Thu,Sep11,2025
ಕನ್ನಡ / English

ದೇಹವನ್ನು ಅಗ್ನಿಗೆ ಅರ್ಪಿಸಿ, ಸ್ಮಾರಕ ಕಟ್ಟಬೇಡಿ: ಸಿದ್ದೇಶ್ವರ ಶ್ರೀಗಳ ಅಂತಿಮ ಅಭಿನಂದನಾ ಪತ್ರದಲ್ಲಿ ಏನಿದೆ? | JANATA NEWS

03 Jan 2023

ವಿಜಯಪುರ : ನಡೆದಾಡುವ ದೇವರೆಂದೇ ಖ್ಯಾತರಾದ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ವಯೋಸಹಜ ಅನಾರೋಗ್ಯದ ಕಾರಣದಿಂದ ನಿನ್ನೆ ಸಂಜೆ ದೈವಾಧೀನರಾಗಿದ್ದಾರೆ.

ನಾಡಿನ ಪ್ರಸಿದ್ಧ ಪ್ರವಚನಕಾರ, ಭಕ್ತರ ಮನದಲ್ಲಿ ನಡೆದಾಡುವ ದೇವರೆಂದೇ ಖ್ಯಾತಿ ಗಳಿಸಿದ್ದ ವಿಜಯಪುರದ ಸಿದ್ದೇಶ್ವರ ಶ್ರೀಗಳು ರಚಿಸಿದ್ದ ಅಂತಿಮ ಅಭಿವಂದನ ಪತ್ರ ಇಲ್ಲಿದೆ.

ಮುಖ್ಯವಾಗಿ ನನ್ನ ಯಾವುದೇ ಬಗೆಯ ಸ್ಮಾರಕ ನಿರ್ಮಾಣ ಮಾಡಬಾರದೆಂದು 2014ರಲ್ಲೇ ವಿಲ್ ಬರೆದಿದ್ದರು. ಈ ಪತ್ರಕ್ಕೆ ನ್ಯಾಯಾಧೀಶರು ಸಹಿ ಹಾಕಿದ್ದಾರೆ. ನಿನ್ನೆ ವೈಕುಂಠ ಏಕಾದಶಿ ದಿನವಾಗಿದ್ದು ಸ್ವರ್ಗದ ಎಲ್ಲ ಬಾಗಿಲುಗಳು ತೆರೆದಿರುತ್ತವೆ ಎಂದು ಹಿಂದೂ ಪೌರಾಣಿಕ ನಂಬಿಕೆ. ಸಿದ್ದೇಶ್ವರ ಶ್ರೀಗಳು ಇಂಥ ವಿಶೇಷ ದಿನದಂದೇ ಇಹಲೋಕ ತ್ಯಜಿಸಿದ್ದಾರೆ. ಇವರು ಅಂತಿಮ ಅಭಿವಂದನ ಪತ್ರದ ಸಾಲುಗಳು ಹೀಗಿವೆ..

ಬದುಕು ಅನುಭವಗಳ ಪ್ರವಾಹ. ಅದರ ಸಿರಿವಂತಿಕೆಯು ವಿಶ್ವ ಚಿಂತನೆ ಹಾಗೂ ಸತ್ಯ ಶೋಧನೆಗಳಿಂದ ಅದರ ಸೌಂದರ್ಯವು ರಾಗ, ದ್ವೇಷ ರಹಿತವಾದ ಹಾಗೂ ಅಸೀಮಿತವಾದ ಸದ್ಭಾವದಿಂದ. ಅದನ್ನು ಸುಭಗ ಹಾಗೂ ಸಮೃದ್ಧಗೊಳಿಸುವುದೇ ಸಾಧನೆ. ಅಂತಹ ಜೀವನದ ಉಪಯುಕ್ತವಾದ ಅನುಭವಗಳನ್ನು ಆಸಕ್ತರೊಂದಿಗೆ ಹಂಚಿಕೊಳ್ಳುವುದೇ ಧರ್ಮ. ಅದು ಸ್ವ-ಪರ ನೆಮ್ಮದಿಗೆ ಕಾರಣ. ನನ್ನದು ಆವೇಗವಿಲ್ಲದ, ಸಾವಧಾನದ ಸಾಮಾನ್ಯ ಬದುಕು. ಅದನ್ನು ರೂಪಿಸಿದವರು ಗುರುದೇವರು.

ಅದನ್ನು ಹದುಳಿಸಿದವರು ನಾಡಿನ ಪೂಜ್ಯರು, ಹಿತೈಷಿಗಳು, ಸಹ- ಹೃದಯರು, ಸಾಧಕರು ಹಾಗೂ ಶ್ರೀ ಸಾಮಾನ್ಯರು. ನಿಸರ್ಗವು ಮೈಮನಸ್ಸುಗಳಿಗೆ ತಂಪನ್ನಿತ್ತಿದೆ. ತಾತ್ವಿಕ ಚಿಂತನೆಗಳು ತಿಳಿ ಬೆಳಗ ಹರಡಿವೆ. ಜಾಗತಿಕ ತತ್ವಜ್ಞಾನಿಗಳ ಮತ್ತು ವಿಜ್ಞಾನಿಗಳ ಶೋಧನೆಗಳು ದೃಷ್ಠಿಯ ಪರಿಸೀಮೆಯನ್ನು ದೂರ ದೂರ ಸರಿಸಿವೆ. ಆದ್ದರಿಂದಲೇ ನಾನು ಎಲ್ಲರಿಗೂ ಎಲ್ಲದಕ್ಕೂ ಉಪಕೃತ. ಬದುಕು ಮುಗಿಯುತ್ತಿದೆ. ದೀಪ ಆರಿದಂತೆ. ತೆರೆ ಅಡಗಿದಂತೆ. ಮೇಘ ಕರಗಿದಂತೆ. ಉಳಿಯುವುದು ಬರೀ ಬಯಲು. ಮಹಾಮೌನ, ಶೂನ್ಯ ಸತ್ಯ. ಹಲವು ದಶಕಗಳ ಕಾಲ ಈ ಅದ್ಭುತ ಜಗತ್ತಿನಲ್ಲಿ ಬಾಳಿದ್ದೇನೆ. ನೋಡಿ ತಿಳಿದು ಅನುಭವಿಸಿದ್ದೇನೆ. ನನ್ನ ಬದುಕು ಕೊನೆಗೊಳ್ಳುವ ಮುಂಚೆ ಅದನ್ನು ಕೃತಜ್ಞತೆಯಿಂದ ಸ್ಮರಿಸಬೇಕು. ಅದಕ್ಕಾಗಿ ಈ ಅಂತಿಮ ಅಭಿವಂದನ ಪತ್ರ.

ದೇಹದ ವಿಷಯದಲ್ಲಿ ಒಂದೆರಡು ಆಶಯಗಳು -
ದೇಹವನ್ನು ಭೂಮಿಯಲ್ಲಿಡುವ ಬದಲು ಅಗ್ನಿಯರ್ಪಿತ ಮಾಡುವುದು. ಶ್ರಾದ್ಧಿಕ ವಿಧಿ-ವಿಧಾನಕರ್ಮಗಳು ಅನಗತ್ಯ. ಚಿತಾಭಸ್ಮವನ್ನು ನದಿ ಅಥವಾ ಸಾಗರದಲ್ಲಿ ವಿಸರ್ಜಿಸುವುದು. ಯಾವುದೇ ಬಗೆಯ ಸ್ಮಾರಕ ನಿರ್ಮಿಸಲಾಗದು.

ಅಂತಿಮ ನೆನಹು; "ಸತ್ಯವೂ ಇಲ್ಲ, ಅಸತ್ಯವೂ ಇಲ್ಲ. ಸಹಜವೂ ಇಲ್ಲ, ಅಸಹಜವೂ ಇಲ್ಲ. ನಾನೂ ಇಲ್ಲ, ನೀನೂ ಇಲ್ಲ. ಇಲ್ಲ, ಇಲ್ಲ ಎಂಬುದು ತಾನಿಲ್ಲ. ಗುಹೇಶ್ವರನೆಂಬುದು ತಾ ಬಯಲು". ಅಂತ್ಯಃ ಪ್ರಣಾಮಾಂಜಲಿಃ! ಎಂದು ಅಭಿವಂದನಾ ಪತ್ರವನ್ನು ಶ್ರೀಗಳು ಬರೆದಿದ್ದಾರೆ.

RELATED TOPICS:
English summary :Offer the body to fire, do not build a monument: What is in Siddeshwar Sri final eulogy?

ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಅಕ್ರಮ ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ವಂಚಿಸಿದ ಪ್ರಕರಣ : ಇಡಿ ದಾಳಿಯಲ್ಲಿ ರೂ.100 ಕೋಟಿ ಚಿನ್ನ ಬೆಳ್ಳಿ ವಶ
ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಅಕ್ರಮ ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ವಂಚಿಸಿದ ಪ್ರಕರಣ : ಇಡಿ ದಾಳಿಯಲ್ಲಿ ರೂ.100 ಕೋಟಿ ಚಿನ್ನ ಬೆಳ್ಳಿ ವಶ
ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಗೆಲವು
ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಗೆಲವು
ನೇಪಾಳದಲ್ಲಿ ಕಮ್ಯುನಿಸ್ಟ್ ಪಕ್ಷದ ಸರ್ಕಾರದ ಪತನದ ಬಳಿಕವೂ ಸಂಸತ್ತು, ಸುಪ್ರೀಂ ಕೋರ್ಟ್ ಮೇಲೆ ದಾಳಿ ನಡೆಸಿದ ಪ್ರತಿಭಟನಾಕಾರರು :
ನೇಪಾಳದಲ್ಲಿ ಕಮ್ಯುನಿಸ್ಟ್ ಪಕ್ಷದ ಸರ್ಕಾರದ ಪತನದ ಬಳಿಕವೂ ಸಂಸತ್ತು, ಸುಪ್ರೀಂ ಕೋರ್ಟ್ ಮೇಲೆ ದಾಳಿ ನಡೆಸಿದ ಪ್ರತಿಭಟನಾಕಾರರು :
ನಿಮ್ಮ ನಡವಳಿಕೆಯು ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ದುರಹಂಕಾರ ಮತ್ತು ಅಹಂಕಾರಕ್ಕೆ ಸಾಕ್ಷಿಯಾಗಿದೆ - ಖರ್ಗೆ ರನ್ನು ತರಾಟೆಗೆ ತೆಗೆದುಕೊಂಡ ಎಚ್‌ಡಿಕೆ
ನಿಮ್ಮ ನಡವಳಿಕೆಯು ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ದುರಹಂಕಾರ ಮತ್ತು ಅಹಂಕಾರಕ್ಕೆ ಸಾಕ್ಷಿಯಾಗಿದೆ - ಖರ್ಗೆ ರನ್ನು ತರಾಟೆಗೆ ತೆಗೆದುಕೊಂಡ ಎಚ್‌ಡಿಕೆ
ಶ್ರೀ ನಾರಾಯಣ ಗುರುಗಳ ಜನ್ಮ ದಿನಾಚರಣೆಯಂದು  ಅವರ ದೃಷ್ಟಿಕೋನ, ಪ್ರಭಾವ ಸ್ಮರಿಸಿದ ಪ್ರಧಾನಿ ಮೋದಿ
ಶ್ರೀ ನಾರಾಯಣ ಗುರುಗಳ ಜನ್ಮ ದಿನಾಚರಣೆಯಂದು ಅವರ ದೃಷ್ಟಿಕೋನ, ಪ್ರಭಾವ ಸ್ಮರಿಸಿದ ಪ್ರಧಾನಿ ಮೋದಿ
ಭಾರತ-ಅಮೆರಿಕ ನಡುವೆ ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವ ಬಹಳ ಸಕಾರಾತ್ಮಕವಾಗಿದೆ - ಪ್ರಧಾನಿ ಮೋದಿ
ಭಾರತ-ಅಮೆರಿಕ ನಡುವೆ ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವ ಬಹಳ ಸಕಾರಾತ್ಮಕವಾಗಿದೆ - ಪ್ರಧಾನಿ ಮೋದಿ
ಭಾರತೀಯ ಪೌರತ್ವ ಪಡೆಯುವ ಮೂರು ವರ್ಷಗಳ ಮೊದಲೇ ಮತ ಚಲಾವಣೆ : ಸೋನಿಯಾ ಗಾಂಧಿ ವಿರುದ್ಧ ಕ್ರಿಮಿನಲ್ ದೂರು
ಭಾರತೀಯ ಪೌರತ್ವ ಪಡೆಯುವ ಮೂರು ವರ್ಷಗಳ ಮೊದಲೇ ಮತ ಚಲಾವಣೆ : ಸೋನಿಯಾ ಗಾಂಧಿ ವಿರುದ್ಧ ಕ್ರಿಮಿನಲ್ ದೂರು
11
11
ಭಾರತವನ್ನು ಹೆಸರಿಸುವಾಗ ಹೆಚ್ಚು ಗೌರವಯುತ ವಿಧಾನ ಬಳಸಲು ಅಮೆರಿಕಕ್ಕೆ ನಿರ್ದೇಶಿಸಿದ ಫಿನ್ಲ್ಯಾಂಡ್ ಅಧ್ಯಕ್ಷ
ಭಾರತವನ್ನು ಹೆಸರಿಸುವಾಗ ಹೆಚ್ಚು ಗೌರವಯುತ ವಿಧಾನ ಬಳಸಲು ಅಮೆರಿಕಕ್ಕೆ ನಿರ್ದೇಶಿಸಿದ ಫಿನ್ಲ್ಯಾಂಡ್ ಅಧ್ಯಕ್ಷ
2 ಮತದಾರರ ಗುರುತಿನ ಚೀಟಿಹೊಂದಿದಕ್ಕಾಗಿ ಕಾಂಗ್ರೆಸ್ ವಕ್ತಾರ ಪವನ್ ಖೇರಾಗೆ ಚುನಾವಣಾ ಕಚೇರಿಯ ನೋಟಿಸ್
2 ಮತದಾರರ ಗುರುತಿನ ಚೀಟಿಹೊಂದಿದಕ್ಕಾಗಿ ಕಾಂಗ್ರೆಸ್ ವಕ್ತಾರ ಪವನ್ ಖೇರಾಗೆ ಚುನಾವಣಾ ಕಚೇರಿಯ ನೋಟಿಸ್
ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲದ ನನ್ನ ತಾಯಿ ವಿರುದ್ಧ ಅನುಚಿತ ಭಾಷೆಯನ್ನು ಏಕೆ ಬಳಸಿದ್ದಾರೆ? - ಪ್ರಧಾನಿ ಮೋದಿ
ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲದ ನನ್ನ ತಾಯಿ ವಿರುದ್ಧ ಅನುಚಿತ ಭಾಷೆಯನ್ನು ಏಕೆ ಬಳಸಿದ್ದಾರೆ? - ಪ್ರಧಾನಿ ಮೋದಿ
ಸೆಮಿಕಾನ್ ಇಂಡಿಯಾ 2025 : ವಿಕ್ರಮ್ 32-ಬಿಟ್ ಪ್ರೊಸೆಸರ್  ಸೆಮಿಕಂಡಕ್ಟರ್ ಚಿಪ್ ಬಿಡುಗಡೆ ಮಾಡಿದ ಪ್ರಧಾನಿ ಮೋದಿ
ಸೆಮಿಕಾನ್ ಇಂಡಿಯಾ 2025 : ವಿಕ್ರಮ್ 32-ಬಿಟ್ ಪ್ರೊಸೆಸರ್ ಸೆಮಿಕಂಡಕ್ಟರ್ ಚಿಪ್ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

ನ್ಯೂಸ್ MORE NEWS...