ಊಟದ ವಿಚಾರಕ್ಕೆ ಜಗಳ: ತಾಯಿ ಮಗ ಆತ್ಮಹತ್ಯೆ | JANATA NEWS

ರಾಮನಗರ : ಊಟದ ವಿಚಾರಕ್ಕೆ ಜಗಳವಾಗಿ ತಾಯಿ ಮಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮನಗರದ ಕುಮಾರಸ್ವಾಮಿ ಬಡಾವಣೆಯಲ್ಲಿ ಘಟನೆ.
ವಿಜಯಲಕ್ಷ್ಮಿ (45), ಹರ್ಷ (24) ಮೃತ ದುರ್ದೈವಿ. ತಡರಾತ್ರಿ ಊಟ ಹಾಕಿಕೊಡುವ ವಿಚಾರಕ್ಕೆ ತಾಯಿ ಮಗ ನಡುವೆ ಗಲಾಟೆ ನಡೆದಿದೆ.
ತಡರಾತ್ರಿ ಊಟ ಹಾಕಿಕೊಡುವ ವಿಚಾರಕ್ಕೆ ತಾಯಿ-ಮಗ ನಡುವೆ ಶರುವಾದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದೆ.
ಗಲಾಟೆಯಿಂದ ಬೇಸತ್ತ ತಾಯಿ ಮನೆ ಮುಂದಿನ ನೀರಿನ ಸಂಪಿಗೆ ಬಿದ್ದು ಮೃತಪಟ್ಟಿದ್ದಾರೆ. ತಾಯಿಯ ಸಾವಿಂದ ಕಂಗೆಟ್ಟ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಐಜೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಐಜೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
English summary :Fight over food: Mother and son commit suicide