ಫಿಂಗರ್ ಪ್ರಿಂಟ್ ಕ್ಲ್ಯೂನಲ್ಲಿ ತಗಲಾಕಿಕೊಂಡ ಕುಖ್ಯಾತ ಮನೆ ಕಳ್ಳರ ಗ್ಯಾಂಗ್ | JANATA NEWS

ಬೆಂಗಳೂರು : ಕುಖ್ಯಾತ ಮನೆ ಕಳ್ಳರನ್ನು ಬಾಣಸವಾಡಿ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಭರತ್ ದಾಮಿ, ಮಂಗಲ್ ಸಿಂಗ್, ಕುಬೇರ ಬಹದ್ದೂರ್ ದಾಮಿ ಬಂಧಿತ ಆರೋಪಿಗಳು. 5 ವರ್ಷ ಹಳೆಯ ಖತರ್ನಾಕ್ ಮನೆಗಳ್ಳತನದ ಗ್ಯಾಂಗ್, 15 ವರ್ಷದಿಂದ ಹೆಸರು ಬದಲಿಸಿಕೊಂಡು ಬೆಂಗಳೂರಿನಲ್ಲಿ ಆಕ್ಟೀವ್ ಆಗಿತ್ತು
ಬೆಂಗಳೂರಿನಲ್ಲಿ ಮನೆಯಲ್ಲಿದ್ದ ಚಿನ್ನಾಭರಣವನ್ನು ದೋಚಿ ಬಳಿಕ ನೇಪಾಳಕ್ಕೆ ಹೋಗುತ್ತಿದ್ದರು. ನಂತರ ಹೆಸರು ಬದಲಿಸಿಕೊಂಡು ಮತ್ತೆ ವಾಪಾಸ್ ಆಗಿ ಅದೇ ಕೃತ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಇನ್ನು ಈ ಎಂಸಿಟಿಎನ್‌ಎಸ್ ಆಯಪ್ ಮೂಲಕ ಆರೋಪಿಗಳ ಪತ್ತೆ ಹಚ್ಚಲಾಗಿದೆ.
ಇತ್ತೀಚೆಗೆ ಬಾಣಸವಾಡಿ ಪೊಲೀಸ್ ಠಾಣೆಯ ಚಿನ್ನದಂಗಡಿಯೊಂದರಲ್ಲಿ ಕನ್ನ ಹಾಕಲು ಟೂಲ್ಸ್ ಸಮೇತ ರೆಡಿಯಾಗಿತ್ತು. ಇವರ ನಡೆ ನೋಡಿದ ನೈಟ್ ಬೀಟ್ ಪೊಲೀಸರು ಯಾರ್ರೊ ನೀವು ಅಂತಾ ಅನುಮಾನಪಟ್ಟು ವಿಚಾರಿಸಿದ್ದಾರೆ. ಬಳಿಕ ಎಂಸಿಟಿಎನ್‍ಎಸ್ ಆ್ಯಪ್ ಮುಖಾಂತರ ಆರೋಪಿಗಳ ಫಿಂಗರ್ ಫ್ರಿಂಟ್ ಪರಿಶೀಲಿಸಿದಾಗ, ಇವರು ಹಳೆಯ ಖತರ್ನಾಕ್ ಮನೆಗಳ್ಳರು ಅಂತಾ ಗೊತ್ತಾಗಿದೆ.
ಆರೋಪಿಗಳನ್ನ ಬಾಣಸವಾಡಿ ಪೊಲೀಸ್ ಅಧಿಕಾರಿಗಳು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.