ನಾಯಿ ರೀತಿ ಧೈರ್ಯದಿಂದ ಕೇಂದ್ರದಿಂದ ಪಾಲು ತೆಗೆದುಕೊಳ್ಳಬೇಕು: ವಿವಾದಾತ್ಮಕ ಹೇಳಿಕೆಗೆ ಸಿದ್ದರಾಮಯ್ಯ ಸ್ಪಷ್ಟನೆ | JANATA NEWS

ಮಂಗಳೂರು : ನಾನು ಸದುದ್ದೇಶದಿಂದ ಹೇಳಿದ್ದೇನೆ. ರಾಜ್ಯದ ಹಿತದೃಷ್ಟಿಯಿಂದ ಧೈರ್ಯ ತೋರಿಸಬೇಕೆಂದು ಹೇಳಿದ್ದೇನೆ. ಕೇಂದ್ರ ಸರ್ಕಾರದಿಂದ ಅನುದಾನ ಸರಿಯಾಗಿ ಬಂದಿಲ್ಲ. ಅನುದಾನ ಎಲ್ಲಾ ಕಡಿಮೆಯಾಗಿದೆ. ಆ ಅರ್ಥದಲ್ಲಿ ಹೇಳಿದ್ದೇನೆಯೇ ಹೊರತು ಬೇರೆ ಕಾರಣಕ್ಕೆ ಅಲ್ಲ ಎಂದು ಸ್ಪಷ್ಟಪಡಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದಲ್ಲಿರುವ ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಇಂದು ಕುದ್ರೋಳಿ ಗೋಕರ್ಣನಾಥ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು.
ಬಳಿಕ ಮಾತನಾಡಿದ ಅವರು, ”ನಾನು ನಾಯಿ ಮರಿ ಅಂತ ನಾನು ಹೇಳಿಲ್ಲ.ಧೈರ್ಯ ಇರಬೇಕು.ರಾಜ್ಯದ ಹಿತ ಬಹಳ ಮುಖ್ಯ. ಕೇಂದ್ರ ಸರ್ಕಾರದಿಂದ ಅನುದಾನ ತರುವಲ್ಲಿ ಅವರು ಧೈರ್ಯ ತೋರಬೇಕು.ನಾಯಿ ಮರಿ ತರ ಇರಬಾರದು ಅಂತ ಹೇಳಿದ್ದೆ ಅಷ್ಟೇ. ಅದು ಅಸಂಸದೀಯ ಪದ ಅಲ್ಲ. ನನಗೆ ಟಗರು, ಹುಲಿಯ ಅಂತ ಕರೆಯುತ್ತಾರೆ. ಯಡಿಯೂರಪ್ಪ ಅವರಿಗೆ ರಾಜಾ ಹುಲಿ ಅಂತ ಅವರ ಪಕ್ಷದವರೇ ಕರೆಯುತ್ತಾರೆ. ಹಾಗಾದರೆ ಯಡಿಯೂರಪ್ಪ ಅವರು ಹುಲಿನಾ” ಎಂದು ಪ್ರಶ್ನಿಸಿದರು.
ಧೈರ್ಯವಾಗಿ ಇರಬೇಕು ಅಂತಾ ಹೇಳಿದ್ದೇನೆಯೇ ಹೊರತು ನಾಯಿ ಮರಿ ಅಂತಾ ಅಲ್ಲ. ನನ್ನನ್ನು ಟಗರು, ಹುಲಿಯಾ ಅಂತಾ ಕರೆಯುತ್ತಾರೆ. ಅದು ಅಸಂವಿಧಾನ ಪದ ಹೇಗೆ ಆಗುತ್ತದೆ. ಯಡಿಯೂರಪ್ಪ ಅವರನ್ನು ರಾಜಾಹುಲಿ ಅಂತಾ ಅವರ ಪಕ್ಷದವರೇ ಕರೆಯುತ್ತಾರೆ. ಹಾಗಾದರೆ ಯಡಿಯೂರಪ್ಪ ಹುಲಿನಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ನಾಯಿ ನಂಬಿಕೆಗಸ್ಥ ಪ್ರಾಣಿ. ನಾಯಿ ರೀತಿ ಧೈರ್ಯದಿಂದ ಕೇಂದ್ರದಿಂದ ಪಾಲು ತೆಗೆದುಕೊಳ್ಳಬೇಕು ಎಂದು ಹೇಳಿದ್ದೇನೆ ಅಂತ ಸ್ಪಷ್ಟನೆ ನೀಡಿದರು.
ಮಂಗಳೂರಿನ ಕುದ್ರೋಳಿಯ ಶ್ರೀ ಗೋಕರ್ಣನಾಥೇಶ್ವರ ಸ್ವಾಮಿ ದೇವಾಲಯಕ್ಕೆ ಇಂದು ಭೇಟಿ ನೀಡಿ ಪೂಜೆ ಸಲ್ಲಿಸಿ, ನಾಡಿನ ಕಲ್ಯಾಣಕ್ಕಾಗಿ ಪ್ರಾರ್ಥಿಸಿದೆ.
— Siddaramaiah (@siddaramaiah) January 5, 2023
ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಯು.ಟಿ. ಖಾದರ್ ಮತ್ತಿತರ ನಾಯಕರು ಈ ವೇಳೆ ನನ್ನೊಂದಿಗಿದ್ದರು. pic.twitter.com/TqhvQqWWt7