ಖೋಟಾ ನೋಟು ಪತ್ತೆ, ಆರೋಪಿಯಿಂದ ನಕಲಿ ನೋಟು ವಶಕ್ಕೆ, ಇಬ್ಬರ ಬಂಧನ | JANATA NEWS

ಮಂಗಳೂರು : ಮಂಗಳೂರಿನಲ್ಲಿ ಖೋಟಾ ನೋಟು ಪತ್ತೆ ಯಾಗಿದ್ದು ಅವರಿಂದ 500 ರೂ. ಮುಖ ಬೆಲೆಯ 4.5ಲಕ್ಷ ಖೋಟ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ ಸಿ ರೋಡ್ ನ ನಿಜಾಮುದ್ದೀನ್ ಯಾನೆ ನಿಜಾಂ (32) ಮತ್ತು ನಗರದ ಜೆಪ್ಪುವಿನ ರಜೀಮ್ ಯಾನೆ ರಾಫಿ (31) ಬಂಧಿತ ಆರೋಪಿಗಳು.
ಜನವರಿ 2 ರಂದು ಈ ಆರೋಪಿಗಳು ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸ್ಕೂಟರ್ ವೊಂದನ್ನು ಸುಲಿಗೆ ಮಾಡಿದ್ದರು. ಸಂಜೆ ಈ ಸ್ಕೂಟರ್ನಲ್ಲಿ ಆರೋಪಿಗಳು ಖೋಟಾ ನೋಟು ಸಾಗಿಸುತ್ತಿದ್ದರು. ಇವರಿಂದ 500 ರೂ. ಮುಖಬೆಲೆಯ ಒಟ್ಟು ರೂ 450,000 ನಕಲಿ ನೋಟನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಆರೋಪಿಗಳು ಬೆಂಗಳೂರಿನ ಡ್ಯಾನಿಯಲ್ ಎಂಬಾತನಿಂದ ಈ ನಕಲಿ ನೋಟುಗಳನ್ನು ಪಡೆದುಕೊಂಡು ಮಂಗಳೂರಿನಲ್ಲಿ ಸಾಗಿಸುತ್ತಿದ್ದರು.. ಜ. 2ರಂದು ಮಂಗಳೂರು ನಗರದ ನಂತೂರು ಬಳಿ ವಾಹನಗಳನ್ನು ತಪಾಸಣೆ ಮಾಡುತ್ತಿರುವ ಸಮಯ, ನಂತೂರು ಕಡೆಯಿಂದ ಬಂದ, ಒಂದು ಸ್ಕೂಟರ್ ನಲ್ಲಿ ಇಬ್ಬರು ಸದಾರರು ಸಮವಸ್ತ್ರದಲ್ಲಿದ್ದ ಪೊಲೀಸರನ್ನು ಕಂಡು, ಅತೀ ವೇಗವಾಗಿ ಚಲಾಯಿಸಿ ಪೊಲೀಸರಿಂದ ತಪ್ಪಿಕೊಳ್ಳಲು ಪ್ರಯತ್ನಿಸಿದ್ದರು. ಆಗ ಮಂಗಳೂರು ಪೂರ್ವ ಠಾಣೆಯ ಪೊಲೀಸರು ತಡೆದು ಪರಿಶೀಲಿಸಿ. ಅವರ ವಶದಲ್ಲಿದ್ದ ರೂ. 500 ಮುಖಬೆಲೆಯ ರೂ. 4,50,000/- ಖೋಟಾ ನೋಟುಗಳನ್ನು ಪತ್ತೆ ಹಚ್ಚಿ, ವಶಪಡಿಸಿಕೊಂಡಿದ್ದಾರೆ.