಶ್ ಇತ್ತೀಚೆಗೆ ಅಪಘಾತದಲ್ಲಿ ಮೃತ್ತಪಟ್ಟಿದ್ದರು. ಇನ್ಶೂರೆನ್ಸ್ ಕೋಟಾ ಮೂಲಕ ಒಂದು ಕೋಟಿ ರೂ. ಮತ್ತು ಕೆಎಸ್ಆರ್ಟಿಸಿ ನಿಗಮದಿಂದ ಪ್ರತ್ಯೇಕವಾಗಿ 13 ಲಕ್ಷ ರೂ. ಪರಿಹಾರವನ್ನು ಶಾಂತಿನಗರದ KSRTC ಕೇಂದ್ರ ಕಚೇರಿಯಲ್ಲಿ ಉಮೇಶ್ ಕುಟುಂಬವನ್ನ ಕರೆಸಿ ಚೆಕ್ ವಿತರಣೆ ಮಾಡಲಾಗಿದೆ.
ಇಂದು ಶಾಂತಿನಗರ KSRTCಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್, ಮತ್ತು ಎಸ್ಬಿಐ ಬ್ಯಾಂಕ್ನಿಂದ ನೆರವುವನ್ನು ಉಮೇಶ್ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ.