Fri,Mar31,2023
ಕನ್ನಡ / English

ರಾಜಕೀಯದಿಂದ ನಿವೃತ್ತಿ ಪಡೆಯುತ್ತಿದ್ದೇನೆ: ಎಸ್ ಎಂ ಕೃಷ್ಣ | JANATA NEWS

04 Jan 2023
465

ಬೆಂಗಳೂರು : ಎಸ್ಎಂ ಕೃಷ್ಣ ಸಕ್ರಿಯ ರಾಜಕಾರಣಕ್ಕೆ ಗುಡ್ ಬೈ ಹೇಳಿದ್ದಾರೆ. ಸಕ್ರಿಯ ರಾಜಕಾರಣದಿಂದ ನಾನು ದೂರ ಸರಿಯುತ್ತಿದ್ದೇನೆ ಎಂದಿದ್ದಾರೆ.

ಬಿಜೆಪಿ ಹಳೆ ಮೈಸೂರು ವಿಭಾಗದ ಕಡೆ ಪಕ್ಷ ಸಂಘಟನೆ ಮುಂದಾದಾಗ ನಿಮ್ಮನ್ನು ಕರೆದಿಲ್ಲ ಎಂಬ ಕಾರಣಕ್ಕೆ ನಿಮ್ಮನ್ನು ಕಡೆಗಣಿಸಲಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ ಎಂದು ಪ್ರಶಿಸಿದಾಗ, ನಾನೇ ರಿಟೈರ್ ಆಗುವಾಗ ಭಾರತೀಯ ಜನತಾ ಪಕ್ಷ ನನ್ನನ್ನು ಕಡೆಗಣಿಸಿದೆ ಎಂಬ ಪ್ರಶ್ನೆ ಬರಲ್ಲ. ನಾನು ವಯಸ್ಸಿಗೆ ಗೌರವ ಕೊಟ್ಟು ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದೇನೆ. ನನಗಿಂತ ಅಲ್ಲಿ ಸಕ್ರಿಯವಾಗಿ ರಾಜಕೀಯ ಮಾಡುತ್ತಿರುವವರು ಮತ್ತು ಪಕ್ಷ ಸಂಘಟನೆ ಮಾಡುವವರ ಅಗತ್ಯ ಎಂದು ಹೇಳಿದ್ದಾರೆ.

ಈ ವಿಚಾರವನ್ನು ಹೈಕಮಾಂಡ್​ ಗಮನಕ್ಕೆ ತಂದಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕೀಯದಲ್ಲಿ ಯಾರೂ ಪಿಂಚಣಿ ನೀಡುವುದಿಲ್ಲ. ಹಾಗಾಗಿ ಹೈಕಮಾಂಡ್ ಗಮನಕ್ಕೆ ತರುವ ಅವಶ್ಯಕತೆಯೇ ಇಲ್ಲ ಎಂದು ಹೇಳಿದರು.

ಸಕ್ರಿಯ ರಾಜಕಾರಣದಿಂದ ನಾನು ದೂರ ಸರಿಯುತ್ತಿದ್ದೇನೆ. ನಮ್ಮ ವಯಸ್ಸಿನ ಬಗ್ಗೆ ಅರಿವಿರಬೇಕು. 90 ರಲ್ಲಿ 50 ರ ತರಹ ನಟನೆ ಮಾಡಲು ಆಗಲ್ಲ. ಸಾರ್ವಜನಿಕ ಜೀವನದಿಂದ ದೂರ ಇರಬೇಕು ಅಂತ ತೀರ್ಮಾನ ಮಾಡಿದ್ದೇನೆ. ಹಾಗಾಗಿಯೇ ನಾನು ಎಲ್ಲೂ ಈಗ ಸಾರ್ವಜನಿಕ ವಾಗಿ ಕಾಣಿಸಿಕೊಳ್ಳುತ್ತಿಲ್ಲ ಎಂದು ಹೇಳಿದರು.

ಮೀಸಲಾತಿ ವಿಚಾರವಾಗಿ ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದಾಗ, ನನ್ನಲ್ಲಿ ಇದುವರೆಗೂ ಯಾರು ಈ ಬಗ್ಗೆ ಕೇಳಿಲ್ಲ. ಕೇಳಿದಾಗ ಸೂಕ್ತ ಸಲಹೆ ನೀಡ ಬಯಸುತ್ತೇನೆ. ಸಲಹೆ ಎಲ್ಲಿ ನೀಡುವುದು ಸೂಕ್ತವೋ ಅಲ್ಲಿ ಕೊಡಲು ಬಯಸುತ್ತೇನೆ. ನಾನಾಗಿಯೇ ಮೇಲೆ ಬಿದ್ದು ಸಲಹೆಯನ್ನು ಯಾರಿಗೂ ನೀಡುವುದಿಲ್ಲ. ನನ್ನ ಅಭಿಪ್ರಾಯ ಕೇಳಿದಲ್ಲಿ ನೋಡೋಣ ಎಂದು ಹೇಳಿದರು.

RELATED TOPICS:
English summary :Retiring from politics: SM Krishna

ಸಿದ್ದರಾಮಯ್ಯ ಕುರಿತು ಸಿನಿಮಾ, ಪೋಸ್ಟರ್ ಔಟ್
ಸಿದ್ದರಾಮಯ್ಯ ಕುರಿತು ಸಿನಿಮಾ, ಪೋಸ್ಟರ್ ಔಟ್
ಮಚ್ಚು ಹಿಡಿದು ಪತ್ನಿಯ ಕೊಲೆಗೆ ಯತ್ನಿಸಿದ ಕುಡುಕ ಗಂಡ
ಮಚ್ಚು ಹಿಡಿದು ಪತ್ನಿಯ ಕೊಲೆಗೆ ಯತ್ನಿಸಿದ ಕುಡುಕ ಗಂಡ
ರಸ್ತೆ ದಾಟುವಾಗ ಖಾಸಗಿ ಬಸ್ ಡಿಕ್ಕಿ ಹೊಡೆದು ಮಹಿಳೆ ಸಾವು
ರಸ್ತೆ ದಾಟುವಾಗ ಖಾಸಗಿ ಬಸ್ ಡಿಕ್ಕಿ ಹೊಡೆದು ಮಹಿಳೆ ಸಾವು
ವರುಣಾದಲ್ಲೂ ಸಿದ್ದರಾಮಯ್ಯ ಗೆಲುವು ಅಷ್ಟು ಸುಲಭವಲ್ಲ : ಬಿ.ಎಸ್.ಯಡಿಯೂರಪ್ಪ
ವರುಣಾದಲ್ಲೂ ಸಿದ್ದರಾಮಯ್ಯ ಗೆಲುವು ಅಷ್ಟು ಸುಲಭವಲ್ಲ : ಬಿ.ಎಸ್.ಯಡಿಯೂರಪ್ಪ
ನಂದಿನಿ ಮೊಸರು ಪಾಕೆಟ್ ಮೇಲೆ ದಹಿ ಪದ: ಇದು ಕನ್ನಡಿಗರ ಮೇಲೆ ಬಿಜೆಪಿಯ ದಮ್ಮು ತಾಕತ್ತಿನ ಪ್ರದರ್ಶನವೇ?
ನಂದಿನಿ ಮೊಸರು ಪಾಕೆಟ್ ಮೇಲೆ ದಹಿ ಪದ: ಇದು ಕನ್ನಡಿಗರ ಮೇಲೆ ಬಿಜೆಪಿಯ ದಮ್ಮು ತಾಕತ್ತಿನ ಪ್ರದರ್ಶನವೇ?
ದೈವನರ್ತನ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ದೈವ ನರ್ತಕ‌ ಸಾವು
ದೈವನರ್ತನ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ದೈವ ನರ್ತಕ‌ ಸಾವು
ಮುಸ್ಲಿಂ ಸಮುದಾಯಕ್ಕೆ ನಾವು ಅನ್ಯಾಯ ಮಾಡಿಲ್ಲ: ಬಿಎಸ್​ ಯಡಿಯೂರಪ್ಪ
ಮುಸ್ಲಿಂ ಸಮುದಾಯಕ್ಕೆ ನಾವು ಅನ್ಯಾಯ ಮಾಡಿಲ್ಲ: ಬಿಎಸ್​ ಯಡಿಯೂರಪ್ಪ
ಮಧ್ಯಾಹ್ನದ ಬಿಸಿ ಊಟ ಸೇವಿಸಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಅಸ್ವಸ್ಥ
ಮಧ್ಯಾಹ್ನದ ಬಿಸಿ ಊಟ ಸೇವಿಸಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಅಸ್ವಸ್ಥ
ನವಜಾತ ಶಿಶುವನ್ನು ದೇವಾಲಯದ ‌ಬಳಿ ಬಿಟ್ಟು ಹೋದ ಪಾಪಿಗಳು!
ನವಜಾತ ಶಿಶುವನ್ನು ದೇವಾಲಯದ ‌ಬಳಿ ಬಿಟ್ಟು ಹೋದ ಪಾಪಿಗಳು!
ಕಳೆದ ಬಾರಿಯಂತೆ ಈ ಬಾರಿಯೂ ಜೆಡಿಎಸ್​-ಬಿಜೆಪಿ ಮ್ಯಾಚ್​ ಫಿಕ್ಸಿಂಗ್
ಕಳೆದ ಬಾರಿಯಂತೆ ಈ ಬಾರಿಯೂ ಜೆಡಿಎಸ್​-ಬಿಜೆಪಿ ಮ್ಯಾಚ್​ ಫಿಕ್ಸಿಂಗ್
ಮೇ 10 ಮತದಾನದ ದಿನ ಅಲ್ಲ, ಭ್ರಷ್ಟಾಚಾರ ತೆಗೆದುಹಾಕುವ ದಿನ: ಡಿ ಕೆ ಶಿವಕುಮಾರ್​
ಮೇ 10 ಮತದಾನದ ದಿನ ಅಲ್ಲ, ಭ್ರಷ್ಟಾಚಾರ ತೆಗೆದುಹಾಕುವ ದಿನ: ಡಿ ಕೆ ಶಿವಕುಮಾರ್​
ಚುನಾವಣೆ ಘೋಷಣೆ ಬೆನ್ನಲ್ಲೇ ನೀತಿ ಸಂಹಿತೆ ಉಲ್ಲಂಘನೆ!
ಚುನಾವಣೆ ಘೋಷಣೆ ಬೆನ್ನಲ್ಲೇ ನೀತಿ ಸಂಹಿತೆ ಉಲ್ಲಂಘನೆ!

ನ್ಯೂಸ್ MORE NEWS...