ಮಲಗಿದ್ದಲ್ಲೆ ಮಹಿಳೆ ಸಜೀವ ದಹನ: ಸಾವಿನ ಸುತ್ತ ಅನುಮಾನದ ಹುತ್ತ | JANATA NEWS

ಮಂಡ್ಯ : ಮದ್ದೂರು ತಾಲೂಕಿನ ಮಾರಸಿಂಗನಹಳ್ಳಿ ಗ್ರಾಮದಲ್ಲಿ ಮಹಿಳೆಯೊಬ್ಬರು ಸಜೀವ ದಹನ ಆಗಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ.
ಪ್ರೇಮಾ(42) ಮೃತ ದುರ್ದೈವಿ. ಮನೆಯಲ್ಲಿ ಹಾಸಿಗೆ ಮೇಲೆ ಮಲಗಿದಲ್ಲೇ ಅವರು ಸುಟ್ಟು ಕರಕಲಾಗಿದ್ದಾರೆ.
ಇವರ ಪತಿ ಶಿವಕುಮಾರ್ ಆರಾಧ್ಯ ಕೆಲ ದಿನಗಳ ಹಿಂದೆಯೇ ಮೃತಪಟ್ಟಿದ್ದಾರೆ. ಪತಿ ನಿಧನದ ನಂತರ ಮಾರಸಿಂಗನಹಳ್ಳಿ ಗ್ರಾಮದಲ್ಲಿ ವ್ಯವಸಾಯ ಮಾಡಿಕೊಂಡು ಒಂಟಿಯಾಗಿ ಪ್ರೇಮಾ ಜೀವನ ನಡೆಸುತ್ತಿದ್ದರು.
ಪುತ್ರ ಬೆಂಗಳೂರಿನಲ್ಲಿ ವಾಸವಿದ್ದಾರೆ. ರಾತ್ರಿ ಮನೆಯಲ್ಲಿ ಪ್ರೇಮಾ ಒಬ್ಬರೇ ಮಲಗಿದ್ದರು. ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ದಟ್ಟ ಹೊಗೆ ಮನೆಯಿಂದ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬೆಸಗರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.